Posts Tagged ‘h.d.kumaraswamy’

ಉಡುಪಿ: ಪ್ರಧಾನಿ ಡಾ.ಮನಮೋಹನ್ ಸಿಂಘ್ ಸೋನಿಯಾ ಗಾಂಧಿಯ ಕೈಗೊಂಬೆಯಾಗಿದ್ದಾರೆ. ಸಿಂಘ್ ಅವರು ಪ್ರಧಾನಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದಾಗಿ ಡಿಸೆಲ್, ಅಡುಗೆ ಅನಿಲ ಇತ್ಯಾದಿಗಳ ಬೆಲೆ ಏರಿಸಲಾಗಿದೆ. ಇದಕ್ಕೆ ಬಿಜೆಪಿಯೂ ಕಾರಣವಾಗಿದೆ. ಇನ್ನಾದರೂ ಏರಿಸಿದ ಬೆಲೆಯನ್ನು ಇಳಿಸಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಒತ್ತಾಯಿಸಿದ್ದಾರೆ.
ಡಿಸೆಲ್, ಅಡುಗೆ ಅನಿಲ ಇತ್ಯಾದಿಗಳ ಬೆಲೆ ಏರಿಸಿದ ಕೇಂದ್ರದ ಕಾಂಗ್ರೆಸ್ ನೇತೃತ್ವದ ಸರಕಾರದ ಕ್ರಮವನ್ನು ಖಂಡಿಸಿ ಜೆಡಿಎಸ್ ಜಿಲ್ಲಾ ಘಟಕದ ವತಿಯಿಂದ ಇಂದು ಬೆಳಗ್ಗೆ ಉಡುಪಿ ಸರ್ವಿಸ್ ಬಸ್ ನಿಲ್ದಾಣ ಪರಿಸರದ ಗಡಿಯಾರ ಗೋಪುದ ಮುಂದೆ ನಡೆಸಿದ ಬಹಿರಂಗ ಪ್ರತಿಭಟನಾ ಪ್ರದರ್ಶನವನ್ನು ಉದ್ಧೇಶಿಸಿ ಅವರು ಮಾತನಾಡುತ್ತಿದ್ದರು.
ಜನರಿಗೆ ಕುಡಿಯಲು ನೀರಿಲ್ಲ, ವಾಸಸಲು ಮನೆ ಇಲ್ಲ. ಇಂಥ ಸನ್ನಿವೇಶದಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡಡ ಹಾಕಿ ಜನರ ಪರವಾಗಿ ಕೆಲಸ ಮಾಡುವ ಬದಲಾಗಿ ರಾಜ್ಯ ಸರಕಾರದ ಬಿಜೆಪಿ ಮಂತ್ರಿಗಳು, ಶಾಸಕರು ವಿದೇಶ ಪ್ರವಾಸವೇ ಮೊದಲಾದ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಬೆಲೆ ಏರಿಕೆ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಜನರು ಆದಿಮಾನವರಾಗಿ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಎಂದು ಜೆಡಿಎಸ್ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಶಾಲಿನಿ ಶೆಟ್ಟಿ ಕೆಂಚನೂರು ಅವರು ಆತಂಕ
ವ್ಯಕ್ತಪಡಿಸಿದರು.
ಪಕ್ಷದ ಜಿಲ್ಲಾ ಕಾರ್ಯಾಧ್ಯಕ್ಷ ಗುಲಾಂ ಮುಹಮ್ಮದ್, ಮಾಜಿ ಶಾಸಕ ಯು.ಆರ್.ಸಭಾಪತಿ, ಯುವ ವಿಭಾಗದ ಜಿಲ್ಲಾಧ್ಯಕ್ಷ ವಾಸುದೇವ ರಾವ್, ಯುವ ವಿಭಾಗದ ರಾಜ್ಯ ಉಪಾಧ್ಯಕ್ಷ ದಿಲೇಶ್ ಶೆಟ್ಟಿ, ಪ್ರದೀಪ್ ಜಿ.ನಾಯ್ಕ್, ಜಯಕುಮಾರ್ ಪರ್ಕಳ, ನಿತ್ಯಾನಂದ ಒಳಕಾಡು, ಮಂಜುಳಾ, ರಾಧಾದಾಸ್ ಮೊದಲಾದವರು ಭಾಗಿಯಾಗಿದ್ದರು.

ಉಡುಪಿ: ಕಳೆದ 50 ಕ್ಕೂ ಅಧಿಕ ವರ್ಷಗಳಿಂದ ಸ್ವಂತ ಜಮೀನು ಇಲ್ಲದೆ, ಹೊಟ್ಟೆಪಾಡಿಗಾಗಿ ಅರಣ್ಯ ಮತ್ತು ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಬಡವರನ್ನು
ಒಕ್ಕಲೆಬ್ಬಿಸುತ್ತಿರುವುದನ್ನು ಖಂಡಿಸಿ ಹಾಗೂ ಅರಣ್ಯ ಕಾಯ್ದೆಯನ್ನು ತಿದ್ದುಪಡಿ ಮಾಡಿ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಸಕ್ರಮಗೊಳಿಸುವಂತೆ ಒತ್ತಾಯಿಸಿ ಜನತಾದಳ (ಜಾತ್ಯತೀತ) ಪಕ್ಷದ ಉಡುಪಿ ಜಿಲ್ಲಾ ಘಟಕದ ವತಿಯಿಂದ ಇಂದು ಬೆಳಗ್ಗೆ ಪಾದಯಾತ್ರೆ ನಡೆಯಿತು.
ಉಡುಪಿ ಚಿತ್ತರಂಜನ್ ಸರ್ಕಲ್ ನಿಂದ ಹೊರಟ ಪಾದಯಾತ್ರೆ ಮಣಿಪಾಲ ಎಂಡ್ ಪಾಯಿಂಟ್ ನಲ್ಲಿರುವ ಜಿಲ್ಲಾಧಿಕಾರಿ ಕಚೇರಿವರೆಗೆ ಸಾಗಿ, ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಬೇಡಿಕೆಯ ಮನವಿ ಪತ್ರ ಸಲ್ಲಿಸಲಾಯಿತು. ಪಾದಯಾತ್ರೆಯುದ್ದಕ್ಕೂ ಕಾರ್ಯಕರ್ತರು ವಿವಿಧ ಘೋಷಣೆಗಳನ್ನು ಕೂಗಿದರು.
ಉಡುಪಿ ಜಿಲ್ಲೆಯ ನಿವೇಶನ ರಹಿತರಿಗೂ ನಿವೇಶನ ಮಂಜೂರು ಮಾಡಬೇಕು, ಸರಕಾರಿ ಜಾಗದಲ್ಲಿ ಅಕ್ರಮವಾಗಿ ವಾಸಿಸುವವರ ಜಮೀನನ್ನು ಸಕ್ರಮಗೊಳಿಸಬೇಕು, ರೈತರ ಕುಮ್ಕಿ ಹಕ್ಕಿನ ಜಾಗದ ದಾಖಲೆಯನ್ನು ಒದಗಿಸಬೇಕು, ಹಕ್ಕುಪತ್ರ ರಹಿತರಿಗೆ ತಕ್ಷಣ ಹಕ್ಕುಪತ್ರ ಒದಗಿಸಬೇಕು, ಮೂಲಗೇಣಿ ಹಕ್ಕಿನ ನಿವಾರಣೆಗೆ ಕ್ರಮ ಕೈಗೊಳ್ಳಬೇಕು, ಪಡಿತರ ಚೀಟಿಯ ಸಮರ್ಪಕ ವಿತರಣೆಗೆ ಕ್ರಮ ಕೈಗೊಳ್ಳಬೇಕು, ಭೂ ಮಾಫಿಯಾಕ್ಕೆ ಕಡಿವಾಣ ಹಾಕಬೇಕು, ಜಿಲ್ಲೆಯಲ್ಲಿ ತಳವೂರಿರುವ ಯುಪಿಸಿಎಲ್ (ನಾಗಾರ್ಜುನ), ಪಾದೂರು ಕಚ್ಛಾತೈಲ, ಸುಜ್ಲಾನ್ ಯೋಜನೆಗಳಲ್ಲಿ ನಿರ್ವಸಿತರಾದವರಿಗೆ ಸೂಕ್ತ ಪರಿಹಾರ ಮತ್ತು ಉದಸ್ಯೋಗ ನೀಡಬೇಕು, ನಿರ್ವಸಿತರಿಗಾಗಿ ಪ್ರತ್ಯೇಕ ಬಡಾವಣೆ ನಿರ್ಮಿಸಬೇಕು, ಸ್ಥಳೀಯ ಅಭಿವೃದ್ಧಿಗೆ ಯೋಜನೆ ರೂಪಿಸಬೇಕು, ಬ್ರಹ್ಮಾವರ ಸಕ್ಕರೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕು, ಕಡಲ್ಕೊರೆತಕ್ಕೆ ಶಾಶ್ವತ ಯೋಜನೆಯನ್ನು ರೂಪಿಸಬೇಕು ಇತ್ಯಾದಿ ಬೇಡಿಕೆಗಳನ್ನೂ ಇದೇ ಸಂದರ್ಭದಲ್ಲಿ ಮಂಡಿಸಲಾಯಿತು.
ಕೇಂದ್ರ ಮತ್ತು ರಾಜ್ಯ ಸರಕಾರದ ಭ್ರಷ್ಠಾಚಾರದ ವಿರುದ್ಧವೂ ಪಾದಯಾತ್ರೆಯಲ್ಲಿ ಪ್ರತಿಭಟನೆಯಲ್ಲಿ ಖಂಡನೆ ವ್ಯಕ್ತಪಡಿಸಲಾಯಿತು.
ಜೆಡಿಎಸ್ ಮುಖಂಡರುಗಳಾದ ದೇವಿಪ್ರಸಾದ್ ಶೆಟ್ಟಿ, ವಾಸುದೇವ ರಾವ್, ಶಾಲಿನಿ ಶೆಟ್ಟಿ ಕೆಂಚನೂರು, ದಿಲೇಶ್ ಶೆಟ್ಟಿ ಬೆಳ್ಳಂಪಳ್ಳಿ, ಶುಭಕರ್ ಪಡುಬಿದ್ರಿ, ಕೆಮ್ತೂರು ನಾಗರಾಜ ಭಟ್, ತಾರಾನಾಥ ಶೆಟ್ಟಿ ಕೊಡವೂರು, ಜಯಕುಮಾರ್ ಪರ್ಕಳ, ಪ್ರದೀಪ್, ರಾಜೇಶ್ ಸುವರ್ಣ ಮೊದಲಾದವರು ಪಾದಯಾತ್ರೆಯ ನೇತೃತ್ವ ವಹಿಸಿದ್ದರು.

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದ ವಿವಿಧ ಪ್ರದೇಶಗಳಿಗೆ ಸೇರಿದ 10 ಮಂದಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇಂದು ಉಡುಪಿ ತಾಲೂಕು ಕಚೇರಿ ಬಳಿಯ ಕೆನರಾ ಟವರ್ಸ್ ನಲ್ಲಿರುವ ಜೆಡಿಎಸ್ ಪಕ್ಷದ ಉಡುಪಿ ಬ್ಲಾಕ್ ಕಚೇರಿಯ ಸಭಾಂಗಣದಲ್ಲಿ ನಡೆಸ ಸರಳ ಸಮಾರಂಬದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಮಾಜಿ ಶಾಸಕ ಯು.ಆರ್ ಸಭಾಪತಿ ಹಾಗೂ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಗುಲಾಂ ಮೊಹಮ್ಮದ್ ಇವರು ಪಕ್ಷದ ಬಾವುಟವನ್ನು ನೂತನ ಕಾರ್ಯಕರ್ತರಿಗೆ ಹಸ್ತಾಂತರಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ವಾಸುದೇವ ರಾವ್, ಕಾರ್ಯಾಧ್ಯಕ್ಷ ಸುರೇಶ್ ಸುವರ್ಣ, ನೇಕಾರರ ಘಟಕದ ಜಿಲ್ಲಾಧ್ಯಕ್ಷ ದಿವಾಕರ ಸಾಲಿಯಾನ್, ಅಲ್ಪಸಂಖ್ಯಾತ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಬಿ.ಉಮ್ಮರ್ ಫಾರೂಕ್, ಉಡುಪಿ ಬ್ಲಾಕ್ ಅಧ್ಯಕ್ಷ ಜಯಕುಮಾರ್ ಪರ್ಕಳ, ಕಾರ್ಯದರ್ಶಿ ಮುಹಮ್ಮದ್ ಮಾರ್ಪು, ಮಾಜಿ ತಾ.ಪಂ.ಸದಸ್ಯ ವಸಂತ ಮರ್ಣೆ, ಶೇಖ್ ಅಹಮ್ಮದ್ ಪಡುಬಿದ್ರಿ, ಶ್ರೀಮತಿ ಸುನಿತಾ ಲೋಕನಾಥ ಕೋಟ್ಯಾನ್ ಕೀಳಿಂಜೆ ಹಾಗೂ ಹರೀಶ್ ಕೋಟ್ಯಾನ್ ಕೀಳಿಂಜೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಶಶಿಧರ ಅಮೀನ್ ವಡಭಾಂಡೇಶ್ವರ, ಶ್ರೀಮತಿ ಚಂದ್ರಾವತಿ ಕೊಡವೂರು, ಪ್ರಭಾಕರ ಆಚಾರಿ ಬಡಾನಿಡಿಯೂರು, ಸುರೇಶ್ ಕೋಟ್ಯಾನ್, ಶ್ರೀಧರ ಆಚಾರ್ಯ ಗರಡಿಮಜಲು, ಶಶಿಧರ ಗರಡಿಮಜಲು, ಶಶಿಕುಮಾರ್ ಗರಡಿಮಜಲು, ಸುರೇಶ್ ವಡಭಾಂಡೇಶ್ವರ, ಶೇಖರ ಅಮೀನ್ ವಡಭಾಂಡೇಶ್ವರ ಹಾಗೂ ಹರೀಶ್ ವಡಭಾಂಡೇಶ್ವರ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಉಡುಪಿ: ರಾಜ್ಯದ ಬಿಜೆಪಿ ಸರಕಾರದ ದುರಾಚಾರದಿಂದ ಬೇಸತ್ತ ಮತದಾರ ಒಗ್ಗಟ್ಟಿನಿಂದ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಗೆ ಮತ ನೀಡಿದ್ದಾನೆ. ಮತದಾರ ನೀಡಿದ ತೀರ್ಪಿನ್ನು ಸ್ವಾಗತಿಸುತ್ತೇವೆ. ಆದರೆ, ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರು ಜೆಡಿಎಸ್ ವಿರುದ್ದ ಬಹಳಷ್ಟು ಅಪಪ್ರಚಾರ ನಡೆಸಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಪೂರಕವಾದ ಬೆಳವಣಿಗೆಯಲ್ಲ ಎಂದು ಜೆಡಿಎಸ್ ರಾಜ್ಯ ನಾಯಕ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಮಹೇಂದ್ರ ಕುಮಾರ್ ತಿಳಿಸಿದ್ದಾರೆ.
ಉಡುಪಿಯ ಖಾಸಗಿ ಹೋಟೇಲೊಂದರಲ್ಲಿ ಮಾ.26 ರಂದು ನಡೆಸಿದ ಮಾದ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ಈ ಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಲ್ಲ. ರಾಜ್ಯದಲ್ಲಿ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ಹೇಳಿದ ಮಹೇಂದ್ರ ಅವರು, ಜೆಡಿಎಸ್ ನ ಸೋಲಿಗೆ ಯಾರೂ ಹೊಣೆಯಲ್ಲ. ಸೋಲಿನ ಬಗ್ಗೆ ಅವಲೋಕನ ಮಾಡಿಕೊಂಡು ವಿಧಾನಸಭಾ ಚುನಾವಣೆಗಾಗಿ ಪಕ್ಷವನ್ನು ಸಂಘಟಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಮಹಾ ಪ್ರಧಾನ ಕಾರ್ಯದರ್ಶಿ ಲೂಯಿಸ್ ಲೋಬೋ, ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಕೆಂಚನೂರು ಶಾಲಿನಿ ಶೆಟ್ಟಿ, ಯುವ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ದಿಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಹಾಗೂ ರಿಝ್ವಾನ್ ಉಪಸ್ಥಿತರಿದ್ದರು.

ಉಡುಪಿ: ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಒಂದು ಎ ಟೀಮ್ ಆದರೆ, ಇನ್ನೊಂದು ಬಿ ಟೀಮ್ ಅಷ್ಟೆ. ಬಿಜೆಪಿ ಜೊತೆಗೆ ಜೆಡಿಎಸ್ ಕೂಡಿಕೆ ಮಾಡಿಕೊಂಡಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪದಲ್ಲಿ ಹುರುಳಿಲ್ಲ. ಇಂತಹ ಆರೋಪಗಳಿಗೆ ಮಹತ್ವ ಕೊಡಬೇಕಾದ ಅಗತ್ಯವೂ ಇಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ತಿಳಿಸಿದ್ದಾರೆ.
ಉಡುಪಿಯ ಖಾಸಗಿ ಹೋಟೇಲಿನಲ್ಲಿ ಮಾ.13 ರಂದು ಕರೆದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಬಿಜೆಪಿ ಆಪರೇಷನ್ ಕಮಲ ಮಾಡುತ್ತಿದ್ದಾಗ, ರಾಜಕೀಯ ವ್ಯವಸ್ಥೆಯಲ್ಲಿ ಇದು ಕೆಟ್ಟ ಬೆಳವಣಿಗೆಯಾಗಿದ್ದು ಇದನ್ನು ನಿರ್ಮೂಲನೆ ಮಾಡಬೇಕೆಂದು ಧ್ವನಿ ಎತ್ತಿದವನು ತಾನು. ಆಗ ಸಕ್ರೀಯವಾಗಿ ಪ್ರತಿಕ್ರಿಯಿಸದವರು ಈಗ ಜಾತ್ಯಾತೀತತೆಯ ಬಗ್ಗೆ ಮಾತನಾಡುತ್ತಾರೆ. ರಂಗನಾಥ ಮಿಶ್ರ ವರದಿ, ಸಾಚಾರ್ ಸಮಿತಿಯ ವರದಿಯ ಅನುಷ್ಟಾನ ಆಗದ ಬಗ್ಗೆ ಮೊದಲು ಕಾಂಗ್ರೆಸ್ ನಾಯಕರು ತಮ್ಮಲ್ಲೇ ಪ್ರಶ್ನೆ ಮಾಡಿಕೊಳ್ಳಬೇಕು, ಅದು ಬಿಟ್ಟು ಮನಸ್ಸಿಗೆ ಬಂದ ಹಾಗೆ ಮಾತಾಡಬಾರದು ಎಂದು ದೇವೇಗೌಡರು ಸ್ಪಷ್ಟಪಡಿಸಿದರು.
ಮೂರನೇ ರಂಗವನ್ನು ಮತ್ತೆ ಸಕ್ರೀಯಗೊಳಿಸುವ ಉದ್ದೇಶ ತನಗಿಲ್ಲ. ಆದರೆ ಮೂರನೇ ರಂಗಕ್ಕೆ ಕರ್ನಾಟಕದ ಕೊಡುಗೆ ನೀಡುವ ನಿಟ್ಟಿನಲ್ಲಿ ಚುನಾವಣೆಯಲ್ಲಿ ಸಕ್ರೀಯ ಪಾತ್ರ ವಹಿಸುವುದಾಗಿ ಹೇಳಿದ ಮಾಜಿ ಪ್ರಧಾನಿ, ಪ್ರಾದೇಶಿಕ ಪಕ್ಷಗಳು ಗಟ್ಟಿಯಾಗಿರುವಲ್ಲಿ ಮತದಾರರು ರಾಷ್ಟ್ರೀಯ ಪಕ್ಷಗಳ ಬದಲು ಪ್ರಾದೇಶಿಕ ಪಕ್ಷಗಳ ಕಡೆಗೆ ಒಲವು ವ್ಯಕ್ತಪಡಿಸುತ್ತಾರೆ. ಉತ್ತರ ಪ್ರದೇಶ ಚುನಾವಣೆ ಇದಕ್ಕೆ ಸಾಕ್ಷಿ ಎಂದು ದೇವೇಗೌಡರು ತಿಳಿಸಿದರು.
ಇದೀಗ ಜನಾಭಿಪ್ರಾಯ ಬದಲಾಗಿದೆ. ಹೊಸ ಬೆಳವಣಿಗೆಯ ನಿರೀಕ್ಷೆಯಲ್ಲಿ ತಾನಿದ್ದೇನೆ. ಆದರೆ ಚುನಾವಣಾ ಫಲಿತಾಂಶದ ಬಗ್ಗೆ ಊಹಾಪೋಹದ ಆಧಾರದಲ್ಲಿ ಮಾತನಾಡಲಾರೆ ಎಂದು ಎಚ್.ಡಿ.ದೇವೇಗೌಡ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಸಕ್ರೀಯ ಕಾರ್ಯಕರ್ತೆ ಜೇಸಿ ಮಂಜುಳಾ ವಿಷ್ಣುಪ್ರಸಾದ್ ಅವರಿಗೆ ದೇವೇಗೌಡ ಅವರು ಜೆಡಿಎಸ್ ಬಾವುಟ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಮಾಧ್ಯಮಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಾರ್ಯಾಧ್ಯಕ್ಷ ಗುಲಾಂ ಮುಹಮ್ಮದ್, ಮಾಜಿ ಶಾಸಕ ಯು.ಆರ್.ಸಭಾಪತಿ, ಮಾಜಿ ಉಪ ಸಭಾಪತಿ ಡೇವಿಡ್ ಸಿಮಿಯೋನ್, ಶಾಸಕ ಪುಟ್ಟೇಗೌಡ, ಮಾಜಿ ಶಾಸಕ ಬೀದರ್ ನ ಅಜ್ಮಿ, ಎಂ.ಜಿ.ಹೆಗಡೆ, ಎಂ.ಬಿ.ಸದಾಶಿವ, ಜೆಡಿಎಸ್ ನೇಕಾರರ ವಿಭಾಗದ ರಾಜ್ಯಾಧ್ಯಕ್ಷ ಶ್ರೀನಿವಾಸ್, ಅಬ್ದುಲ್ ಅಜೀಂ, ಹೈದರ್ ಪರ್ತಿಪ್ಪಾಡಿ, ಮುಹಮ್ಮದ್, ರಾಜಣ್ಣ, ಡಿ.ಎಂ.ಅಸ್ಲಂ, ಜಯಕುಮಾರ್ ಪರ್ಕಳ, ರಾಜೇಶ್ ಸುವರ್ಣ ಆದಿ ಉಡುಪಿ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ: ಕಾಂಗ್ರೆಸ್ ಮಾಜಿ ಶಾಸಕ ಯು.ಆರ್.ಸಭಾಪತಿಯವರು ಮಾ.4 ರಂದು ಮದ್ಯಾಹ್ನ ಉಡುಪಿಯ ಕಿದಿಯೂರು ಹೋಟೇಲ್ ನಲ್ಲಿ ಜೆಡಿಎಸ್ ಪಕ್ಷವು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅಧಿಕ್ಋತವಾಗಿ ಜೆಡಿಎಸ್ ಗೆ ಸೇರ್ಪಡೆಯಾಗಿದ್ದಾರೆ.
ಜೆಡಿಎಸ್ ರಾಜ್ಯ ಮುಖಂಡರುಗಳಾದ ಮಧು ಬಂಗಾರಪ್ಪ, ಮಹೇಂದ್ರ ಕುಮಾರ್, ಗೋವಿಂದರಾಜು ಮೈಸೂರು, ಉಡುಪಿ- ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಅಭ್ಯರ್ಥಿ ಎಸ್.ಎಲ್.ಭೋಜೇ ಗೌಡ, ಜಿಲ್ಲಾ ನಾಯಕರುಗಳಾದ ದೇವಿಪ್ರಸಾದ್ ಶೆಟ್ಟಿ, ಗುಲಾಂ ಮುಹಮ್ಮದ್, ದಿಲೇಶ್ ಶೆಟ್ಟಿ ಬೆಳ್ಳಂಪಳ್ಳಿ, ಸಬ್ಲಾಡಿ ಮಂಜಯ್ಯ ಶೆಟ್ಟಿ, ವಾಸುದೇವ ರಾವ್, ಡಿ.ಆರ್.ರಾಜು, ರಾಜಣ್ಣ, ನೇಕಾರರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮುಂತಾದವರು ಉಪಸ್ಥಿತರಿದ್ದರು.

ಉಡುಪಿ: ಕಾಂಗ್ರೆಸ್ ನ ಮಾಜಿ ಶಾಸಕ ಯು.ಆರ್.ಸಭಾಪತಿ ಫೆ.4 ರಂದು ಉಡುಪಿಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಉಸ್ತುವಾರಿ ಮಹೇಂದ್ರ ಕುಮಾರ್, ಜಿಲ್ಲಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಾರ್ಯಾಧ್ಯಕ್ಷ ಗುಲಾಂ ಮುಹಮ್ಮದ್, ಮಹಿಳಾ ಜೆಡಿಎಸ್ ನ ಜಿಲ್ಲಾಧ್ಯಕ್ಷೆ ಶಾಲಿನಿ ಶೆಟ್ಟಿ ಕೆಂಚನೂರು, ಯುವ ಜೆಡಿಎಸ್ ರಾಜ್ಯ ಕಾರ್ಯದರ್ಶಿ ದಿಲೇಶ್ ಶೆಟ್ಟಿ ಬೆಳ್ಳಂಪಳ್ಳಿ ಹಾಗೂ ಜಿಲ್ಲಾಧ್ಯಕ್ಷ ವಾಸುದೇವ ರಾವ್ ಸಮಕ್ಷಮ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಮರ್ಣೆ ವಸಂತ ಪೂಜಾರಿ ಸಹಿತ ಇಬ್ಬರು ಮಾಜಿ ತಾ.ಪಂ.ಸದಸ್ಯರು, ಉಡುಪಿ ಬ್ಲಾಕ್ ಕಾಂಗ್ರಸ್ ಮಾಜಿ ಅಧ್ಯಕ್ಷ ಮಹಾಬಲ ಕುಂದರ್ ಸಹಿತ ಇತರ ಕೆಲವು ಮಂದಿ ಪ್ರಮುಖರು ಸಭಾಪತಿ ಜೊತೆಗೆ ಜೆಡಿಎಸ್ ಸೇರಲಿದ್ದಾರೆ ಎನ್ನಲಾಗಿದೆ.
ಮುಂದಕ್ಕೆ ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ ಕಾರಣ ಹಾಗೂ ಉಡುಪಿ- ಚಿಕ್ಕ ಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಪ್ರಚಾರ ಸಮಿತಿ ಅಧ್ಯಕ್ಷನನ್ನಾಗಿ ತಕ್ಷಣದಿಂದ ನೇಮಕ ಮಾಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಭಾಪತಿ ಜೆಡಿಎಸ್ ಸೇರ್ಪಡೆಯಾಗಲು ನಿರ್ಧರಿಸಿದರು ಎಂದು ಹೇಳಲಾಗಿದೆ.
ಕಳೆದ ವರ್ಷವೇ ಸಭಾಪತಿ ಜೆಡಿಎಸ್ ಸೇರಲು ತೀರ್ಮಾನಿಸಿದ್ದರು. ಇದಕ್ಕಾಗಿ ಅಭಿಮಾನಿಗಳ ಸಭೆಯನ್ನೂ ನಡೆಸಿದ್ದರು. ಮರಳಿ ರಾಜಕೀಯ ವರ್ಚಸ್ಸು ಗಳಿಸುವ ಉದ್ದೇಶದೊಂದಿಗೆ ಈ ಸಂದರ್ಭದಲ್ಲಿ ಯುಪಿಸಿಎಲ್ ವಿರೋಧಿ ಹೋರಾಟವನ್ನು ಸಭಾಪತಿ ಆರಂಬಿಸಿದ್ದರು. ಆದರೆ ಈ ಹೋರಾಟವೇ ಸಭಾಪತಿ ಜೆಡಿಎಸ್ ಸೇರುವ ಕಾರ್ಯಕ್ರಮಕ್ಕೆ ತಡೆಯಾಗಿ ಪರಿಣಮಿಸಿತು ಎನ್ನಲಾಗಿದೆ.
ಡಾ.ವಿ.ಎಸ್.ಆಚಾರ್ಯ ಜೊತೆ ನಿಕಟ ಬಾಂಧವ್ಯ ಹೊಂದಿದ್ದ ಸಭಾಪತಿ ಒಂದು ಹಂತದಲ್ಲಿ ಬಿಜೆಪಿ ಸೇರಲು ಮುಂದಾಗಿದ್ದರು. ಆದರೆ, ಬಿಜೆಪಿ ಕಾರ್ಯಕರ್ತರು ಸಭಾಪತಿಯವರ ಬಿಜೆಪಿ ಸೇರ್ಪಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಸಭಾಪತಿಯವರ ಬಿಜೆಪಿ ಸೇರ್ಪಡೆ ಸಾಧ್ಯವಾಗಿರಲಿಲ್ಲ.
ಇದೀಗ ಆಚಾರ್ಯರು ನಿಧನರಾದ ಹಿನ್ನೆಲೆಯಲ್ಲಿ ಇನ್ನು ಬಿಜೆಪಿ ಸೇರ್ಪಡೆ ಅಸಾಧ್ಯ ಎಂಬುದನ್ನು ಮನಗಂಡ ಯು.ಆರ್.ಸಭಾಪತಿ ಅಂತಿಮವಾಗಿ ಜೆಡಿಎಸ್ ಸೇರುವ ಮೂಲಕ ಮತ್ತೆ ತನ್ನ ರಾಜಕೀಯ ಭವಿಷ್ಯವನ್ನು ಕಂಡುಕೋಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಉಡುಪಿ: ರಾಮನ ಹೆಸರಲ್ಲಿ ಅಧಿಕಾರಕ್ಕೆ ಬಂದು ಸದನದಲ್ಲಿ ಬ್ಲೂಫಿಲಂ ವೀಕ್ಷಿಸುವ ಮೂಲಕ ಅನಾಚಾರ ನಡೆಸಿ ಕರ್ನಾಟಕದ ಮಾನವನ್ನು ಹರಾಜು ಹಾಕಿದ ಸಚಿವರುಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಹಾಕಬೇಕು, ಇವರ ಶಾಸಕತ್ವವನ್ನು ರದ್ದುಪಡಿಸಬೇಕು ಎಂದು ಯುವ ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಬೆಳ್ಳಂಪಳ್ಳಿ ದಿಲೇಶ್ ಡಿ. ಶೆಟ್ಟಿ ಅವರು ಒತ್ತಾಯಿಸಿದ್ದಾರೆ.

ಯುವ ಜನತಾದಳ (ಜಾತ್ಯತೀತ) ದ ವತಿಯಿಂದ ಫೆ.8 ರಂದು ಸಂಜೆ ಹಿರಿಯಡ್ಕ ಬಸ್ ನಿಲ್ದಾಣದಲ್ಲಿ ಸಚಿವರು ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ ಪ್ರಕರಣ ಮತ್ತು ಮಲ್ಪೆಯ ರೇವ್ ಪಾರ್ಟಿಯನ್ನು ಖಂಡಿಸಿ ನಡೆದ ಬಹಿರಂಗ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಯುವ ಜೆಡಿಎಸ್ ನ ಜಿಲ್ಲಾಧ್ಯಕ್ಷ ವಾಸುದೇವ ರಾವ್ ಅವರು ಮಾತನಾಡುತ್ತಾ, ವಿಧಾನ ಸಭೆಯನ್ನು ವಿಸರ್ಜಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ರಂಜನ್ ಶೆಟ್ಟಿ, ರಮೇಶ್ ಶೆಟ್ಟಿ ಬೆಳ್ಳಂಪಳ್ಳಿ, ಗಿರೀಸ್ ಶೆಟ್ಟಿ, ದೇವರಾಜ್ ಹೆಜಮಾಡಿ, ರಾಘವೇಂದ್ರ ಮಡಿವಾಳ, ಶ್ರೀಧರ ಪೂಜಾರಿ, ಜಗದೀಶ ಪೂಜಾರಿ, ಸುಂದರ ಅಂಜಾರು, ರಾಜೇಶ್ ಮೂಡುಬೆಟ್ಟು, ನವೀನ್ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.
ಸದನದಲ್ಲಿ ಬ್ಲೂಫಿಲಂ ವೀಕ್ಷಿಸಿದ ಸಚಿವರಾದ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ್ ಹಾಗೂ ಕೃಷ್ಣ ಜೆ. ಪಾಲೇಮಾರ್ ಇವರ ಪ್ರತಿಕೃತಿಗಳನ್ನು ಪ್ರತಿಭಟನಾಕಾರರು ಸಾರ್ವಜನಿಕವಾಗಿ ದಹಿಸಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ವೇಶ್ಯಾವಾಟಿಕೆಗೆ ಪ್ರೋತ್ಸಾಹ ನೀಡಿದ ರಾಜ್ಯ ಸರಕಾರಕ್ಕೆ, ಮದಿರೆ, ಗಾಂಜಾ ಸಪ್ಲೈ ಮಾಡಿದ ಸರಕಾರಕ್ಕೆ, ಬ್ಲೂಫಿಲಂ ನೋಡಿದ ಸಚಿವರಿಗೆ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು.

ಉಡುಪಿ: ಜೆಡಿಎಸ್ ಪಕ್ಷದ ುಡುಪಿ ಜಿಲ್ಲಾ ಕಾರ್ಯಾಧ್ಯಕ್ಷ ಗುಲಾಂ ಮಹಮ್ಮದ್ ಅವರನ್ನು ಬೆಂಗಳೂರಿನ ಸಿಸಿಬಿ ಪೋಲೀಸರು ಇಂದು ಬೆಳಗ್ಗೆ ಬಿಡುಗಡೆಗೊಳಿಸಿದ್ದಾರೆ.
ಕುಖ್ಯಾತ ಭೂಗತ ಲೋಕದ ದೊರೆ ರವಿ ಪೂಜಾರಿಯ ಸಂಪರ್ಕ ಇದೆ ಎಂದು ಆರೋಪ ಹೊರಿಸಿ ಸೋಮವಾರ ಬೆಳಗ್ಗೆ 10 ಗಂಟೆಗೆ ಗುಲಾಂ ಅವರನ್ನು ಅವರ ಹೆಜಮಾಡಿಯಲ್ಲಿರುವ ನಿವಾಸದಿಂದ ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದರು ಸಿಸಿಬಿ ಪೋಲೀಸರು.
ಒಂದಿಡೀ ದಿನ ವಿಚಾರಣೆ ನಡೆಸಿದ ಪೋಲಿಸರು ಬುಧವಾರ ಬೆಳಗ್ಗೆ ಬಿಡುಗಡೆಗೊಳಿಸಿದರು.
ಹೀಗೆ ಬಿಡುಗಡೆಗೊಳಿಸುವುದಾದರೆ, ಬಂಧಿಸುವ ಅಗತ್ಯವಿತ್ತೇ ?, ಕೇವಲ ವಿಚಾರಣೆ ನಡೆಸುವುದು ಮಾತ್ರ ಉದ್ದೇಶವಾಗಿತ್ತು ಎಂದಾದರೆ, ಹೆಜಮಾಡಿಯಲ್ಲಿರುವ ಅವರ ನಿವಾಸದಲ್ಲಿಯೇ ವಿಚಾರಣೆ ನಡೆಸಬಹುದಿತ್ತಲ್ಲ ? ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಬವಿಸಿದ್ದು, ಪೋಲೀಸರೇ ಉತ್ತರಿಸಬೇಕಾಗಿದೆ.

ಉಡುಪಿ: ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ಜಿಲ್ಲಾಡಳಿತದ ವತಿಯಿಂದ 3 ದಿನಗಳ ಕಾಲ ಮುಕ್ತ ಕಾಮಕೇಳಿ ಸಹಿತವಾಗಿ ನಡೆದ ರೇವ್ ಪಾರ್ಟಿಯನ್ನು ಖಂಡಿಸಿ ಫೆ.7 ರಂದು ಬೆಳಗ್ಗೆ ಜೆಡಿಎಸ್ ಪಕ್ಷದ ಜಿಲ್ಲಾ ಸಮಿತಿಯ ವತಿಯಿಂದ ಉಡುಪಿ ನಗರದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ.
ಸಭೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ಜಿ.ಹೆಗಡೆ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.