ಉಡುಪಿ: ಬಿಜೆಪಿಯಿಂದ ಹಲವು ಮಂದಿ ನಾಯಕರು ದೂರ ಸರಿಯಲು ಅನಂತಕುಮಾರ್ ಕಾರಣ. ಜನಬೆಂಬಲ ಇಲ್ಲವಾದರೂ ಮುಖ್ಯಮಂತ್ರಿಯಾಗಲು ಪೇಚಾಟ ನಡೆಸುತ್ತಿದ್ದಾರೆ. ಅದಕ್ಕಾಗಿ ಮುಖ್ಯಮಂತ್ರಿಯಾದವರನ್ನು ಮುಂದಕ್ಕೆ ಆಗಬಹುದಾದವರನ್ನು ಪಕ್ಷದಲ್ಲಿ ಬದಿಗೆ ಸರಿಸುವ ಕೆಲಸ ಮಾಡುತ್ತಿದ್ದಾರೆ. ಇದುವೇ ಪಕ್ಷದ ದುರಂತಕ್ಕೂ ಕಾರಣವಾಗಿದೆ ಎಂದು ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಕೇಂದ್ರ ಸಚಿವ ವಿ.ಧನಂಜಯ ಕುಮಾರ್ ತಿಳಿಸಿದ್ದಾರೆ.
ಉಡುಪಿ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಇಂದು ಕರೆದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
40 ವರ್ಷಗಳಿಂದ ಸಕ್ರಿಯ ರಾಜಕೀಯದಲ್ಲಿದ್ದೇನೆ. ಯಡಿಯೂರಪ್ಪರಂಥ ನಾಯಕರನ್ನು ಇದುವರೆಗೆ ಕಂಡಿಲ್ಲ. ಅವರ ಅವಧಿಯಲ್ಲಿ ರಾಜ್ಯ ಅಭಿವೃದ್ಧಿ ಕಂಡಿತ್ತು. ನಿರಂತರವಾಗಿ ಮೂರು ವರ್ಷಗಳ ಕಾಲವೂ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಪ್ರಶಸ್ತಿ ನೀಡಿತ್ತು. ಇದೀಗ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಶಾಶ್ವತ ಕಾಮಗಾರಿಗಳು ನಡೆದೇ ಇಲ್ಲ. ಕುಡಿಯಲ್ಲು ನೀರು ಸಹ ಇಲ್ಲವಾಗಿದೆ. ಜನ ವಿರೋಧಿ ಸರಕಾರವನ್ನು ಮುಂದುವರಿಸುವುದರ ಬದಲು ಶೆಟ್ಟರ್ ರಾಜೀನಾಮೆ ನೀಡಬೇಕು. ಆದರೆ, ಅವರು ಕುರ್ಚಿಗಂಟಿ ಕುಳಿತಿದ್ದಾರೆ. ಪ್ರಗತಿಯಲ್ಲಿ ಇದೀಗ ರಾಜ್ಯ 16 ನೇ ಸ್ಥಾನಕ್ಕೆ ಕುಸಿದಿದೆ. ಈ ಎಲ್ಲಾ ಬೆಳವಣಿಗೆಗಳಿಂದಾಗಿ ರಾಜ್ಯದಲ್ಲಿ ತ್ವರಿತಗತಿಯಬ ಬದಲಾವಣೆಗಳು ಕಂಡು ಬರುತ್ತಿದೆ. ಮತದಾರರಲ್ಲಿ ವ್ಯಾಪಕವಾಗಿ ಯಡಿಯೂರಪ್ಪ ಪರವಾದ ಅಂಡರ್ ಕರೆಂಟ್ (ಒಳ ಹರಿವು) ಕಂಡು ಬರುತ್ತಿದೆ ಎಂದು ಧನಂಜಯ ಕುಮಾರ್ ಹೇಳಿದರು.
ಬಿಜೆಪಿಯಲ್ಲಿ ಈಗ ಒಳಜಗಳ ನಡೆಯುತ್ತಿದೆ. ನಿನ್ನೆ ನಡೆದ ಸ್ಥಳೀಯ ಸಂಸ್ಥೆಗಳ ಪೂರ್ವಭಾವೀ ಸಿದ್ಧತಾ ಸಭೆಯಲ್ಲಿ ಭಾಗವಹಿಸಿದ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡರು ಸಭೆಗೆ ಬಹಿಷ್ಕಾರ ಹಾಕಿ ಹೊರ ನಡೆದಿದ್ದಾರೆ. ಅವರ ಸಂಬಂಧಿಗಳೆಲ್ಲ ಜೆಡಿಎಸ್ ನಲ್ಲಿದ್ದು ಗೌಡರು ಸಹ ಜೆಡಿಎಸ್ ಗೆ ಹೋದರೆ ಆಶ್ಚರ್ಯವಿಲ್ಲ. ಬಿಜೆಪಿಯ ಚುನಾವಣಾ ಪೂರ್ವಭಾವೀ ಸಭೆಯಿಂದ ಹೊರನಡೆದ ಡಿವಿ ತನ್ನ ಎಂಎಲ್ ಸಿ ಸ್ಥಾನಕ್ಕೂ ರಾಜೀನಾಮೆ ನೀಡಿದರೆಂಬ ಮಾಹಿತಿ ಇದೀಗ ಬಂದಿದೆ ಎಂದು ಮಾಜಿ ಕೇಂದ್ರ ಸಚಿವರು ಬಹಿರಂಗಪಡಿಸಿದರು.
ಕಾಂಗ್ರೆಸ್ ನಲ್ಲೂ ಒಳಜಗಳ ಕಂಡುಬರುತ್ತಿದೆ. ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಗೆಲುಗಾಗಿ ಅಲ್ಲ, ಬದಲಾಗಿ ಸಿದ್ಧರಾಮಯ್ಯರನ್ನು ಸೋಲಿಸಲು ಆರಂಭಿಸಿದ್ದಾರೆ ಎಂದು ತಿಳಿಸಿದ ಕೆಜೆಪಿ ಪ್ರಚಾರ ಸಮಿತಿ ಅಧ್ಯಕ್ಷರು, ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂವಿಧಾನ ಬದ್ಧವಾಗಿ ಕಾಲಬದ್ಧವಾಗಿ ನಡೆಯಬೇಕು. ನಾವಿದನ್ನು ಸ್ವಾಗತಿಸುತ್ತೇವೆ. ಈ ನಿಟ್ಟಿನಲ್ಲಿ ರಾಜ್ಯಪಾಲರು ಸಂವಿಧಾನವನ್ನು ಎತ್ತಿಹಿಡಿಯುವ ಕೆಲಸ ಮಾಡಿದ್ದಾರೆ. ಚುನಾವಣಾ ಆಯೋಗವನ್ನೂ ನಾವು ಅಭಿನಂದಿಸುತ್ತೇವೆ ಎಂದು ಹೇಳಿದರು.
ಉಡುಪಿ ಜಿಲ್ಲೆಯ ಉಡುಪಿ ನಗರಸಭೆ, ಕಾರ್ಕಳ ಮತ್ತು ಕುಂದಾಪುರ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಎಲ್ಲಾ 95 ಸ್ಥಾನಗಳಿಗೂ ಕೆಜೆಪಿ ಸ್ಪರ್ಧಿಸಲಿದೆ. ತೆಂಗಿನಕಾಯಿ ಪಕ್ಷದ ಚುನಾವಣ ಚಿಹ್ನೆಯಾಗಿದೆ. ಚುನಾವಣಾ ಪೂರ್ವಭಾವಿಯಾಗಿ ನಾಲ್ಕು ಉಸ್ತುವಾರಿ ಸಮಿತಿಗಳನ್ನು ರಚಿಸಲಾಗಿದೆ. ಉಡುಪಿ ನಗರಸಭೆಗೆ ಅಶೋಕ್ ಕುಮಾರ್ ಶೆಟ್ಟಿ, ಸುಭಾಶಿತ್ ಕುಮಾರ್, ತೇಜೇಶ್ವರ ರಾವ್, ವಿಕ್ರಂ, ಸುಬ್ರಾಯ ಪಡಿಲ್ಕರ್, ಕಾರ್ಕಳ ಪುರಸಭೆಗೆ ಚಂದ್ರಶೇಖರ ಕಾಮತ್, ಸುಧಾಕರ ಹೆಗ್ಡೆ, ಸುನಿಲ್ ಸಫಲಿಗ, ಕಿಶೋರ್ ಕುಮಾರ್, ಕುಂದಾಪುರ ಪುರಸಭೆಗೆ ಸನತ್ ಬಳಗಾರ, ಶಿರಿಯಾರ ಮುದ್ದಣ್ಣ ಶೆಟ್ಟಿ, ಸಾಲಿಗ್ರಾಮ ಪಟ್ಟಣ ಪಂಚಾಯತ್ಗೆ ವಿಜಯ ಕುಮಾರ್, ರಾಮ ಪೂಜಾರಿ, ನಾರಾಯಣ ಹೇಳರ್ೆ, ನರಸಿಂಹ ಮರಕಾಲ ಇವರನ್ನು ಉಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ. ಫೆ.20 ರಿಂದ ನಾಮಪತ್ರ ಕೆಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವರು ಎಂದು ಧನಂಜಯ ಕುಮಾರ್ ವಿವರ ನೀಡಿದರು.
ಮಾಧ್ಯಮಗೋಷ್ಟಿಯಲ್ಲಿ ಕೆಜೆಪಿ ರಾಜ್ಯ ಕಾರ್ಯದರ್ಶಿ ರಾಮಚಂದರ್ ಬೈಕಂಪಾಡಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಗಣೇಶ್ ಪ್ರಸಾದ್ ಶೆಟ್ಟಿ, ದಿನಕರ್ ಬೆಂಗಳೂರು, ನಾಯಕರಾದ ಶಿರಿಯಾರ ಮುದ್ಧಣ್ಣ ಶೆಟ್ಟಿ, ರಾಜ ಬಳ್ಳಾಲ್ ಕುಂದಾಪುರ, ಸುಧಾಕರ ಹೆಗ್ಡೆ ಕಾರ್ಕಳ, ವಿಜಯ ಕುಮಾರ್ ಸಾಲಿಗ್ರಾಮ, ಸುಭಾಶಿತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
Posts Tagged ‘siddharamayya’
ಜನಬೆಂಬಲ ಇಲ್ಲದಿದ್ದರೂ ಸಿಎಂ ಆಗಲು ಅನಂತಕುಮಾರ್ ಪೇಚಾಟ: ಧನಂಜಯಕುಮಾರ್
Posted: February 17, 2013 in UncategorizedTags: ananth kumar, ಅನಂತ ಕುಮಾರ್, ಕಾಂಗ್ರೆಸ್, ಕೆಜೆಪಿ, ಜಗದೀಶ ಶೆಟ್ಟರ್, ಡಿ.ವಿ.ಸದಾನಂದ ಗೌಡ, ಧನಂಜಯ ಕುಮಾರ್, ಬಿ.ಎಸ್.ಯಡಿಯೂರಪ್ಪ, ಮಲ್ಲಿಕಾರ್ಜುನ ಖರ್ಗೆ, ಸಿದ್ಧರಾಮಯ್ಯ, congress, d.v.sadananda gowada ex cm, jagadeesh shettar cm, kjp, mallikarjuna kharge, siddharamayya, v.dhananjaya kumar, yadiyoorappa ex cm
ಕಾಂಗ್ರೆಸ್ ಮುಖಂಡ ಮಂಜುನಾಥ ಉದ್ಯಾವರ ಇನ್ನಿಲ್ ಲ
Posted: August 29, 2012 in UncategorizedTags: abhayachandra jain, askar, ಅಭಯಚಂದ್ರ ಜೈನ್, ಅಶೊಕ್ ಕುಮಾರ್ ಕೊಡವೂರು, ಆಸ್ಕರ್ ಫೆರ್ನಾಂಡಿಸ್, ಉಡುಪಿ, ಉಡುಪಿ ವಾರ್ತೆ, ಉಡುಪಿ ಸುದ್ದಿ, ಉದ್ಯಾವರ ನಾಗೇಶ್ ಕುಮಾರ್, ಎಂ.ಎ.ಗಫೂರ್, ಕರಾವಳಿ, ಕರಾವಳಿ ವಾರ್ತೆ, ಕರಾವಳಿ ಸುದ್ದಿ, ಕಾಂಗ್ರೆಸ್, ಗೋಪಾಲ ಭಂಡಾರಿ, ಜನಾರ್ದನ ಪೂಜಾರಿ, ಜಯಪ್ರಕಾಶ್ ಹೆಗ್ಡೆ, ಡಾ.ಜಿ.ಪರಮೇಶ್ವರ್, ದಿನೇಶ್ ಪುತ್ರನ್, ಪ್ರಮೋದ್ ಮದ್ವರಾಜ್, ಮಂಜುನಾಥ ಉದ್ಯಾವರ, ಮೋಟಮ್ಮ, ರಾಹುಲ್ ಗಾಂಧಿ, ವಸಂತ ಸಾಲ್ಯಾನ್, ವಿನಯಕುಮಾರ್ ಸೊರಕೆ, ವೀರಪ್ಪ ಮೊಯಿಲಿ, ಸಿದ್ದರಾಮಯ್ಯ, ಸೋನಿಯಾ ಗಾಂಧಿ, congress, dinesh puthran, dr.g.parameshwar, dr.manamohan singh, gopal bhandari, janardana poojari, jayaprakash hegde, karavali, karavali news, karavali suddi, karavali varthe, m.a.gafur, manjunath udyavar, motamma, news, pramod madhwaraj, prathapchandra shetty, rahul gandhi, siddharamayya, soniya gandhi, udupi, udupi suddi, udupi varthe, udupibits, udupinews, udyavar, udyavara nageshkumar, vinaykumar sorake
ಉಡುಪಿ: ಏಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಅವರ ಆಪ್ತ ಕಾರ್ಯದರ್ಶಿ ಮತ್ತು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಉದ್ಯಾವರ (56) ಇಂದು ಮುಂಜಾನೆ ಗಂಟೆ 4.45 ಕ್ಕೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದೊಂದು ವರ್ಷದಿಂದ ಅನಾರೋಗ್ಯಕ್ಕೀಡಾಗಿದ್ದ ಮಂಜುನಾಥ್ ಅವರು, ಯಾವುದೇ ವೈದ್ಯಕೀಯ ಚಿಕಿತ್ಸೆಗೂ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ರಾಧಾ, ಮಗಳು ಕು.ಸರ್ವಮಂಗಳಾ, ಖ್ಯಾತ ರಂಗಕರ್ಮಿ ಉದ್ಯಾವರ ನಾಗೇಶ್ ಕುಮಾರ್ ಸಹಿತ ನಾಲ್ವರು ಸಹೋದರರು ಹಾಗೂ ಮೂವರು ಸಹೋದರಿಯರು ಮತ್ತು ಅಪಾರ ಬಂದು ಬಳಗವನ್ನು ಬಿಟ್ಟಗಲಿದ್ದಾರೆ. ಮೃತರ ಅಂತ್ಯಸಂಸ್ಕಾರವು ಆ.30 ರಂದು ಗಂಟೆ 11.30 ಕ್ಕೆ ಉದ್ಯಾವರ ಸಾರ್ವಜನಿಕ ಹಿಂದೂ ರುದ್ರಭೂಮಿ ಮುಕ್ತಧಾಮದಲ್ಲಿ ನಡೆಯಲಿದೆ. ಬೆಳಗ್ಗೆ ಗಂಟೆ ಹತ್ತರಿಂದ ಮರತದೇಹವನ್ನು ಸ್ಥಳೀಯ ಶಾಲಾ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು. ಇದೇ ಸಮಯದಲ್ಲಿ ಶ್ರದ್ಧಾಂಜಲಿ ಸಭೆಯೂ ನಡೆಯಲಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಕಟಣೆ ತಿಳಿಸಿದೆ. ಉದ್ಯಾವರ ಫ್ರೆಂಡ್ಸ್ ಸರ್ಕಲ್ ನ ಗೌರವ ಅಧ್ಯಕ್ಷರು, ಉದ್ಯಾವರ ಸಾರ್ವಜನಿಕ ಹಿಂದೂ ರುದ್ರಭೂಮಿ ಸಾರ್ವಜನಿಕ ಪ್ರತಿಷ್ಠಾನದ ಅಧ್ಯಕ್ಷರು, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ಕೇದಾರ ಬ್ರಹ್ಮಲಿಂಗೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಗುಡ್ಡೆಯಂಗಡಿ ಬಬ್ಬುಸ್ವಾಮಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ಗೌರವ ಅಧ್ಯಕ್ಷರು, ಪಿತ್ರೋಡಿ ಮಹಾಕಾಳಿ ಶನೀಶ್ವರ ದೇವಾಲಯ ಅಭಿವೃದ್ದಿ ಸಮಿತಿ ಗೌರವ ಅಧ್ಯಕ್ಷರು ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ಹೊಂದಿ ಜನಾನುರಾಗಿಯಾಗಿದ್ದವರು ಮಂಜುನಾಥ ಉದ್ಯಾವರ.
ಇವರ ನಿಧನಕ್ಕೆ ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ, ಮಾಜಿ ಕೇಂದ್ರ ಸಚಿವರಾದ ಆಸ್ಕರ್ ಫೆರ್ನಾಂಡಿಸ್, ಬಿ.ಜನಾರ್ದನ ಪೂಜಾರಿ, ರಾಜ್ಯ ವಿಧಾನಸಭೆಯ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಅಭಯಚಂದ್ರ ಜೈನ್, ಏಐಸಿಸಿ ಕಾರ್ಯದರ್ಶಿ ವಿನಯಕುಮಾರ್ ಸೊರಕೆ, ಸಂಸದ ಜಯಪ್ರಕಾಶ್ ಹೆಗ್ಡೆ, ಶಾಸಕ ಗೋಪಾಲ ಭಂಡಾರಿ, ಪ್ರತಾಪಚಂದ್ರ ಶೆಟ್ಟಿ, ಮಾಜಿ ಸಚಿವ ವಸಂತ ಸಾಲ್ಯಾನ್, ಪ್ರಮೋದ್ ಮಧ್ವರಾಜ್, ಅಶೋಕ್ ಕುಮಾರ್ ಕೊಡವೂರು, ಬಿ.ನರಸಿಂಹ ಮೂರ್ತಿ, ಎಂ.ಎ.ಗಫೂರ್, ದಿನೇಶ್ ಪುತ್ರನ್ ಸಹಿತ ಹಲವರು ತೀವ್ರ ಸಂತಾಪ
ವ್ಯಕ್ತಪಡಿಸಿದ್ದಾರೆ.
ರಾಜ್ಯದ ಬರಗಾಲಕ್ಕೆ ಸ್ಪಂದಿಸದ ಕೇಂದ್ರದ ವಿರುದ ್ಧ ಬಿಜೆಪಿ ರೈತಮೋರ್ಛಾ ಪ್ರತಿಭಟನೆ
Posted: August 27, 2012 in UncategorizedTags: .m.krishna, : c.t. ravi, abvp, anna hajare, aravind kejrival, ariyadka mallige, ಉಡುಪಿ, ಉಡುಪಿ ವಾರ್ತೆ, ಉಡುಪಿ ಸುದ್ದಿ, ಕರಾವಳಿ ನ್ಯೂಸ್, ಕರಾವಳಿ ವಾರ್ತೆ, ಕರಾವಳಿ ಸುದ್ದಿ, b.k.chandrashekhar, bjp, cbi, cfi, congress, dr.parameshwar, government of india, government of karnataka, gurupura, k.v.thamas, kalladka prabhakara bhat, kapadiya, karavali mallige, karavali news, karavali suddi, karavali varthe, kfd, kundapur, mallikarjun kharge, mlaraghupathibhat, mulki, news, nithin gadkari, pfi, prashanth bhushan, ragini dvivedi, sadhvi prajna singh, santhya mallige, seemanth kumar, shobha karandlaje, shreeshanth, siddharamayya, srirama sene, ssf, udupi, udupibits, udupinews, ulfa, urimajalu rama bhat, vijaykumar shetty, vinaykumar sorake, wfi
ಉಡುಪಿ: ರಾಜ್ಯದಲ್ಲಿ ಭೀಕರ ಬರಗಾಲವಿದ್ದು ಜನ- ಜಾನುವಾರು ಸಂಕಷ್ಟ
ಅನುಭವಿಸುತ್ತಿದ್ದರೂ, ಕೇಂದ್ರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ, ಕೇಂದ್ರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಬಿಜೆಪಿ ರೈತಮೋರ್ಛಾದ ಉಡುಪಿ ಜಿಲ್ಲಾ ಘಟಕದ ಕಾರ್ಯಕರ್ತರು ಇಂದು ಉಡುಪಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿದರು.
ಪ್ರತಿಭಟನೆಯ ಬಳಿಕ 9 ಬೇಡಿಕೆಗಳ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡಲಾಯಿತು. ಶಾಸಕ ರಘುಪತಿ ಭಟ್, ರೈತಮೋರ್ಛಾದ ಜಿಲ್ಲಾಧ್ಯಕ್ಷ ಹರ್ಷವರ್ಧನ ಹೆಗ್ಡೆ, ಪ್ರಧಾನ ಕಾರ್ಯದರ್ಶಿಗಳಾದ ರಾಘವೇಂದ್ರ ಉಪ್ಪೂರು, ಅಶೋಕ್ ಶೆಟ್ಟಿ ಮುದ್ರಾಡಿ, ಮಾಜಿ ಜಿ.ಪಂ.ಅಧ್ಯಕ್ಷೆ ಗ್ಲ್ಯಾಡಿಸ್ ಅಲ್ಮೇಡಾ, ಲೀಲಾ ಅಮೀನ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮತದಾರರ ಗೌರವ, ಘನತೆಗೆ ಧಕ್ಕೆಯಾಗದಂತೆ ಕೆಲಸ: ಜಯಪ ್ರಕಾಶ್ ಹೆಗ್ಡೆ
Posted: March 25, 2012 in UncategorizedTags: askar, birthi rajesh shetty, c.m.ibrahim, congress, d.k.shivakumar, dr.g.parameshwar, gangadhara suvarna, jayaprakash hegde, k.p.nanjundi, muniyppa, neere krishna shetty, news, nsui, pramod madhwaraj, r.v.deshapandy, siddharamayya, sudheer hegde, udupi, udupibits, udupinews, vandse sanjeeva shetty, vedaprakash
ಉಡುಪಿ: ಮತದಾರರ ಗೌರವ ಮತ್ತು ಘನತೆಗೆ ಧಕ್ಕೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸುವುದಾಗಿ ಮತದಾರರಿಗೆ ಸ್ಪಷ್ಟ ಭರವಸೆ ನೀಡಿದ ನೂತನ ಸಂಸದ ಕಾಂಗ್ರೆಸ್ ನ ಕೆ.ಜಯಪ್ರಕಾಶ್ ಹೆಗ್ಡೆಯವರು, ಮಾರ್ಚ್ 26 ರಂದು ಪ್ರಮಾಣ ವಚನ ಸ್ವೀಕರಿಸುವುದಾಗಿ ತಿಳಿಸಿದರಲ್ಲದೆ, 5 ವರ್ಷಗಳ ಅವಧಿಯಲ್ಲಿ ಮಾಡಬೇಕಾದುದದನ್ನು ಮುಂದಿನ 2 ವರ್ಷಗಳ ಅವಧಿಯಲ್ಲಿ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಆಶ್ವಾಸನೆ ನೀಡಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಮಾ.25 ರಂದು ಉಡುಪಿಯ ಕಲ್ಸಂಕದಲ್ಲಿ ನಡೆದ ಮತದಾರರಿಗೆ ಕೃತಜ್ನತಾರ್ಪಣಾ ಸಮಾರಂಭದಲ್ಲಿ ಮತದಾರರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಕೃತಜ್ನತೆ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಮಂತ್ರಿ ಎಂ.ವೀರಪ್ಪ ಮೊಯಿಲಿ ಅವರು, ನೂರು ತಪ್ಪು ಮಾಡುವವರೆಗೆ ತಾಳ್ಮೆಯಿಂದ ಇದ್ದು ನೂರ ಒಂದನೇ ತಪ್ಪು ಮಾಡಿದಾಗ ಕೃಷ್ಣ ಸುದರ್ಶನ ಚಕ್ರ ಉಪಯೋಗಿಸಿ ಶಿಶುಪಾಲನನ್ನು ವಧಿಸಿದಂತೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾರರು ಮತದಾನವೆಂಬ ಸುದರ್ಶನ ಚಕ್ರ ಉಪಯೋಗಿಸಿ ಬಿಜೆಪಿಯನ್ನು ಸೋಲಿಸುವ ಮೂಲಕ ಶಿಕ್ಷೆ
ನೀಡಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಕೇಂದ್ರ ಮಂತ್ರಿ ಮುನಿಯಪ್ಪ, ಏಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಆಸ್ಕರ್ ಫೆರ್ನಾಂಡಿಸ್, ಮೇಜರ್ ವೇದಪ್ರಕಾಶ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಕೇಂದ್ರ ಮಂತ್ರಿ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯದರ್ಶಿಗಳಾದ ಕೆ.ಪಿ.ನಂಜುಂಡಿ, ಎಂ.ಎ.ಗಫೂರ್, ಮಾಜಿ ಸಂಸದೆ ತೇಜಸ್ವಿನಿ ಗೌಡ, ಶಾಸಕರುಗಳಾದ ಗೋಪಾಲ ಭಂಡಾರಿ, ಯು.ಟಿ.ಖಾದರ್, ಅಭಯಚಂದ್ರ ಜೈನ್, ಮಾಜಿ ಶಾಸಕರಾದ ವಿಜಯಕುಮಾರ್ ಶೆಟ್ಟಿ, ಬಸವರಾಜ್, ಪಕ್ಷದ ಮುಖಂಡರುಗಳಾದ ಪ್ರಮೋದ್ ಮಧ್ವರಾಜ್, ನೀರೆ ಕರಷ್ಣ ಶೆಟ್ಟಿ, ಬಿರ್ತಿ ರಾಜೇಶ್ ಶೆಟ್ಟಿ, ಸುಧೀರ್ ಹೆಗ್ಡೆ, ಗಂಗಾಧರ ಸುವರ್ಣ, ವಂಡ್ಸೆ ಸಂಜೀವ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ಮುರಳಿ ಶೆಟ್ಟಿ, ನಿಖಿಲ್, ಸರಳಾ ಕಾಂಚನ್, ಶ್ಯಾಮಲಾ ಭಂಡಾರಿ, ವೆರೋನಿಕಾ ಕರ್ನೇಲಿಯೋ, ಮೊಯಿದೀನ್ ಬಾವಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
- kaaryakartharu 1
- kaaryakartharu 2
- kaaryakartharu 3
- moyili bhaashana
- hegde bhaashana
- askar bhaashana
- d k shi bhaashana
- ibrahim bhaashana
- siddfharamayya bhaashana
ಮಧ್ವನಗರದಲ್ಲಿ ಕಾಂಗ್ರೆಸ್ ಸಾರ್ವಜನಿಕ ಸಭೆ
Posted: March 8, 2012 in UncategorizedTags: jayaprakash hegde, news, siddharamayya, udupi, udupibits, udupines
ಉಡುಪಿ: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮೂಡಬೆಟ್ಟುವಿನ ಮಧ್ವ ನಗರದಲ್ಲಿ ಮಾ.8 ರಂದು ಸಂಜೆ ಬಹಿರಂಗ ಚುನಾವಣಾ ಪ್ರಚಾರ ಸಭೆ ನಡೆಯಿತು. ಪಕ್ಷದ ಪ್ರಮುಖ ನಾಯಕರುಗಳಾದ ವೀರಪ್ಪ ಮೊಯಿಲಿ, ಡಾ.ಪರಮೇಶ್ವರ್, ಪ್ರಮೋದ್ ಮಧ್ವರಾಜ್, ಜನಾರ್ದನ ಭಂಡಾರ್ಕರ್, ಗಣೇಶ್ ನೆರ್ಗಿ ಮೊದಲಾದವರು ಪ್ರಚಾರ ಭಾಷಣ ಮಾಡಿದರು.
ಚಿತ್ರಗಳು: ಶ್ರೀರಾಮ ದಿವಾಣ.
- madhwanagara moyly bhaashana
- parameshwar bhaashana
- janardana bhandarkar bhaashana
- ganesh nergi bhaashana














