ಉಡುಪಿ: ಮಲ್ಪೆ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ಶಾಸಕ ರಘುಪತಿ ಭಟ್ಟರ ಕುಮ್ಮಕ್ಕಿನಿಂದಲೇ ನಂಗಾನಾಚ್ ನಡೆದಿದೆ. ಸಚಿವರಾದ ಹಾಲಪ್ಪ, ರೇಣುಕಾಚಾರ್ಯರ ಬಳಿಕ ಇದೀಗ ಮೂವರು ಸಚಿವರು ಸದನದಲ್ಲಿಯೇ ಬ್ಲೂಫಿಲಂ ವೀಕ್ಷಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ರಾಜ್ಯದ ಬಿಜೆಪಿ ಸರಕಾರದ ಸಚಿವ ಸಂಪುಟ ಒಂದು ಲಂಪಟರ ಸಚಿವ ಸಂಪುಟ ಎಂದು ಜಮಾತೆ- ಇ- ಇಸ್ಲಾಮೀ ಹಿಂದ್ ನ ಸಲಹಾ ಸಮಿತಿ ಸದಸ್ಯ ಮುಹಮ್ಮದ್ ಇದ್ರೀಸ್ ಅವರು ವ್ಯಂಗ್ಯವಾಡಿದ್ದಾರೆ.
ಸಚಿವರು ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ್ದನ್ನು ಮತ್ತು ಮಲ್ಪೆಯಲ್ಲಿ ರೇವ್ ಪಾರ್ಟಿ ನಡೆಸಿದ್ದನ್ನು ಖಂಡಿಸಿ ಜಮಾತೆ- ಇ- ಇಸ್ಲಾಮೀ ಹಿಂದ್ ವತಿಯಿಂದ ಫೆ.10 ರಂದು ಉಡುಪಿ ತಾಲೂಕು ಕಚೇರಿ ಮುಂದೆ ನಡೆದ ಧರಣಿಯಲ್ಲಿ ಅವರು ಮಾತನಾಡುತ್ತಿದ್ದರು.
ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ್ದು ಚಾರಿತ್ರ್ಯಹೀನತೆಯ ಪರಮಾವಧಿ ಎಂದ ಇದ್ರೀಸ್ ಅವರು, ಪ್ರವಾಸೋದ್ಯಮದ ಅಭಿವೃದ್ದಿಗೆ ವ್ಯಭಿಚಾರ ನಡೆಸುವ ಅಗತ್ಯವಿಲ್ಲ ಎಂದರು.
ಸಂಘಟನೆಯ ಸಲಹಾ ಸಮಿತಿ ಸದಸ್ಯರಾದ ಅಕ್ಬರ್ ಅಲಿ ಮಾತನಾಡಿ, ಬ್ಲೂಫಿಲಂ ವೀಕ್ಷಿಸಿದ ಸಚಿವರು ರಾಜಕೀಯ ಸನ್ಯಾಸ ಸ್ವೀಕರಿಸಬೇಕು ಎಂದು ಒತ್ತಾಯಿಸಿದರು. ಸುಂದರಿ ಪುತ್ತೂರು ಮಾತನಾಡಿದರು. ಹುಸೇನ್ ಕೋಡಿಬೆಂಗ್ರ ನಿರ್ವಹಿಸಿದರು.
ಕುಲ್ಸುಮ್ ಅಬೂಬಕರ್ ಉಪಸ್ಥಿತರಿದ್ದರು. ಧರಣಿಯ ಬಳಿಕ 4 ಬೇಡಿಕೆಗಳಿರುವ ಮನವಿ ಪತ್ರವನ್ನು ತಹಶಿಲ್ದಾರ್ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.
- jamath e islami hind pratibatane
- akbar ali bhaashana
- manavi sallike
- bhitthi chithra 1
- bhitthi chithra 2




