ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಕಟಿಸಿದ ಡಾ.ಭಾರತಿ ಮರವಂತೆ ಅವರು ಕರಾವಳಿ ಕರ್ನಾಟಕದ ರಂಗೋಲಿ ಕಲೆ ಬಗ್ಗೆ ಬರೆದ ‘ರಂಗೋಲಿ’ ಸಂಶೋಧನಾ ಗ್ರಂಥದ ಬಿಡುಗಡೆ ಸಮಾರಂಭ ಎ.17 ರಂದು ಸಂಜೆ ಉಡುಪಿ ಶ್ರೀಕೃಷ್ಣ ದೇವಾಲಯದ ಮಧ್ವ ಮಂಟಪದಲ್ಲಿ ನಡೆಯಿತು. ಹೊನ್ನಾವರದ ಜಾನಪದ ತಜ್ಞೆ ಡಾ.ಶಾಂತಿ ನಾಯಕ್ ಅವರು ಗ್ರಂಥವನ್ನು ಬಿಡುಗಡೆಗೊಳಿಸಿದರು. ಸಾರಿಗೆ ಉದ್ಯಮಿ ರಬೀಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ
ಪ್ರಾಂಶುಪಾಲರಾದ ಕೆ.ಆರ್.ಹಂದೆ ಗ್ರಂಥವನ್ನು ಪರಿಚಯಿಸಿದರು. ಜೆಡಿಎಸ್ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಶ್ರೀಮತಿ ಶಾಲಿನಿ ಶೆಟ್ಟಿ ಕೆಂಚನೂರು, ಕಲಾವಿದರ ಕಲ್ಯಾಣ ವೇದಿಕೆಯ ರಾಜ್ಯಾಧ್ಯಕ್ಷರಾದ ಬೆಂಗಳೂರಿನ ಕೆಂಚನೂರು ಶಂಕರ್ ಅತಿಥಿಗಳಾಗಿ ಭಾಗವಹಿಸಿದ್ದರು. ಮಣಿಪಾಲ ವಿವಿಯ ಆಡಳಿತ ನಿರ್ದೇಶಕರಾದ ಡಾ.ಎಚ್.ಶಾಂತಾರಾಮ್, ಮಣಿಪಾಲದ ಭಾರತೀಯ ವಿಕಾಸ್ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಕೆ.ಎಂ.ಉಡುಪ, ಜಿಲ್ಲಾ ವಾರ್ತಾಧಿಕಾರಿ ಜುಂಜಣ್ಣ ಶುಭಾಶಂಸನೆ ಮಾಡಿದರು.
ಇದೇ ಸಂದರ್ಭದಲ್ಲಿ ರಂಗೋಲಿ ಕಲಾ ಪರಿಷತ್ತನ್ನು ಉದ್ಘಾಟಿಸಲಾಯಿತು. ಎ.16 ರಂದು ನಡೆಸಿದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ‘ನಾದ ವೈಭವಂ’ ನಿರ್ದೇಶಕರಾದ ಉಡುಪಿ ವಾಸುದೇವ ಭಟ್ ಅವರನ್ನು ಸಮ್ಮಾನಿಸಲಾಯಿತು. ಡಾ.ಭಾರತಿ ಮರವಂತೆ, ಡಾ.ಕನರಾಡಿ ವಾದಿರಾಜ ಭಟ್, ಶ್ರೀಮತಿ ಲಕ್ಷ್ಮೀ ಬಾಯಿ, ಮುಕ್ತ ಎಸ್.ಭಟ್, ಶಶಿಧರ ಹಾಲಾಡಿ ಮೊದಲಾದವರು ಉಪಸ್ಥಿತರಿದ್ದರು.
Posts Tagged ‘shashidhara haladi’
‘ರಂಗೋಲಿ’ ಸಂಶೋಧನಾ ಗ್ರಂಥ ಬಿಡುಗಡೆ
Posted: April 17, 2012 in UncategorizedTags: bharathi maravanthe, junjjanna, k.m.udupa, k.r.hande, kanaradi vadiraja bhat, kenchanooru shankar, muktha bhat, news, rabeendra nayak, rangoli, shalini shetty kenchanooru, shantharam, shanthi nayak, shashidhara haladi, udupi, udupi vasudeva bhat, udupibits, udupinews
0
