ಉಡುಪಿ: ಉಡುಪಿ- ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರದ ಮರು ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ಯುವ ಮೋರ್ಛಾ ರಾಜ್ಯಾಧ್ಯಕ್ಷ ಮತ್ತು ಕಾರ್ಕಳದ ಮಾಜಿ ಶಾಸಕ ವಿ.ಸುನಿಲ್ ಕುಮಾರ್ ಅವರು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಅವರಿಗೆ ಬುಧವಾರ ನಾಮಪತ್ರ ಸಲ್ಲಿಸಿದರು.
ಬೆಳಗ್ಗೆ ಮಲ್ಪೆಯಲ್ಲಿ ಪಕ್ಷದ ಚುನಾವಣಾ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಸುನಿಲ್ ಕುಮಾರ್, ಪಕ್ಷದ ಇತರ ಮುಖಂಡರೊಂದಿಗೆ ಸಾವಿರಾರು ಕಾರ್ಯಕರ್ತರ ಜಯಕಾರದ ಘೋಷಣೆಯೊಂದಿಗೆ ಮೆರವಣಿಗೆಯಲ್ಲಿ ಬಹಿರಂಗ ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸಿದರು.
ಮುಖ್ಯಮಂತ್ರಿ ಸದಾನಂದ ಗೌಡ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ಅನಂತ ಕುಮಾರ್, ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸುನಿಲ್ ಕುಮಾರ್ ಜೊತೆಗೆ ಇದ್ದರು.
ಬಹಿರಂಗ ಸಮಾವೇಶದಲ್ಲಿ ಸಿಎಂ ಸದಾನಂದ ಗೌಡ, ಅನಂತಕುಮಾರ್, ಈಶ್ವರಪ್ಪ, ರಾಘವೇಂದ್ರ, ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ನಳಿನ್ ಕುಮಾರ್ ರೈ ಕಟೀಲ್, ಶಾಸಕರುಗಳಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಿ.ಟಿ.ರವಿ, ಕುಮಾರಸ್ವಾಮಿ, ಜೀವರಾಜ್, ಬಿ.ಎಸ್.ಸುರೇಶ್, ಎಂಎಲ್ ಸಿಗಳಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಎ.ಜಿ.ಕೊಡ್ಗಿ, ಸುಲೋಚನಾ ಭಟ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಚಿಕ್ಕ ಮಗಳೂರು ಜಿಲ್ಲಾಧ್ಯಕ್ಷ ಪ್ರಾಣೇಶ್, ಭಾನುಪ್ರಕಾಶ್, ಮಾಜಿ ಸಂಸದೆ ಮನೋರಮಾ ಮಧ್ವರಾಜ್ ಮುಂತಾದವರು ಉಪಸ್ಥಿತರಿದ್ದರು.
Posts Tagged ‘mlaraghupathi bhat’
ಮರು ಚುನಾವಣೆ: ಬಿಜೆಪಿಯಿಂದ ಸುನಿಲ್ಕುಮಾರ್ ನಾಮ ಪತ್ರ ಸಲ್ಲಿಕೆ
Posted: February 29, 2012 in UncategorizedTags: : c.t. ravi, a.g.kodgi, abvp, ananthakumar, b.s.suresh, b.y.raghavendra, bhajaranga dala, bhanuprakash, bjp, chikka magalur, cm, congress, d.v.sadananda gouda, eeshwarappa, ganesh karnik, haladi srinivasa shetty, jayaprakash hegde, jds, jdu, jeevaraj, kota srinivasa pujary, kumaraswamy, lalaji mendan, manorama madhwaraj, mlaraghupathi bhat, news, pranesh, rss, s.l.bhoje gouda, udayakumar shetty, udupi, udupi news, udupibits, v.sunilkumar, vhp
ವಿಧಾನಸಭೆಯಲ್ಲಿ ಚಕಾರ ಶಬ್ದ ಮಾತನಾಡದ ಶಾಸಕ ಲಾಲ ಾಜಿ ಮೆಂಡನ್ !
Posted: February 13, 2012 in UncategorizedTags: abvp, bjp, cm, congress, d.v.sadananda gouwda, dr.v.s.acharya, malpe, mlaraghupathi bhat, news, rave party, rss, st mary's island, udupi, udupi news, udupibits, vhp
ಉಡುಪಿ: ರಾಜ್ಯದ 224 ಮಂದಿ ಶಾಸಕರಲ್ಲಿ ಒಂದೇ ಒಂದು ದಿನ ಎದ್ದು ನಿಂತು ಚಕಾರ ಶಬ್ದ ಮಾತನಾಡದ ಏಕೈಕ ಶಾಸಕರಿದ್ದರೆ, ಅದು ಕಾಪು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಲಾಲಾಜಿ ಆರ್.ಮೆಂಡನ್ ಅವರು. ಇವರಿಗೆ ಇದಕ್ಕಾಗಿ ಬಿರುದು ಕೊಡಬಹುದು ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ವಸಂತ ವಿ.ಸಾಲ್ಯಾನ್ ವ್ಯಂಗ್ಯವಾಡಿದ್ದಾರೆ.
ಮಲ್ಪೆ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ನಡೆದ ರೇವ್ ಪಾರ್ಟಿಗೆ ಅವಕಾಶ ಮಾಡಿಕೊಟ್ಟ ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ಹಾಗೂ ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ ಮೂವರು ಬಿಜೆಪಿ ಸಚಿವರ ವರ್ತನೆಯನ್ನು ಖಂಡಿಸಿ ಕಾಪು ಬ್ಲಾಕ್ ನ ಕಾಂಗ್ರೆಸ್, ಯುವ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಜಂಟಿಯಾಗಿ ಹಿರಿಯಡ್ಕ ಬಸ್ ನಿಲ್ದಾಣದಲ್ಲಿ ನಡೆಸಿದ ಬಹಿರಂಗ ಪ್ರತಿಭಟನಾ ಧರಣಿಯಲ್ಲಿ ಅವರು ಮಾತನಾಡುತ್ತಿದ್ದರು.
ಕಾಂಗ್ರೆಸ್ ಆಡಳಿತವಿರುವ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಗಳಿಗೆ ರಾಜ್ಯ ಸರಕಾರ ಅಭಿವೃದ್ದಿಗಾಗಿ ಅನುದಾನವನ್ನೇ ಬಿಡುಗಡೆ ಮಾಡದೆ ಪಕ್ಷಪಾತ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಆಡಳಿತದಲ್ಲಿದ್ದಾಗ ಹೀಗೆ ಮಾಡುತ್ತಿರಲಿಲ್ಲ ಎಂದು ಸಾಲ್ಯಾನ್ ಹೇಳಿದರು.
1994 ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ತಾನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಅಂದು ರೂಪಿಸಿದ ನಿಯಮಾವಳಿಗಳ ಪ್ರಕಾರ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ಸಂಜೆ ಗಂಟೆ 5 ರ ಬಳಿಕ ಯಾರೊಬ್ಬರೂ ಅಲ್ಲಿ ನಿಲ್ಲುವಂತೆಯೇ ಇರಲಿಲ್ಲ, ಮದ್ಯ ಇತ್ಯಾದಿಗಳನ್ನು ಅಲ್ಲಿ ಕುಡಿಯುಂತಿರಲಿಲ್ಲ. ಆದರೆ ಇದೀಗ ಮದ್ಯ, ಗಾಂಜಾ, ಚರಸ್ ಸಹಿತ ಏನೇನು ಬೇಕೋ ಅದೆಲ್ಲವನ್ನೂ ಐಲ್ಯಾಂಡ್ ಗೆ ಸರಬರಾಜು ಮಾಡಲಾಗಿದೆ. ಇದೆಲ್ಲಾ ಹೇಗೆ ಸಾಧ್ಯವಾಯಿತು, ಯಾರಿದಕ್ಕೆ ಹೊಣೆ ಎಂದು ವಸಂತ ಸಾಲ್ಯಾನ್ ಪ್ರಶ್ನಿಸಿದರು.
ಶಾಸಕ ರಘುಪತಿ ಭಟ್ ಅವರು ನಂಗಾನಾಚ್ ನಲ್ಲಿ ತೊಡಗಿದ್ದ ವಿದೇಶಿ ಜೋಡಿ ಜೊತೆ ಡ್ಯಾನ್ಸ್ ಮಾಡುತ್ತಿದ್ದರು. ಇದನ್ನೆಲ್ಲಾ ಮುಖ್ಯಮಂತ್ರಿ ಸದಾನಂದ ಗೌಡರು ಸಮರ್ಥಿಸುತ್ತಾರೆ. ಇವರಿಗೆಲ್ಲ ಜನರು ಧಿಕ್ಕಾರ ಹೇಳಬೇಕು ಎಂದ ಸಾಲ್ಯಾನ್, ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿ ಸಿಕ್ಕಿಬಿದ್ದ ಮೂವರನ್ನೂ ಶಾಕತ್ವದಿಂದ ವಜಾ ಮಾಡಬೇಕು ಎಂದು ಸ್ಫೀಕರ್ ಅವರನ್ನು ಒತ್ತಾಯಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಅಮೃತ್ ಶೆಣೈ, ಸುಧೀರ್ ಹೆಗ್ಡೆ, ರಮೇಶ್ ಕಾಂಚನ್, ಇಸ್ಮಾಯಿಲ್ ಆತ್ರಾಡಿ, ಲಕ್ಷ್ಮೀ ನಾರಾಯಣ ಪ್ರಭು, ಅಬ್ದುಲ್ ಅಜೀಜ್ ಹೆಜಮಾಡಿ, ಮಿಥುನ್, ಸಂಧ್ಯಾ ಶೆಟ್ಟಿ, ಸುಧಾಕರ ಪೂಜಾರಿ ಪಾಪೂಜೆ, ಹಬೀಬ್ ಅಲಿ, ಪ್ರವೀಣ್ ಶೆಟ್ಟಿ, ಅಲೆವೂರು ಹರೀಶ್ ಕಿಣಿ, ರಿಯಾಝ್ ಪಳ್ಳಿ, ನರೇಶ್ ಕಾಮತ್, ಶಿವರಾಮ ಶೆಟ್ಟಿ ಕುದಿ, ವಿನೋದ್ ಕುಮಾರ್, ಸುಂದರ ಪೂಜಾರಿ, ಸಂತೋಷ್, ರಾಜು ಪೂಜಾರಿ, ಸಂತೋಷ್ ಶೆಟ್ಟಿ, ಸುರೇಶ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
- vasant salyan bashana 1
- salyan bhashana 2
- m a gafoor bhaashana

- akashavani habba udgatane 11
- vasanthkumar perla bhashana1
ಮಲ್ಪೆ ಐಲ್ಯಾಂಡಲ್ಲಿ ರೇವ್ ಪಾರ್ಟಿ: ಸರಕಾರದ ಮೂ ಗಿನಡಿ ನಂಗಾನಾಚ್..
Posted: February 3, 2012 in UncategorizedTags: cm, d.v.sadananda gowda, dr.m.t.reju, karnataka, malpe, mlaraghupathi bhat, news, rave party, st mary's island, udupi, udupi district administration, udupi news, udupibits
ಉಡುಪಿ: ಉಡುಪಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು 3 w concepts ಇವುಗಳ ವತಿಯಿಂದ ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ‘spring zouk – 2012′ (ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ) ಇಂದು ರಾತ್ರಿ 8 ಗಂಟೆಗೆ ಆರಂಭಗೊಂಡಿತು.
ವಿವಿಧ ದೇಶಗಳಿಂದ ಆಗಮಿಸಿದ ನೂರಾರು ಜೋಡಿಗಳು ಐಲ್ಯಾಂಡ್ ಪ್ರವೇಶಿಸುವ ಮೊದಲೇ ಅಮಲು ಪದಾರ್ಥ ಸೇವಿಸಿರುವುದು, ಕನಿಷ್ಟ ಬಟ್ಟೆ ಧರಿಸಿರುವುದು ಮತ್ತು ಐಲ್ಯಾಂಡ್ ನ ಸನ್ನಿವೇಶಗಳನ್ನು ಗಮನಿಸಿದರೆ ಜಿಲ್ಲಾಡಳಿತ ಆಯೋಜಿಸಿರುವುದು ಅಂತಾರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಅಲ್ಲ, ಬದಲಾಗಿ ಇದೊಂದು ರೇವ್ ಪಾರ್ಟಿ (rave party) ಎಂಬುದು ಸ್ಪಷ್ಟವಾಗುತ್ತದೆ.
ಐಲ್ಯಾಂಡ್ ಪ್ರವೇಶಿಸಲು 3500 ರು. ಪ್ರವೇಶ ಶುಲ್ಕವಿದ್ದು, ಐಲ್ಯಾಂಡ್ ಒಳಗೆ ತಿಂಡಿ- ತೀರ್ಥ ಎಲ್ಲವೂ ಲಭ್ಯವಿದ್ದು ಇದಕ್ಕೆ ಪ್ರತ್ಯೇಕ ಹಣ ಪಾವತಿಸಬೇಕಾಗಿದೆ.
ಪೋಲೀಸರು ಇಲ್ಲಿ ಇದ್ದಾರಾದರೂ, ಇವರಾರೂ ಇಲ್ಲಿ ವಿದೇಶಿಯರನ್ನು ಪ್ರಶ್ನಿಸುವ ಸ್ಥಿತಿಯಲ್ಲಿ ಇಲ್ಲ. ಜಿಲ್ಲಾಡಳಿತದ ನೇರ ಉಸ್ತುವಾರಿಯಲ್ಲಿ ನಡೆಯುತ್ತಿದೆಯಾದರೂ, ಖಾಸಗಿ ವ್ಯಕ್ತಿಗಳೇ ಇಲ್ಲಿ ಎಲ್ಲವನ್ನೂ ನಿಯಂತ್ರಿಸುತ್ತಿದ್ದಾರೆ. ಸಂಜೆ ಅಮಲು ಪದಾರ್ಥ ವಿದೇಶಿಯರಿಗೆ ಇಲ್ಲಿ ಲಭ್ಯವಾಗಿರಬೇಕಾದರೆ, ಇನ್ನು ರಾತ್ರಿ ಲಭ್ಯವಾಗದೇ ಇರಲು ಸಾಧ್ಯವಿಲ್ಲ. ರಾತ್ರಿ – ಹಗಲು ಸಾಂಸ್ಕೃತಿಕ ಉತ್ಸವದ ಹೆಸರಲ್ಲಿ ವಿದೇಶಿ ಮಹಿಳೆಯರ ನಂಗಾನಾಚ್ ಗೆ ಸರಕಾರ ಪರವಾನಿಗೆ ನೀಡಿರುವುದನ್ನು ನೋಡಿದರೆ ರಾಜ್ಯದ ಬಿಜೆಪಿ ಸರಕಾರ ನಂಗಾನಾಚ್ ಸಂಸ್ಕೃತಿಯನ್ನು ಅಭಿವೃದ್ದಿಪಡಿಸಲು ಹೊರಟಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಚಿತ್ರಗಳು: ಶ್ರೀರಾಮ ದಿವಾಣ.
- rave party nadeyo sthala
- rave party tent 1
- rave party 8
- rave party 7
- rave party 6