Posts Tagged ‘timse of india’

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮಾ.18 ರಂದು ನಡೆಯಲಿದ್ದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಕಾರ್ಕಳದ ಮಾಜಿ ಶಾಸಕ ವಿ.ಸುನಿಲ್ ಕುಮಾರ್ ಗೆಲುವಿಗಾಗಿ ಉದಯವಾಣಿ ಪತ್ರಿಕೆಗೆ ಹಣ ಕೊಟ್ಟು ಬಿಜೆಪಿ ಪರವಾದ ಸುದ್ದಿ ಪ್ರಕಟವಾಗುವಂತೆ ಮಾಡಿದ (ಕಾಸಿಗಾಗಿ ಸುದ್ದಿ) ಬಿಜೆಪಿ ವಿರುದ್ದ ಕಾಂಗ್ರೆಸ್ ಪಕ್ಷ ಚುನಾವಣಾಧಿಕಾರಿಯವರಿಗೆ ಮಾ.14 ರಂದು ದೂರು ನೀಡಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರ ಚುನಾವಣಾ ಏಜೆಂಟ್ ಆಗಿರುವ ವಕೀಲ ವಿಜಯ ಹೆಗ್ಡೆ ಅವರು ಬುಧವಾರ ಸಂಜೆ ಚುನಾವಣಾ ಅಧಿಕಾರಿಗಳಾದ ಡಾ.ಎಂ.ಟಿ.ರೇಜು ಅವರನ್ನು ಭೇಟಿಯಾಗಿ ಬಿಜೆಪಿ ವಿರುದ್ದ ದೂರು ಸಲ್ಲಿಸಿದ್ದಾರೆ.
ವಾಸ್ತವವಾಗಿ ಕಾಂಗ್ರೆಸ್ ಪಕ್ಷ ಉದಯವಾಣಿ ಪತ್ರಿಕೆಯ ವಿರುದ್ದ ದೂರು ನೀಡಬೇಕಾಗಿತ್ತು. ಲಕ್ಷಾಂತರ ರು. ಹಣ ಪಡೆದುಕೊಂಡು ಜಾಹೀರಾತಿನ ಬದಲಾಗಿ ಬಿಜೆಪಿ ಪರವಾಗಿ ಸುದ್ದಿ ಪ್ರಕಟಿಸುವ ಮೂಲಕ ುದಯವಾಣಿ ಪತ್ರಿಕೆ ಅಪರಾಧ ಎಸಗಿತ್ತು.
ಈ ರೀತಿಯಾಗಿ ಹಣ ಪಡೆದು ಜಾಹೀರಾತಿನ ಬದಲು ಸುದ್ದಿ ರೂಪದಲ್ಲಿ ಒಂದು ಪಕ್ಷದ ಪರವಾಗಿ ಸುದ್ದಿ ಪ್ರಕಟಿಸುವ ಮೂಲಕ ಉದಯವಾಣಿ ದಿನ ಪತ್ರಿಕೆಯು ಓದುಗರಿಗೆ, ಚುನಾವಣಾ ಆಯೋಗಕ್ಕೆ, ಸರಕಾರಕ್ಕೆ, ಪತ್ರಿಕಾ ಕ್ಷೇತ್ರಕ್ಕೆ ಅಪಚಾರವೆಸಗಿತ್ತು.
ಆದರೆ, ಉದಯವಾಣಿ ವಿರುದ್ದ ದೂರು ನೀಡಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಉದಯವಾಣಿಯಲ್ಲಿ ತಮ್ಮ ಹೆಸರು, ಸುದ್ದಿ, ಫೋಟೋ ಯಾವುದೂ ಪ್ರಕಟವಾಗದೇ ಇರಬಹುದೆಂ ಭಯದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಯವರು ಬಿಜೆಪಿ ವಿರುದ್ದ ದೂರು ನೀಡಿ ಕೈತೊಳೆದುಕೊಂಡಿದ್ದಾರೆ. ವರದಿ: ಶ್ರೀರಾಮ ದಿವಾಣ.

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಮಾ.18 ರಂದು ನಡೆಯಲಿರುವ ಮರು ಚುನಾವಣೆಯ ಪ್ರಕ್ರೀಯೆಯಲ್ಲಿ ಒಂದೆರಡು ಪತ್ರಿಕೆಗಳು ಮತ್ತು ಒಂದೆರಡು ಖಾಸಗಿ ಟಿವಿ ಛಾನೆಲ್ ಗಳು ಪ್ರಮುಖ ರಾಜಕೀಯ ಪಕ್ಷಗಳಿಂದ ಜಾಹೀರಾತಿನ ಬದಲಾಗಿ ಕಾಸು ಪಡೆದು ಕಾಸು ಪಡೆದ ಪಕ್ಷಗಳ ಪರವಾಗಿ ಸುದ್ದಿಗಳನ್ನು ಪ್ರಕಟ ಮಾಡುವ ಪ್ರಕರಣ ಇಂದೂ ಮುಂದುವರಿದಿದೆ.
ಈ ಹಗರಣವನ್ನು www.udupibits.com ಮಾ.12 ರಂದು ವರದಿ ಮಾಡುವ ಮೂಲಕ ಬಹಿರಂಗಗೊಳಿಸಿತ್ತು. ಮಾ.13 ರ ಉದಯವಾಣಿಯಲ್ಲೂ ಒಂದು ವರದಿ ಪ್ರಕಟವಾಗಿದ್ದು, ಈ ವರದಿ ಕಾಸು ಪಡೆದು ಪ್ರಕಟಿಸಿದ ಸುದ್ದಿಯಾಗಿರಬಹುದೇ ಎಂಬ ಸಂಶಯ ಉದ್ಭವಿಸಿದೆ.
ಮಂಗಳವಾರದ ಉದಯವಾಣಿಯ 12 ನೇ ಪುಟದಲ್ಲಿ ಪ್ರಕಟವಾದ ‘ಡಾ.ಆಚಾರ್ಯರ ಅಭಿವೃದ್ದಿ ಕೊಡುಗೆಗಳೇ ಬಿಜೆಪಿಗೆ ಶ್ರೀರಕ್ಷೆ’ ಎಂಬ ವರದಿ ಸಂಪೂರ್ಣವಾಗಿ ಬಿಜೆಪಿ ಪರವಾಗಿದ್ದು, ಕಾಸಿಗಾಗಿ ಬರೆದ ವರದಿಯಂತಿದೆ ಎಂದು ಯಾರು ಬೇಕಾದರೂ ಹೇಳಬಹುದು.
ಇಂತಹ ಬಿಜೆಪಿ ಪರವಾದ ವರದಿಗಳು ಉದಯವಾಣಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಪ್ರಕಟವಾಗುತ್ತಿದೆ.
ನಿರ್ಧಿಷ್ಟವಾಗಿ ಸ್ಥಳೀಯ ಎರಡು ಖಾಸಿ ಛಾನೆಲ್ ಗಳಲ್ಲೂ ಸುದ್ದಿಯ ಹೆಸರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಪರವಾಗಿ ಪ್ರಚಾರ ಕಾರ್ಯಕ್ರಮಗಳು ಪ್ರಸಾರವಾಗುತ್ತಿವೆ. ಚುನಾವಣಾ ಆಯೋಗ ಮತ್ತು ವೀಕ್ಷಕರು ಇದರ ಕಡೆಗೆ ಗಮನಹರಿಸದಿರುವುದು ಸಂಶಯಗಳಿಗೆ ಕಾರಣವಾಗಿದೆ. ವರದಿ: ಶ್ರೀರಾಮ ದಿವಾಣ.