ಉಡುಪಿ: ಭ್ರಷ್ಟ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸುವಂತೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ನಿತ್ಯಾಣದ ಸ್ವಾಮಿ ಮತದಾರರಿಗೆ ಕರೆ ನೀಡಿದ್ದಾರೆ. ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಎ.30 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಸಿಪಿಐಎಂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸದ ಕ್ಷೇತ್ರಗಳಲ್ಲಿ ಸಿಪಿಐ, ಫಾರ್ವರ್ಡ್ ಬ್ಲಾಕ್, ಲೋಕಸತ್ತಾ ಮತ್ತು ಸರ್ವೋದಯ ಕರ್ನಾಟಕ ಪಕ್ಷಗಳ ಅಭ್ಯರ್ಥಿಗಳನ್ನು ಬೆಂಬಲಿಸಲು ಪಕ್ಷ ರಾಜ್ಯ ಮಟ್ಟದಲ್ಲಿ ನಿರ್ಧರಿಸಿದೆ ಎಂದು ಸ್ವಾಮಿ ತಿಳಿಸಿದರು.
ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐಎಂ ಪಕ್ಷದಿಂದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮತ್ತು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಶಂಕರ್ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಬಗ್ಗೆ ಭ್ರಮನಿರಸನಗೊಂಡಿರುವ ಬೈಂದೂರು ಕ್ಷೇತ್ರದ ಮತದಾರರು, ಇಲ್ಲಿ ಕೆ.ಶಂಕರ್ ಅವರ ಕಡೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ. ಬಡ ಕಾರ್ಮಿಕರು, ನಿವೇಶನರಹಿತರು, ಪಡಿತರ ಚೀತಿ ವಂಚಿತರು ಮೊದಲಾದವರ ಬಗ್ಗೆ ಪಕ್ಷ ನಡೆಸುತ್ತಿರುವ ಹೋರಾಟವನ್ನು ಇಲ್ಲಿನ ಮತದಾರರು
ಗಮನಿಸಿದ್ದಾರೆ ಎಂದು ನಿತ್ಯಾನಂದ ಸ್ವಾಮಿ ಹೇಳಿದರು.
ಉಡುಪಿ, ಕಾಪು, ಕಾರ್ಕಳ ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿದ್ದು, ಇಲ್ಲೆಲ್ಲಾ ಭ್ರಷ್ಟ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸಲು ಜೆಡಿಎಸ್ ಅಭ್ಯರ್ಥಿಗಳನ್ನು
ಬೆಂಬಲಿಸುವಂತೆ ಸಿಪಿಐಎಂ ಮತದಾರರನ್ನು ವಿನಂತಿಸಿದೆ.
ಸಿಪಿಐಎಂ ಪಕ್ಷ ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ದೊಡ್ಡ ಸಂಕಟವಾಗಿದೆ. ಈ ಹಿಂದಿನ ಬಹುತೇಕ ಚುನಾವಣೆಯಲ್ಲಿ ಸಿಪಿಐಎಂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಬಿಜೆಪಿ ಸೋಲಿಸುವ ಉದ್ಧೇಶದೊಂದಿಗೆ ಕಾಂಗ್ರೆಸ್ ಗೆ ಮತ ಹಾಕುತ್ತಿದ್ದರು. ಆದರೆ, ಈ ಬಾರಿ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡನ್ನೂ ಸೋಲಿಸಲು ಕರೆ ನೀಡಿದ ಕಾರಣ ಈ ಬಾರಿ ಇದು ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಕಗ್ಗಂಟಾಗಿ ಪರಿಣಮಿಸಲಿದೆ.
ಬೈಂದೂರು ಕ್ಷೇತ್ರದ ಅಭ್ಯರ್ಥಿ ಕೆ.ಶಂಕರ್ ಹಾಗೂ ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
Posts Tagged ‘dyfi’
ಉಡುಪಿ: ಕಾಂಗ್ರೆಸ್, ಬಿಜೆಪಿ ಸೋಲಿಸಲು ಮತದಾರರಿಗ ೆ ಸಿಪಿಐಎಂ ಕರೆ
Posted: April 30, 2013 in UncategorizedTags: aituc, bjp, citu, congress, cpim, cpm, dyfi, Election, jds, karnataka election, sfi, udupi election, udupibits, udupibits.com, www.udupibits.com
ಶಿಕ್ಷಣ ಸಚಿವ ಕಾಗೇರಿಯವರ ಆದೇಶವೇ ಪರೀಕ್ಷೆ ಮುಂ ದೂಡಿಕೆಗೆ ಕಾರಣ
Posted: February 3, 2013 in UncategorizedTags: abvp, aiyf, ಕರ್ನಾಟಕ ಸರಕಾರ, ಕಾಂಗ್ರೆಸ್, ಕಾಲೇಜು, ಕೆಜೆಪಿ, ಜೆಡಿಎಸ್, ದುರುಪಯೋಗ, ದುರ್ಬಳಕೆ, ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆ, ಪರೀಕ್ಷೆ, ಬಿಎಸ್ಆರ್, ಬಿಜೆಪಿ, ಮಕ್ಕಳು, ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿದ್ಯಾರ್ಥಿಗಳು, ವಿಭಾಗ ಸಾಂಘಿಕ್, ಸಾರ್ವಜನಿಕ ಶಿಕ್ಷಣ ಇಲಾಖೆ, bjp, bsr, cfi, college, congress, dyfi, exam, jds, kfd, kjp, kksv, ldf, msf, pfi, rss, sfi, students, udf, vhp, wfi
ಉಡುಪಿ: ರಾಜ್ಯದ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಆದೇಶ ಮತ್ತು ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಪೇಂದ್ರ ನಾಯಕ್ ರವರ ಮೌಕಿಕ ಸೂಚನೆಯ ಮೇರೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ದ್ವಿತಿಯ ಪಿಯಿಸಿ ಮತ್ತು ಎಸ್ಎಸ್ಎಲ್ ಸಿ
ಪ್ರಿಪೆರ್ಟರಿ ಪರೀಕ್ಷೆಗಳನ್ನು ಮುಂದೂಡಿದ್ದಾರೆ.
ಮಂಗಳೂರು ತಾಲೂಕಿನ ಬಜಪೆ ಸಮೀಪದ ಕೆಂಜಾರಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಇಂದುನಡೆಸುತ್ತಿರುವ ವಿಭಾಗ ಸಾಂಘಿಕ್ ನ ಯಶಸ್ಸಿಗಾಗಿ ಮಕ್ಕಳ ಪರೀಕ್ಷೆಯನ್ನು ಮುಂದೂಡುವಂತೆ ಸಚಿವ ಕಾಗೇರಿಯವರು ಆದೇಶ ನೀಡಿದ ಕಾರಣ, ಇಲಾಖಾಧಿಕಾರಿಗಳು ಪರೀಕ್ಷೆ ಮುಂದೂಡಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ಈ ಪರೀಕ್ಷೆಗಳನ್ನು ಮುಂದೂಡಲಾಗಿರುವ ಬಗ್ಗೆ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿ ಎಸ್.ಎಸ್.ಶಿಂಧಾ ಅವರಿಂದ ಹಾಗೂ ಪ್ರೌಢಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗೇಂದ್ರ ಮಧ್ಯಸ್ಥರಿಂದ ಅಂಚೆ ಕಾರ್ಡು ಮೂಲಕ ಸೂಚಿಸಲಾಗಿದೆ. ಕೆಲವು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಮೌಕಿಕವಾಗಿ ಮಾತ್ರ ತಿಳಿಸಲಾಗಿದೆ. ಶಿಕ್ಷಣ ಸಂಸ್ಥೆಗಳಿಗೆ ಬರೆದ ಅಂಚೆ ಕಾರ್ಡ್ ನಲ್ಲಾಗಲೀ, ಮೌಕಿಕವಾಗಿ ತಿಳಿಸಿದ
ಸಂದರ್ಭದಲ್ಲಾಗಲೀ ಪರೀಕ್ಷೆಗಳನ್ನು ಮುಂದೂಡಲು ಏನು ಕಾರಣ ಎಂಬುದನ್ನು ತಿಳಿಸಲಾಗಿಲ್ಲ. ನಿಜವಾದ ಕಾರಣವನ್ನು ಮುಚ್ಚಿಡಲಾಗಿದೆ.
ಫೆ.3 ರಂದು ಮಂಗಳೂರು ತಾಲೂಕಿನ ಬಜಪೆ ಸಮೀಪದ ಕೆಂಜಾರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಆಯೋಜಿಸಿದ ‘ವಿಭಾಗ ಸಾಂಘಿಕ್’ ನಲ್ಲಿ
ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡುವ ಏಕೈಕ ಉದ್ಧೇಶದಿಂದ ಆರ್ಎಸ್ಎಸ್ ನಾಯಕರು ಸಚಿವರ ಮೂಲಕ ಅಧಿಕಾರಿಗಳಿಗೆ ಆದೇಶ ಹೊರಡಿಸಿ ಪರೀಕ್ಷೆಗಳನ್ನು ಮುಂದೂಡಿಸಿದ್ದಾರೆ.
ಆಡಳಿತ ಪಕ್ಷ ಮತ್ತು ಆಡಳಿತ ಪಕ್ಷವನ್ನು ನಿಯಂತ್ರಿಸುತ್ತಿರುವ ಸಂಗ ಪರಿವಾರದ ನಾಯಕರ ಒತ್ತಡದಿಂದಾಗಿ ಅಧಿಕಾರಿಗಳು ಮಕ್ಕಳನ್ನು ಬಲಿಪಶು ಮಾಡಿರುವುದು ಇದೀಗ ಸ್ಪಷ್ಟವಾಗಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡ ವಿಭಾಗ ಸಾಂಘಿಕ್ ನಲ್ಲಿ ಒಂದು ಲಕ್ಷ ಸ್ವಯಂಸೇವಕರನ್ನು ಸೇರಿಸುವ ಗುರಿಯನ್ನು ಸಂಘದ ಸರ್ವಾಧಿಕಾರಿಗಳು ಹೊಂದಿದ್ದಾರೆ. ಆದರೆ ಒಂದು ಲಕ್ಷ ಸ್ವಯಂಸೇವಕರನ್ನು ಸೇರಿಸಲು ಸಂಘದ ನಾಯಕರಿಗೆ ಕಷ್ಟವಾಗುತ್ತಿದೆ ಎನ್ನಲಾಗಿದೆ. ಇದರಲ್ಲಿ ಸಂಘದ ಸರ ಸಂಘ ಚಾಲಕರ ಸಹಿತ ಅನೇಕ ಮಂದಿ ಪ್ರಮುಖರು ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಲಿರುವುದರಿಂದ ಮತ್ತು ಮುಂದಿನ
ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕೆಂಬ ಜಿದ್ದಿನಲ್ಲಿ ಬಿದ್ದಿರುವ ಸಂಘಕ್ಕೆ ವಿಭಾಗ್ ಸಾಂಘಿಕ್ ಪ್ರತಿಷ್ಟೆಯ ಮತ್ತು ಅತೀ ತುರ್ತಿನ ವಿಷಯವಾಗಿದೆ.
ಪ್ರಿಪೆರ್ಟರಿ ಪರೀಕ್ಷೆಯ ಒತ್ತಡದಲ್ಲಿರುವ ವಿದ್ಯಾರ್ಥಿಗಳು ವಿಭಾಗ್ ಸಾಂಘಿಕ್ ನಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಸಂಘದ ನಾಯಕರು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡರು, ಆ ಮೂಲಕ ಪರೀಕ್ಷೆಗಳನ್ನು ಮುಂದೂಡುವಂತೆ ಮಾಡುವಲ್ಲಿ ಯಶಸ್ವಿಯಾದರು.
ಆರ್ಎಸ್ಎಸ್ ಎಂಬೊಂದು ಸಂಘಟನೆ ತಾನು ಹಮ್ಮಿಕೊಂಡಿರುವ ಒಂದು ಸಮಾವೇಶದ ಯಶಸ್ವಿಗಾಗಿ ಸರಕಾರವನ್ನು, ಸರಕಾರಿ ಅಧಿಕಾರಿಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಹೀಗೆ ಬಲಿಪಶು ಮಾಡುತ್ತಿರುವುದು, ದುರ್ಬಳಕೆ ಮಾಡುತ್ತಿರುವುದು ಇದೀಗ ವ್ಯಾಪಕ ಚರ್ಚೆ ಮತ್ತು ಭಾರೀ ಆಕ್ರೋಶಕ್ಕೂ ಕಾರಣವಾಗಿದೆ. ವರದಿ: ಶ್ರೀರಾಮ ದಿವಾಣ.
RSS ಸಾಂಘಿಕ್ ಯಶಸ್ಸಿಗಾಗಿ ಶಿಕ್ಷಣ ಇಲಾಖೆಯ ದುರ್ಬ ಳಕೆ-ಪರೀಕ್ಷೆ ಮುಂದೂಡಿಕೆ: ವ್ಯಾಪಕ ಆಕ್ರೋಶ
Posted: February 2, 2013 in UncategorizedTags: abvp, aiyf, ಕರ್ನಾಟಕ ಸರಕಾರ, ಕಾಂಗ್ರೆಸ್, ಕಾಲೇಜು, ಕೆಜೆಪಿ, ಜೆಡಿಎಸ್, ದುರುಪಯೋಗ, ದುರ್ಬಳಕೆ, ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆ, ಪರೀಕ್ಷೆ, ಬಿಎಸ್ಆರ್, ಬಿಜೆಪಿ, ಮಕ್ಕಳು, ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿದ್ಯಾರ್ಥಿಗಳು, ವಿಭಾಗ ಸಾಂಘಿಕ್, ಸಾರ್ವಜನಿಕ ಶಿಕ್ಷಣ ಇಲಾಖೆ, bjp, bsr, cfi, college, congress, dyfi, exam, jds, kfd, kjp, kksv, ldf, msf, pfi, rss, sfi, students, udf, vhp, wfi
ಉಡುಪಿ: ಜಿಲ್ಲೆಯಲ್ಲಿ ದ್ವಿತಿಯ ಪಿಯಿಸಿ ಮತ್ತು ಎಸ್ಎಸ್ಎಲ್ ಸಿ ಪ್ರಿಪೆರ್ಟರಿ ಪರೀಕ್ಷೆ ನಡೆಯುತ್ತಿದ್ದು, ಫೆಬ್ರವರಿ 4 ಸೋಮವಾರದ ಪರೀಕ್ಷೆಯನ್ನು ಫೆ. 5 ಮಂಗಳವಾರಕ್ಕೆ ಮುಂದೂಡಿರುವ ಶಿಕ್ಷಣ ಇಲಾಖೆಯ ಅಧಿಕಾರಿಗಳ ಕ್ರಮ ಭಾರೀ ಸಂಶಯಕ್ಕೆ ಕಾರಣವಾಗಿದೆ.
ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿರುವ ಈ ಪರೀಕ್ಷೆಗಳನ್ನು ಮುಂದೂಡಲಾಗಿರುವ ಬಗ್ಗೆ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿ ಎಸ್.ಎಸ್.ಶಿಂಧಾ ಅವರಿಂದ ಹಾಗೂ ಪ್ರೌಢಶಾಲೆಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ನಾಗೇಂದ್ರ ಮಧ್ಯಸ್ಥರಿಂದ ಅಂಚೆ ಕಾರ್ಡು ಮೂಲಕ ಸೂಚಿಸಲಾಗಿದೆ. ಕೆಲವು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಿಗೆ ಮೌಕಿಕವಾಗಿ ಮಾತ್ರ ತಿಳಿಸಲಾಗಿದೆ.
ಶಿಕ್ಷಣ ಸಂಸ್ಥೆಗಳಿಗೆ ಬರೆದ ಅಂಚೆ ಕಾರ್ಡ್ ನಲ್ಲಾಗಲೀ, ಮೌಕಿಕವಾಗಿ ತಿಳಿಸಿದ ಸಂದರ್ಭದಲ್ಲಾಗಲೀ ಪರೀಕ್ಷೆಗಳನ್ನು ಮುಂದೂಡಲು ಏನು ಕಾರಣ ಎಂಬುದನ್ನು ತಿಳಿಸಲಾಗಿಲ್ಲ. ನಿಜವಾದ ಕಾರಣವನ್ನು ಮುಚ್ಚಿಡಲಾಗಿದೆ.
ಫೆ.3 ರಂದು ಮಂಗಳೂರು ತಾಲೂಕಿನ ಬಜಪೆ ಸಮೀಪದ ಕೆಂಜಾರಿನಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಆಯೋಜಿಸಿದ ‘ವಿಭಾಗ ಸಾಂಘಿಕ್’ ನಲ್ಲಿ
ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡುವ ಏಕೈಕ ಉದ್ಧೇಶದಿಂದ ಆರ್ಎಸ್ಎಸ್ ನಾಯಕರು ಸರಕಾರಿ ಅಧಿಕಾರಿಗಳ ಮೂಲಕ ಪರೀಕ್ಷೆಗಳನ್ನು ಮುಂದೂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಿಭಾಗ ಸಾಂಘಿಕ್ ನಡೆಯುತ್ತಿರುವುದು ಫೆ. 3 ರಂದು ಆದಿತ್ಯವಾರ. ಪರೀಕ್ಷೆಗಳು ನಡೆಯಲಿದ್ದುದು ಫೆ.4 ಸೋಮವಾರ. ಹಾಗಾಗಿ ವಿಭಾಗ ಸಾಂಘಿಕ್ ಗೂ, ಸೋಮವಾರದ
ಪರೀಕ್ಷೆಗಳನ್ನು ಮಂಗಳವಾರಕ್ಕೆ ಮುಂದೂಡಿದ್ದಕ್ಕೂ ಸಂಬಂಧವಿಲ್ಲ ಎಂದು
ಸಮರ್ಥಿಸಲಾಗುತ್ತಿದೆ. ಆದರೆ, ಆದಿತ್ಯವಾರ ದಿನವಿಡೀ ನಡೆಯಲಿರುವ ವಿಭಾಗ ಸಾಂಘಿಕ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸೋಮವಾರದ ಪರೀಕ್ಷೆಗಳಿಗೆ ಪೂರ್ವ ಸಿದ್ಧತೆ ಮಾಡಲೂ ಕಷ್ಟಪಡಬೇಕಾಗುತ್ತದೆ. ಮಾತ್ರವಲ್ಲ, ಸೋಮವಾರದ ಪರೀಕ್ಷೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲೂ ತೊಂದರೆಯಾಗುತ್ತದೆ. ಆದುದರಿಂದ ಸೋಮವರದ ಪರೀಕ್ಷೆಗಳನ್ನು ಮಂಗಳವಾರಕ್ಕೆ ಮುಂದೂಡುವಂತೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಇದಕ್ಕಾಗಿ ಆರ್ಎಸ್ಎಸ್ ನಾಯಕರು, ಬಿಜೆಪಿ ಮುಖಂಡರು ಹಾಗೂ ಬಿಜೆಪಿ ಜನಪ್ರತಿನಿಧಿಗಳು, ಸಚಿವರ ಮೂಲಕ ಸರಕಾರಿ ಅಧಿಕಾರಿಗಳಿಗೆ ಮೌಕಿಕ ಒತ್ತಡ ಹಾಕುವ ಕೆಲಸ ಮಾಡಿದ್ದಾರೆ. ಆಡಳಿತ ಪಕ್ಷ ಮತ್ತು ಆಡಳಿತ ಪಕ್ಷವನ್ನು ನಿಯಂತ್ರಿಸುತ್ತಿರುವ ಸಂಘಟನೆಯ
ಒತ್ತಡದಿಂದಾಗಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ತಾವೇ ಸಬೂಬುಗಳನ್ನು ಸೃಷ್ಟಿಸಿಕೊಂಡು ಪರೀಕ್ಷೆ ಮುಂದೂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡ ವಿಭಾಗ ಸಾಂಘಿಕ್ ನಲ್ಲಿ ಒಂದು ಲಕ್ಷ ಸ್ವಯಂಸೇವಕರನ್ನು ಸೇರಿಸುವ ಗುರಿಯನ್ನು ಸಂಘದ ಸರ್ವಾಧಿಕಾರಿಗಳು ಹೊಂದಿದ್ದಾರೆ. ಆದರೆ ಒಂದು ಲಕ್ಷ ಸ್ವಯಂಸೇವಕರನ್ನು ಸೇರಿಸಲು ಸಂಘದ ನಾಯಕರಿಗೆ ಕಷ್ಟವಾಗುತ್ತಿದೆ ಎನ್ನಲಾಗಿದೆ. ಇದರಲ್ಲಿ ಸಂಘದ ಸರ ಸಂಘ ಚಾಲಕರ ಸಹಿತ ಅನೇಕ ಮಂದಿ ಪ್ರಮುಖರು ಭಾಗವಹಿಸಿ ದಿಕ್ಸೂಚಿ ಭಾಷಣ ಮಾಡಲಿರುವುದರಿಂದ ಮತ್ತು ಮುಂದಿನ
ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲೇಬೇಕೆಂಬ ಜಿದ್ದಿನಲ್ಲಿ ಬಿದ್ದಿರುವ ಸಂಘಕ್ಕೆ ವಿಭಾಗ್ ಸಾಂಘಿಕ್ ಪ್ರತಿಷ್ಟೆಯ ಮತ್ತು ಅತೀ ತುರ್ತಿನ ವಿಷಯವಾಗಿದೆ.
ಪ್ರಿಪೆರ್ಟರಿ ಪರೀಕ್ಷೆಯ ಒತ್ತಡದಲ್ಲಿರುವ ವಿದ್ಯಾರ್ಥಿಗಳು ವಿಭಾಗ್ ಸಾಂಘಿಕ್ ನಲ್ಲಿ ಪಾಲ್ಗೊಳ್ಳಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಸಂಘದ ನಾಯಕರು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಂಡರು, ಆ ಮೂಲಕ ಪರೀಕ್ಷೆಗಳನ್ನು ಮುಂದೂಡುವಂತೆ ಮಾಡುವಲ್ಲಿ ಯಶಸ್ವಿಯಾದರು ಎಂದು
ತಿಳಿದುಬಂದಿದೆ.
ಆರ್ಎಸ್ಎಸ್ ಎಂಬೊಂದು ಸಂಘಟನೆ ತಾನು ಹಮ್ಮಿಕೊಂಡಿರುವ ಒಂದು ಸಮಾವೇಶದ ಯಶಸ್ವಿಗಾಗಿ ಸರಕಾರವನ್ನು, ಸರಕಾರಿ ಅಧಿಕಾರಿಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಹೀಗೆ ಬಲಿಪಶು ಮಾಡುತ್ತಿರುವುದು, ದುರ್ಬಳಕೆ ಮಾಡುತ್ತಿರುವುದು ಇದೀಗ ವ್ಯಾಪಕ ಚರ್ಚೆ ಮತ್ತು ಭಾರೀ ಆಕ್ರೋಶಕ್ಕೂ ಕಾರಣವಾಗಿದೆ. ವರದಿ: ಶ್ರೀರಾಮ ದಿವಾಣ.
ಪೇಜಾವರ ಸ್ವಾಮೀಜಿ ದಲಿತರನ್ನು ಮಠಕ್ಕೆ ಕರೆಸಿ ಸ ಹಪಂಕ್ತಿ ಭೋಜನ ಮಾಡಲಿ: ನೀಲಾ ಸವಾಲು
Posted: January 7, 2013 in UncategorizedTags: ಆಹಾರ, ಆಹಾರ ಸಂಸ್ಕೃತಿ, ಉಡುಪಿ ಮಠ, ಉಡುಪಿ ಲಾಠಿಚಾರ್ಜ್, ಕೂಡಲ ಸಂಗಮ, ಚಳುವಳಿ, ಜನವಾದಿ ಮಹಿಳಾ ಸಂಘಟನೆ, ಜಯನ್ ಮಲ್ಪೆ, ತಾರತಮ್ಯ, ದಲಿತ ಸಂಘರ್ಷ ಸಮಿತಿ, ದಸಂಸ, ನೀಲಾ ಕೆ., ಪಂಕ್ತಿಬೇಧ, ಪೇಜಾವರ ಮಠ, ಪೇಜಾವರ ಸ್ವಾಮೀಜಿ, ಪೊಲೀಸ್ ಲಾಠಿಚಾರ್ಜ್, ಪ್ರತಿಭಟನೆ, ಬಸವಣ್ಣ, ಬಹುಸಂಸ್ಕೃತಿ, ಮಡೆಸ್ನಾನ, ಮಾಂಸಾಹಾರ, ಲಾಠಿಚಾರ್ಜ್, ವಚನ, ವಚನ ಚಳುವಳಿ, ಸಮಾಜ ಸುಧಾರಣಾ ಚಳುವಳಿ, ಸಮಾಜ ಸುಧಾರಣೆ, ಸಸ್ಯಾಹಾರ, ಸಾಮಾಜಿಕ ಕ್ರಾಂತಿ, ಸಿಪಿಎಂ, ಸಿಪಿಐಎಂ, ಹೋರಾಟ, basavanna, citu, cpim, cpm, dyfi, jwf, karnataka police, police, sfi, udupi police
ಉಡುಪಿ: ಪಂಕ್ತಿಬೇಧ, ಜಾತಿ ತಾರತಮ್ಯದ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಲಾಗುತ್ತಿದೆ. ಈ ಸಂಬಂಧವಾಗಿ ಪೇಜಾವರ ಸ್ವಾಮೀಜಿಯವರು ಗೊಂದಲವನ್ನು ಸೃಷ್ಟಿಸುತ್ತಾ, ರಾಜಕಾರಣಿಗಳ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮಡೆಸ್ನಾನ ಮತ್ತು ಪಂಕ್ತಿಬೇಧದ ವಿರುದ್ಧ ಪ್ರತಿಭಟಿಸಿದ ಸಿಪಿಐಎಂ ಕಾರ್ಯಕರ್ತರ ಮೇಲೆ ನಡೆಸಿದ ಲಾಠಿಚಾರ್ಜ್ ನ್ನು ಮಾನವೀಯತೆ ಇದ್ದವರು, ಇದ್ದರೆ ಖಂಡಿಸಬೇಕು. ಆದರೆ, ಪೇಜಾವರ ಸ್ವಾಮೀಜಿಯವರು ಖಂಡಿಸುವ ಬದಲಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅದರ ಮೇಲೆ ಎಲ್ಲರಿಗೂ ಬುದ್ಧಿವಾದ ಹೇಳತೊಡಗಿದ್ದಾರೆ. ಅವರಿಗೆ ಬುದ್ಧಿವಾದ ಹೇಳುವ ಕಂಟ್ರಾಕ್ಟ್ ಕೊಟ್ಟಂತೆ ಕಾಣುತ್ತಿದೆ. ಮಠ ಮತ್ತು ಧರ್ಮದ ಹೆಸರಿನಲ್ಲಿ ಬೇಧಭಾವವೆಸಗುತ್ತಾ, ನೀರಿನಲ್ಲೂ ತಾರತಮ್ಯ ಮಾಡುವ ಪೇಜಾವರ ಸ್ವಾಮೀಜಿಗಳ ಬುದ್ಧಿವಾದ ದುಡಿಯುವ ವರ್ಗಕ್ಕೆ ಅಗತ್ಯವಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷೆ, ಸಾಮಾಜಿಕ ಹೋರಾಟಗಾರ್ತಿ, ಪ್ರಸಿದ್ಧ ಲೇಖಕಿ ಶ್ರೀಮತಿ ಕೆ. ನೀಲಾ ಅವರು ಹೇಳಿದರು.
ಮಡೆಸ್ನಾನ ಮತ್ತು ಪಂಕ್ತಿಬೇಧವನ್ನು ವಿರೋಧಿಸಿ ಹಾಗೂ ಪ್ರತಿಭಟನಾಕಾರರ ಮೇಲೆ ಉಡುಪಿಯಲ್ಲಿ ನಡೆದ ಲಾಠಿಚಾರ್ಜ್ ನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟ ಉಡುಪಿಯಲ್ಲಿ ಇಂದು ಮಧ್ಯಾಹ್ನ ನಡೆಸಿದ ಬಹಿರಂಗ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪೇಜಾವರ ಸ್ವಾಮೀಜಿಗೆ ಹೊಟ್ಟೆ ತುಂಬದ ಜನರ ಬಗ್ಗೆಯಾಗಲೀ, ತಲಾ ಆದಾಯ ಕೇವಲ 20 ರು. ಇರುವ 71 ಶೇಕಡಾ ಜನರ ಬಗ್ಗೆಯಾಗಲೀ ಕಾಳಜಿ ಇಲ್ಲ, ಬದಲಾಗಿ ಹೊಟ್ಟೆ ತುಂಬಿದವರ ಬಗ್ಗೆ ಅವರ ಕಾಳಜಿ ಇದೆ. ಹಾಗಾಗಿ ಸ್ವಾಮೀಜಿಗಳು ಪಂಕ್ತಿಬೇಧವನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದು ಟೀಕಿಸಿದ ನೀಲಾ, ಪೇಜಾವರರು ದಲಿತ ಕೇರಿಗಳಿಗೆ ಹೋಗಬೇಕಾದುದಿಲ್ಲ, ಅದರ ಬದಲಾಗಿ ದಲಿತರನ್ನು ತನ್ನ ಮಠಕ್ಕೆ ಕರೆಸಿ ಅವರ ಜೊತೆಗೆ ಕುಳಿತು ಭೋಜನ ಮಾಡಲಿ ಎಂದು ಸವಾಲು ಹಾಕಿದರು.
ಪೇಜಾವರ ಸ್ವಾಮೀಜಿ, ಮೋಹನ್ ಭಾಗವತ್ ಮುಂತಾದವರು ಪ್ರತಿನಿಧಿಸುವ ಹಿಂದುತ್ವ ದಲಿತರನ್ನು, ಹಿಂದುಳಿದ ವರ್ಗದವರನ್ನು ಮನುಷ್ಯರೆಂದು ಕಂಡಿಲ್ಲ. ಆದುದರಿಂದ ಹೆಣ್ಣು ಮಕ್ಕಳು ಮನೆಯೊಳಗೇ ಇರಬೇಕು, ಗಂಡನ ಜೊತೆಗೆ ಚಿತೆಗೆ ಹಾರಬೇಕು, ತಲೆ ಬೋಳಿಸಬೇಕು ಎಂದೆಲ್ಲಾ ಹೇಳ್ತಾರೆ. ಬ್ರಿಟೀಷ್ ಆಡಳಿತ ಸತಿ ಪದ್ಧತಿಯನ್ನು ನಿಷೇಧಿಸಲು ಮುಂದಾದಾಗ ಹಿಂದುತ್ವವನ್ನು ಪ್ರತಿಪಾದಿಸುವವರ ನಿಯೋಗವೊಂದು ಬ್ರಟೀಷ್ ಆಡಳಿತದಾರರನ್ನು ಭೇಟಿಯಾಗಿ ಸತಿ ಪದ್ಧತಿಯನ್ನು ನಿಷೇಧಿಸದಂತೆ ಒತ್ತಾಯಿಸಿ ಮನವಿ ಸಲ್ಲಿಸಿತು ಎಂದು ನೀಲಾ ತಿಳಿಸಿದರು.
ಈ ದೇಶದ ಜನಸಂಖ್ಯೆಯಲ್ಲಿ ಶೇಕಡಾ 45 ರಷ್ಟು ಕುಟುಂಬಗಳು ಹೆಣ್ಣು ಮಕ್ಕಳೇ
ನೇತೃತ್ವದಲ್ಲಿಯೇ ಇದೆ. 84 ಶೇಕಡಾ ಗದ್ದೆ ಕೆಲಸಗಳನ್ನು ಮಹಿಳೆಯರೇ ಮಾಡ್ತಾರೆ. ಸಂಸಾರ ಸರಿತೂಗಿಸಲು ಇಂದು ಗಂಡು ಹೆಣ್ಣು ಇಬ್ಬರೂ ದುಡಿಯುವ ಅವಶ್ಯಕತೆ ಇದು ಇದೆ ಎಂದು ಮೋಹನ್ ಭಾಗವತ್ ಹಾಗೂ ಪೇಜಾವರ ಸ್ವಾಮೀಜಿಗಳಿಗೆ ಬಹಿರಂಗ ಪಾಠ ಮಾಡಿದ ನೀಲಾ, ಮೋಹನ್ ಭಾಗವತ್ ಹೇಳಿದ ಭಾರತದಲ್ಲಿರುವ ಹಳ್ಳಿಗಳಲ್ಲಿ ಮತ್ತು ಸ್ಲಂಗಳಲ್ಲಿಯೇ 75 ಶೇಕಡಾ ಮಹಿಳಾ ದೌರ್ಜನ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಹಿಂದುತ್ವವಾದಿಗಳು ಮೀಸಲಾತಿಯನ್ನು ವಿರೋಧಿಸುವ ಹೊತ್ತಿಗೆಯೇ, ಖಾಸಗೀಕರಣದ ಮೂಲಕ ಮೀಸಲಾತಿಯನ್ನು ಹಿಂಬಾಗಿಲ ಮೂಲಕ ವಾಪಾಸ್ ಹಿಂತೆಗೆಯುವ ಪ್ರಕ್ರಿಯೆಯೂ ನಡೆದಿದೆ ಎಂದು ಹೇಳಿದ ನೀಲಾ, ಬಸವಣ್ಣ ಆಹಾರದಲ್ಲಿ ಅವೈಜ್ಞಾನಿಕ ಪದ್ಧತಿಯನ್ನು ಸಮಥರ್ಿಸಿಲ್ಲವೆಂದರು. ಎಡಕೈಲಿ ಸುರೆ, ಬಲಕೈಲಿ ಮಾಂಸ, ಕೊರಳಲ್ಲಿ ಲಿಂಗವಿರಲು ಶರಣೆಂಬೆ ಕೂಡಲಸಂಗಮ ಎಂದವನು ಬಸವಣ್ಣ. ಪೇಜಾವರ ಸ್ವಾಮೀಜಿ ಮೊದಲು ಶರಣರ ವಚನಗಳನ್ನು ಓದಲಿ ಎಂದು ಸಲಹೆ ನೀಡಿದರು. ಹಿರಿಯ ಚಿಂತಕ ಜಿ.ರಾಜಶೇಖರ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಜಯನ್ ಮಲ್ಪೆ, ದಸಂಸ ಅಂಬೇಡ್ಕರ್ವಾದ ರಾಜ್ಯ ಸಮಿತಿ ಸದಸ್ಯ ಸುಂದರ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಸುಂದರ ಗುಜ್ಜರಬೆಟ್ಟು, ಶ್ಯಾಮರಾಜ್ ಬಿತರ್ಿ, ದಲಿತಾ ಕಲಾ ಮಂಡಳಿಯ ಜಿಲ್ಲಾ ಸಂಚಾಲಕ ಶಂಕರದಾಸ್ ಚೇಂಡ್ಕಳ, ಸಮತಾ ಸೈನಿಕ ದಳ ಜಿಲ್ಲಾದ್ಯಕ್ಷ ವಿಸ್ವನಾಥ ಪೇತ್ರಿ, ದಸಂಸ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತದ ವಿಭಾಗೀಯ ಸಂಚಾಲಕ ಶೇಖರ ಹೆಜಮಾಡಿ, ಜಿಲ್ಲಾ ಸಂಚಾಲಕ ರಮೇಶ್ ಕೋಟ್ಯಾನ್, ಕೊರಗ ಸಂಘಟನೆಯ ಗಣೇಶ್ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.
ಬಹಿರಂಗ ಸಭೆಗಿಂತ ಮೊದಲು ಜಿಲ್ಲೆಯ ಸಾವಿರಾರು ದಲಿತರು ಅಜ್ಜರಕಾಡು ಪುರಭವನದಿಂದ ಪಂಕ್ತಿಬೇದ ಮತ್ತು ಮಡೆಸ್ನಾನ ಹಾಗೂ ಪೊಲೀಸ್ ಲಾಠಿಚಾರ್ಜ್ ವಿರುದ್ಧ ಘೋಷಣೆ ಕೂಗುತ್ತಾ ಹಳೆ ತಾಲೂಕು ಕಚೇರಿ, ಕೋರ್ಟ್ ರಸ್ತೆ, ಕವಿ ಮುದ್ದಣ ಮಾರ್ಗ, ಸರ್ವಿಸ್ ಬಸ್ ನಿಲ್ದಾಣವಾಗಿ ಬಸ್ ನಿಲ್ದಾಣ ಪಕ್ಕದ ಜಟ್ಕಾ ಸ್ಟ್ಯಾಂಡ್ ವರೆಗೆ ಬೃಹತ್ ಮೆರವಣಿಗೆ ನಡೆಸಿದರು.
ಜ.7: ಲಾಠಿಚಾರ್ಜ್ ಖಂಡಿಸಿ ಉಡುಪಿಯಲ್ಲಿ ದಲಿತ ಸಂಘ ಟನೆಗಳಿಂದ ಬೃಹತ್ ಪ್ರತಿಭಟನೆ
Posted: December 31, 2012 in UncategorizedTags: ಉಡುಪಿ ಕೃಷ್ಣ ಮಠ, ಕುಕ್ಕೆ ಸುಬ್ರಹ್ಮಣ್ಯ, ಡಾ.ಅಂಬೇಡ್ಕರ್, ದಲಿತ ಸಂಘರ್ಷ ಸಮಿತಿ, ದಸಂಸ, ಪಂಕ್ತಿಬೇಧ, ಪೇಜಾವರ ಸ್ವಾಮೀಜಿ, ಮಡೆಸ್ನಾನ, ಲಾಠಿಚಾರ್ಜ್, citu, cpim, cpm, dalith, daliths, dalits, dss, dyfi, jayan malpe, jwa, jwf, sc/st, sfi
ಉಡುಪಿ: ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನಿಷ್ಟ ಪದ್ಧತಿಗಳಾದ ಮಡೆಸ್ನಾನ ಮತ್ತು ಪಂಕ್ತಿಬೇಧದ ವಿರುದ್ಧ ಪ್ರತಿಭಟನೆ ನಡೆಸಿದ ಸಿಪಿಐಎಂ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಅಮಾನುಷ ಕೃತ್ಯವಾಗಿದ್ದು, ಇದಕ್ಕೆ ಕಾರಣಕರ್ತರಾದ ಉಡುಪಿಯ ಇನ್ ಚಾರ್ಜ್ ತಹಶಿಲ್ದಾರ್ ಜಗನ್ನಾಥ ರಾವ್, ಡಿವೈಎಸ್ಪಿ ಡಾ.ಪ್ರಭುದೇವ ಬಿ.ಮಾನೆ ಹಾಗೂ ಉಡುಪಿ ಸರ್ಕಲ್ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ಅವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು. ಎಸ್ಪಿ ಡಾ.ಎಂ.ಬಿ.ಬೋರಲಿಂಗಯ್ಯ ಇದರ ನೈತಿಕ ಹೊಣೆ ಹೊತ್ತುಕೊಳ್ಳಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ ಸರಕಾರವನ್ನು ಒತ್ತಾಯಿಸಿದೆ.
ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು ಒಗ್ಗಟ್ಟಾಗಿ ಒಕ್ಕೂಟವನ್ನು ರಚಿಸಿಕೊಂಡು ಇಂದು ಸಂಜೆ ನಗರದ ಖಾಸಗಿ ಹೋಟೇಲಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಈ ಬಗ್ಗೆ ತಮ್ಮ
ನಿರ್ಧಾರಗಳನ್ನು ಪ್ರಕಟಿಸಿದರು.
ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿದ ಪೊಲೀಸರ ಕ್ರಮವನ್ನು ಖಂಡಿಸಿ ಜ.7 ರಂದು ಬೆಳಗ್ಗೆ ಗಂಟೆ 10.30 ಕ್ಕೆ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಎಲ್ಲಾ ಸಂಗಟನೆಗಳಿಗೂ ಸೇರಿದ ಅಂದಾಜು 2 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ದಲಿತ ನಾಯಕರು ಜಂಟಿ ಹೇಳಿಕೆಯಲ್ಲಿ ತಿಳಿಸಿದರು. ಪೊಲೀಸರು ನಡೆಸಿದ ಲಾಠಿ ಚಾರ್ಜ್ ಹಿಂದೆ ಪೇಜಾವರ ಸ್ವಾಮೀಜಿಗಳ ಕೈವಾಡವಿದೆ ಎಂದು ಆರೋಪಿಸಿದ ದಲಿತ ಮುಖಂಡರು, ಲಾಠಿ ಚಾರ್ಜ್ ನಡೆಸುವಾಗ ಸೊಂಟದ ಕೆಳಭಾಗಕ್ಕೆ ಮಾತ್ರ ಹೊಡೆಯಬೇಕೆಂಬ ನಿಯಮ ಇದ್ದರೂ, ಈ ನಿಯಮವನ್ನು ಉಲ್ಲಂಘಿಸಿ, ಪ್ರತಿಭಟನಾ ನಿರತರ ತಲೆ, ಬೆನ್ನು ಮುಂತಾದ ಸೊಂಟದ ಮೇಲಿನ ಭಾಗಗಳಿಗೂ ರಣಹದ್ದುಗಳಂತೆ ಹೊಡೆದು ಕ್ರೂರತೆ ಮೆರೆಯಲಾಗಿದೆ. ಈ ಪೊಲೀಸರಿಗೆ ಲಾಠಿಚಾರ್ಜ್ ಯಾವಾಗ, ಹೇಗೆ ನಡೆಸಬೇಕು ಎಂಬ ಬಗ್ಗೆ ಪ್ರಾಥಮಿಕ ತರಬೇತಿ ನೀಡುವ ಅಗತ್ಯವಿದೆ ಎಂದು ಹೇಳಿದರು.
ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ ದಲಿತ ಮುಖಂಡರು, ಮುಜರಾಯಿ ಇಲಾಕೆಯ ಅಧೀನದಲ್ಲಿರುವ ಯಾವೆಲ್ಲಾ ದೇವಾಲಯಗಳಲ್ಲಿ ಪಂಕ್ತಬೇಧ ಮತ್ತು ಮಡೆಸ್ನಾನ ಇದೆಯೋ ಅಲ್ಲೆಲ್ಲಾ ಇವುಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ನಿರ್ಧಿಷ್ಟ ಪ್ರಕರಣಗಳಲ್ಲಿ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಐಕ್ಯತೆಯಿಂದ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಹಮ್ಮಿಕೊಳ್ಳಲಿದೆ. ಇದಕ್ಕಾಗಿ ಕೋರ್ ಕಮಿಟಿಯನ್ನು ರಚಿಸಿಕೊಳ್ಳಲಿದ್ದೇವೆ ಎಂದು ದಲಿತ ಮುಖಂಡರು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸ್ಪಷ್ಟಪಡಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ನಾಯಕರಾದ ಜಯನ್ ಮಲ್ಪೆ, ಸುಂದರ ಕಪ್ಪೆಟ್ಟು, ದಸಂಸ ಅಂಬೇಡ್ಕರ್ ವಾದದ ನಾಯಕರಾದ ಸುಂದರ ಮಾಸ್ತರ್, ಹೂವಪ್ಪ ಮಾಸ್ತರ್, ಸುಂದರ ಗುಜ್ಜರಬೆಟ್ಟು, ಶ್ಯಾಮರಾಜ್ ಬಿರ್ತಿ, ದಸಂಸ
ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ನಾಯಕರಾದ ಶೇಖರ ಹೆಜಮಾಡಿ, ರಮೇಶ್ ಕೋಟ್ಯಾನ್, ಪ್ರಶಾಂತ್ ತೊಟ್ಟಂ, ಸಮತಾ ಸೈನಿಕ ದಳದ ವಿಸ್ವನಾಥ ಪೇತ್ರಿ ಮೊದಲಾದವರು
ಉಪಸ್ಥಿತರಿದ್ದರು.
ಸಿಪಿಐಎಂ ರಾಜ್ಯ ಮುಖಂಡರ ಸಹಿತ 178 ಪ್ರತಿಭಟನಾಕಾರ ರು ಕೋರ್ಟಿಗೆ ಹಾಜರು- ಜಾಮೀನು
Posted: December 31, 2012 in UncategorizedTags: ಉಡುಪಿ, ಉಡುಪಿ ಕೃಷ್ಣ ದೇವಾಲಯ, ಉಡುಪಿ ಕೃಷ್ಣ ಮಠ, ಉಡುಪಿ ಮಠ, ಎಸ್ಎಫ್ಐ, ಕೃಷ್ಣ ದೇವಾಲಯ, ಕೃಷ್ಣ ಮಠ, ಜನವಾದಿ ಮಹಿಳಾ ಸಂಘಟನೆ, ಜಾತಿ, ಜಾತಿ ಅಸಮಾನತೆ, ಜಾತಿ ತಾರತಮ್ಯ, ಡಿವೈಎಫ್ಐ, ತಾರತಮ್ಯ, ಪಂಕ್ತಿಬೇಧ, ಪೇಜಾವರ ಸ್ವಾಮೀಜಿ, ಪ್ರಗತಿಪರ ಚಳುವಳಿ, ಪ್ರಗತಿಪರ ಹೋರಾಟ, ಪ್ರತಿಭಟನೆ, ಮಡೆಸ್ನಾನ, ಸಮಾಜ ಸುಧಾರಣಾ ಚಳುವಳಿ, ಸಮಾಜ ಸುಧಾರಣೆ, ಸಮುದಾಯ, ಸಿಐಟಿಯು, ಸಿಪಿಎಂ, ಸಿಪಿಐಎಂ, ಹೋರಾಟ, citu, cpim, cpm, dyfi, mdesnaana, sfi, udupi krishna matth, udupi matth
ಉಡುಪಿ: ಅನಿಷ್ಟ ಪದ್ಧತಿಗಳಾದ ಮಡೆಸ್ನಾನ ಮತ್ತು ಪಂಕ್ತಿಬೇಧದ ವಿರುದ್ಧ ಡಿ.27 ರಂದು ಉಡುಪಿಯಲ್ಲಿ ನಡೆದ ಪ್ರತಿಭಟನಾ ಪ್ರದರ್ಶನದ ಸಂದರ್ಭದಲ್ಲಿ ಪೊಲೀಸರ ಲಾಠಿ ಏಟು ತಿಂದು ಗಾಯಗೊಂಡದ್ದೂ ಅಲ್ಲದೆ, ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ 179 ಮಂದಿ ಸಿಪಿಐಎಂ ಕಾರ್ಯಕರ್ತರ ಪೈಕಿ 178 ಮಂದಿ ಇಂದು ಬೆಳಗ್ಗೆ ಉಡುಪಿ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಹಾಜರಾಗಿ ಖಾಯಂ ಜಾಮೀನು ಕೋರಿದಾಗ ನ್ಯಾಯಾಧೀಶರಾದ ಅಬ್ದುಲ್ ರಹಿಮಾನ್ ಅವರು ಜಾಮೀನು ನೀಡಿ ಆದೇಶಿಸಿದರು.
ಯಶಸ್ವಿ ಎಂಬ ಹೆಸರಿನ ಓರ್ವ ಮಾನಸಿಕವಾಗಿ ಇನ್ನೂ ಬೆಳವಣಿಯಾಗದವನಾದ ವಿಕಲ
ಚೇತನನಾಗಿರುವುದರಿಂದ ಈತನನ್ನು ಹಾಜರುಪಡಿಸಲು ಸಾಧ್ಯವಾಗುತ್ತಿಲ್ಲ, ಈತನಿಗೆ ಪ್ರಕರಣದಿಂದ ವಿನಾಯಿತಿ ನೀಡಬೇಕು ಎಂದು ಪ್ರತಿಭಟನಾಕಾರರ ಪರ ವಕೀಲರು
ನ್ಯಾಯಾಧೀಶರಲ್ಲಿ ದಾಖಲಾತಿಗಳ ಸಹಿತ ಮನವಿ ಮಾಡಿಕೊಂಡರು. ಪ್ರತಿಭಟನಾಕಾರರ ಪರವಾಗಿ ಮಂಗಳುರಿನ ವಕೀಲ ಶಶಿರಾಜ್ ರಾವ್ ಕಾವೂರು, ಉಡುಪಿ ವಕೀಲರುಗಳಾದ ಧೀರೇಂದ್ರ ಹಾಗೂ ಮನೋಹರ್ ವಾದಿಸಿದ್ದರು.
178 ಮಂದಿ ಪ್ರತಿಭಟನಾಕಾರರು ಜನವರಿ 24 ರಂದು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಭದ್ರತೆ ನೀಡಬೇಕೆಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಸೂಚಿಸಿರುವುದರಿಂದ, ಪ್ರತಿಭಟನಾಕಾರರು ಜ.24 ರಂದು ಮತ್ತೆ ಉಡುಪಿ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ. ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರುಗಳಾದ ಜಿ.ಎನ್.ನಾಗರಾಜ್, ಮಾರುತಿ ಮಾನ್ಪಡೆ, ಬಿ.ಮಾಧವ, ವಿ.ಜೆ.ಕೆ.ನಾಯರ್, ಎಸ್.ಪ್ರಸನ್ನ ಕುಮಾರ್,
ಬಾಲಕೃಷ್ಣ ಶೆಟ್ಟಿ, ಯು.ಬಸವರಾಜ್, ಮೂಡಬಿದ್ರೆ ಪುರಸಭೆ ಉಪಾಧ್ಯಕ್ಷೆ ರಮಣಿ, ಮಂಗಳೂರು ಕಾರ್ಪೋರೇಟರ್ ಜಯಂತಿ ಬಿ.ಶೆಟ್ಟಿ, ಬಿ.ಎಂ.ಭಟ್, ಭರತ್ ರಾಜ್,
ಕೆ.ಎನ್.ಉಮೇಶ್ ಸಹಿತ 182 ಮಂದಿ ವಿರುದ್ಧ ಡಿ.27 ರಂದು ಸಂಜೆ ಲಾಠಿಚಾರ್ಜ್ ನಡೆಸಿದ ಉಡುಪಿ ನಗರ ಸರ್ಕಲ್ ಇನ್ಸ್ಪೆಕ್ಟರ್ ಮಾರುತಿ ಜಿ.ನಾಯಕ್ ಅವರು ಸುಮುಟೊ ಆಗಿ ಮೊಕದ್ದಮೆ ದಾಖಲಿಸಿಕೊಂಡಿದ್ದರು.
ಡಿ. 26 ರಂದು ಸಂಜೆ ಇವರುಗಳನ್ನು ಬಂಧಿಸಿದ ಪೊಲೀಸರು ಐಪಿಸಿ ಕಲಂಗಳಾದ 114, 143, 147, 148, 149, 323, 324, 332, 333, 341, 353, 427 ಪ್ರಕಾರ ಮೊಕದ್ದಮೆ ದಾಖಲಿಸಿಕೊಂಡಿದ್ದರು. ಬಳಿಕ ಮಧ್ಯರಾತ್ರಿ ನ್ಯಾಯಾಧೀಶರಾದ ಚಂದ್ರಶೇಖರ ಯು. ಅವರ ನಿವಾಸಕ್ಕೆ ಹಾಜರುಪಡಿಸಿದಾಗ, ಪ್ರತಿಭಟನಾಕಾರರ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರು ಡಿ.31 ರ ವರೆಗೆ ಮಂಧ್ಯಂತರ ಜಾಮೀನು ನೀಡಿ, ಡಿ.31 ರಂದು ಬೆಳಗ್ಗೆ ಮತ್ತೆ ತೆರೆದ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದರು. ಇದರಂತೆ ಪ್ರತಿಭಟನಾಕಾರರು ಇಂದು ನ್ಯಾಯಾಲಯಕ್ಕೆ ಹಾಜರಾಗಿ ಖಾಯಂ
ಜಾಮೀನು ಪಡೆದುಕೊಂಡಿದ್ದಾರೆ.
ಡಿ.26 ರಂದು ಮಧ್ಯರಾತ್ರಿ ಪ್ರತಿಭಟನಾಕಾರರನ್ನು ಬಂಧಿಸಿಟ್ಟಿದ್ದ ಡಿಎಆರ್ ಮೈದಾನದಿಂದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸುವ ಸಮಯದಲ್ಲಿ ಬಂಧಿತರಾಗಿದ್ದ 182 ಮಂದಿಯಲ್ಲಿ ಮೂವರು ಪೊಲೀಸರ ಬಂಧನದಿಂದ ತಪ್ಪಿಸಿಕೊಂಡಿದ್ದರು ಎಂದು ಹೇಳಿ ಮೂವರ ವಿರುದ್ಧ ಮತ್ತೆ ಉಡುಪಿ ನಗರ ಠಾಣೆಯ ಪೊಲೀಸರು ಪ್ರತ್ಯೇಕ ಮೊಕದ್ದಮೆ ದಾಖಲಿಸಿದ್ದರು. ಆಶ್ಚರ್ಯವೆಂದರೆ, ಪೊಲೀಸ್ ಬಂಧನದಿಂದ ತಪ್ಪಿಸಿಕೊಂಡ ಮೂವರು ಯಾರೆಂದು ತಮಗೆ ತಿಳಿದೇ ಇಲ್ಲ. ಪೊಲೀಸರು ಯಾರ ವಿರುದ್ಧ ಪ್ರತ್ಯೇಕ ಕೇಸುಗಳನ್ನು ದಾಖಲಿಸಿಕೊಂಡಿದ್ದಾರೋ, ಆ ಮೂವರೂ ನಮ್ಮ ಪಕ್ಷದ ಕಾರ್ಯಕರ್ತರೇ ಅಲ್ಲವೆಂದು ಸಿಪಿಐಎಂ ಅಧಿಕೃತರು udupibits.com ಜೊತೆ ಮಾತನಾಡುತ್ತಾ ಸ್ಪಷ್ಟಪಡಿಸಿದ್ದಾರೆ.
ಸಿಪಿಐಎಂ ರಾಜ್ಯ ಮುಖಂಡರ ಸಹಿತ 179 ಪ್ರತಿಭಟನಾಕಾರ ರು ಡಿ.31 ಕ್ಕೆ ಉಡುಪಿ ಕೋರ್ಟಿಗೆ
Posted: December 30, 2012 in UncategorizedTags: ಉಡುಪಿ, ಉಡುಪಿ ಕೃಷ್ಣ ದೇವಾಲಯ, ಉಡುಪಿ ಕೃಷ್ಣ ಮಠ, ಉಡುಪಿ ಮಠ, ಎಸ್ಎಫ್ಐ, ಕೃಷ್ಣ ದೇವಾಲಯ, ಕೃಷ್ಣ ಮಠ, ಜನವಾದಿ ಮಹಿಳಾ ಸಂಘಟನೆ, ಜಾತಿ, ಜಾತಿ ಅಸಮಾನತೆ, ಜಾತಿ ತಾರತಮ್ಯ, ತಾರತಮ್ಯ, ದಿವೈಎಫ್ಐ, ಪಂಕ್ತಿಬೇಧ, ಪೇಜಾವರ ಸ್ವಾಮೀಜಿ, ಪ್ರಗತಿಪರ ಚಳುವಳಿ, ಪ್ರಗತಿಪರ ಹೋರಾಟ, ಪ್ರತಿಭಟನೆ, ಮಡೆಸ್ನಾನ, ಸಮಾಜ ಸುಧಾರಣಾ ಚಳುವಳಿ, ಸಮಾಜ ಸುಧಾರಣೆ, ಸಮುದಾಯ, ಸಿಐಟಿಯು, ಸಿಪಿಎಂ, ಸಿಪಿಐಎಂ, ಹೋರಾಟ, citu, cpim, cpm, dyfi, mdesnaana, sfi, udupi krishna matth, udupi matth
ಉಡುಪಿ: ಮಡೆಸ್ನಾನ ಮತ್ತು ಪಂಕ್ತಿಬೇಧದ ವಿರುದ್ಧ ನಡೆದ ಪ್ರತಿಭಟನಾ ಪ್ರದರ್ಶನದ ಸಂದರ್ಭದಲ್ಲಿ ಲಾಠಿ ಏಟು ತಿಂದು ಗಾಯಗೊಂಡದ್ದೂ ಅಲ್ಲದೆ, ಪೊಲೀಸರಿಂದ
ಬಂಧನಕ್ಕೊಳಗಾಗಿದ್ದ 182 ಮಂದಿ ಸಿಪಿಐಎಂ ಕಾರ್ಯಕರ್ತರು ನಾಳೆ (ಸೋಮವಾರ) ಬೆಳಗ್ಗೆ ಗಂಟೆ 10.30 ಕ್ಕೆ ಉಡುಪಿಯ ಸಿವಿಲ್ ಜಡ್ಜ್ (ಕಿರಿಯ ವಿಭಾಗ) ಜೆಎಂಎಫ್ಸಿ
ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರುಗಳಾದ ಜಿ.ಎನ್.ನಾಗರಾಜ್, ಮಾರುತಿ ಮಾನ್ಪಡೆ, ನಿತ್ಯಾನಂದ ಸ್ವಾಮಿ, ಬಿ.ಮಾಧವ, ಕೆ.ಆರ್.ಶ್ರೀಯಾನ್, ವಿ.ಜೆ.ಕೆ.ನಾಯರ್, ಎಸ್.ಪ್ರಸನ್ನ ಕುಮಾರ್, ಬಾಲಕೃಷ್ಣ ಶೆಟ್ಟಿ, ಬಯ್ಯಾ ರೆಡ್ಡಿ, ಯು.ಬಸವರಾಜ್, ಸಿಐಟಿಯು ಅಖಿಲ ಭಾರತ ಕಾರ್ಯದರ್ಶಿ ವರಲಕ್ಷ್ಮಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದಶರ್ಿ
ಕೆ.ಎಸ್.ಲಕ್ಷ್ಮಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ
ರಾಜ್ಯಾಧ್ಯಕ್ಷ ಕೆ,ಎಸ್.ಶಿವರಾಮು, ಮೂಡಬಿದ್ರೆ ಪುರಸಭೆ ಉಪಾಧ್ಯಕ್ಷೆ ರಮಣಿ, ಮಂಗಳೂರು ಕಾರ್ಪೋರೇಟರ್ ಜಯಂತಿ ಬಿ.ಶೆಟ್ಟಿ, ಬಿ.ಎಂ.ಭಟ್, ಯಾದವ ಶೆಟ್ಟಿ, ಭರತ್ ರಾಜ್, ಕೆ.ಎನ್.ಉಮೇಶ್ ಸಹಿತ 182 ಮಂದಿ ವಿರುದ್ಧ ಡಿ.27 ರಂದು ಸಂಜೆ ಲಾಠಿಚಾರ್ಜ್ ನಡೆಸಿದ ಉಡುಪಿ ನಗರ ಸರ್ಕಲ್ ಇನ್ಸ್ಪೆಕ್ಟರ್ ಮಾರುತಿ ಜಿ.ನಾಯಕ್ ಅವರು ಸುಮುಟೊ ಆಗಿ ಮೊಕದ್ದಮೆ ದಾಖಲಿಸಿಕೊಂಡಿದ್ದರು.
ಡಿ. 26 ರಂದು ಸಂಜೆ ಇವರುಗಳನ್ನು ಬಂಧಿಸಿದ ಪೊಲೀಸರು ಐಪಿಸಿ ಕಲಂಗಳಾದ 114, 143, 147, 148, 149, 323, 324, 332, 333, 341, 353, 427 ಪ್ರಕಾರ ಮೊಕದ್ದಮೆ ದಾಖಲಿಸಿಕೊಂಡಿದ್ದರು. ಬಳಿಕ ಮಧ್ಯರಾತ್ರಿ ನ್ಯಾಯಾಧೀಶರಾದ ಚಂದ್ರಶೇಖರ ಯು. ಅವರ ನಿವಾಸಕ್ಕೆ ಹಾಜರುಪಡಿಸಿದಾಗ, ಪ್ರತಿಭಟನಾಕಾರರ ಪರ ವಕೀಲರಾದ ಶಶಿರಾಕ್ ಕೆ. ಕಾವೂರು ಹಾಗೂ ಸುಧೀಂದ್ರ ವಾದ ಆಲಿಸಿದ ನ್ಯಾಯಾಧೀಶರು ಡಿ.31 ರ ವರೆಗೆ ಮಂಧ್ಯಂತರ ಜಾಮೀನು ನೀಡಿ, ಡಿ.31 ರಂದು ಬೆಳಗ್ಗೆ ಮತ್ತೆ ತೆರೆದ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದರು. ಇದರಂತೆ ಪ್ರತಿಭಟನಾಕಾರರು ಇಂದು ನ್ಯಾಯಾಲಯಕ್ಕೆ ಹಾಜರಾಗಿ ಖಾಯಂ ಜಾಮೀನು ಪಡೆದುಕೊಳ್ಳಿದ್ದಾರೆ.
ಡಿ.26 ರಂದು ಮಧ್ಯರಾತ್ರಿ ಪ್ರತಿಭಟನಾಕಾರರನ್ನು ಬಂಧಿಸಿಟ್ಟಿದ್ದ ಡಿಎಆರ್ ಮೈದಾನದಿಂದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸುವ ಸಮಯದಲ್ಲಿ ಬಂಧಿತರಾಗಿದ್ದ 182 ಮಂದಿಯಲ್ಲಿ ಮೂವರು ಪೊಲೀಸರ ಬಂಧನದಿಂದ ತಪ್ಪಿಸಿಕೊಂಡಿದ್ದರು ಎಂದು ಹೇಳಿ ಮೂವರ ವಿರುದ್ಧ ಮತ್ತೆ ಉಡುಪಿ ನಗರ ಠಾಣೆಯ ಪೊಲೀಸರು ಪ್ರತ್ಯೇಕ ಮೊಕದ್ದಮೆ ದಾಖಲಿಸಿದ್ದರು. ಆಶ್ಚರ್ಯವೆಂದರೆ, ಪೊಲೀಸ್ ಬಂಧನದಿಂದ ತಪ್ಪಿಸಿಕೊಂಡ ಮೂವರು ಯಾರೆಂದು ತಮಗೆ ತಿಳಿದೇ ಇಲ್ಲ. ಪೊಲೀಸರು ಯಾರ ವಿರುದ್ಧ ಪ್ರತ್ಯೇಕ ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ, ಆ ಮೂವರು ನಮ್ಮ ಪಕ್ಷದ ಕಾರ್ಯಕರ್ತರೇ ಅಲ್ಲವೆಂದು ಸಿಪಿಐಎಂ ಮೂಲಗಳು udupibits.com ಗೆ ಸ್ಪಷ್ಟಪಡಿಸಿದೆ. ಪೊಲೀಸ್ ಬಂಧನದಲ್ಲಿದ್ದ ಮೂವರು ಪೊಲೀಸ್ ಕಸ್ಟಡಿಯಿಂದ ತಪ್ಪಿಕೊಳ್ಳಲು ಪೊಲೀಸರ ಭದ್ರತೆಯಲ್ಲಿನ ಲೋಪವೇ ಕಾರಣವಾಗಿದ್ದು, ಇದೀಗ ಅಂದು ಚಂದು ಮೈದಾನದಲ್ಲಿ ಬಂಧಿತರ ಕಾವಲು ಕಾಯುತ್ತಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಅಮಾನತು ಭೀತಿಯಲ್ಲಿದ್ದಾರೆ.
ಉಡುಪಿಯಲ್ಲಿ ಪೇಜಾವರ ರಿಪಬ್ಲಿಕ್: ಸಿಪಿಐಎಂ
Posted: December 28, 2012 in UncategorizedTags: ಉಡುಪಿ ಕೃಷ್ಣ ದೇವಾಲಯ, ಉಡುಪಿ ಮಠ, ಪಂಕ್ತಿಬೇಧ, ಪರ್ಯಾಯ ಸ್ವಾಮೀಜಿ, ಪೇಜಾವರ ಮಠ, ಪೇಜಾವರ ಸ್ವಾಮೀಜಿ, ಮಡೆಸ್ನಾನ, ಸೋದೆ ಮಠ, ಸೋದೆ ಸ್ವಾಮೀಜಿ, ುಡುಪಿ ಕೃಷ್ಣ ಮಠ, citu, cpim, cpm, dyfi, sfi
ಉಡುಪಿ: ಮಡೆಸ್ನಾನ ಮತ್ತು ಪಂಕ್ತಿಬೇಧದ ವಿರುದ್ಧ ಪ್ರತಿಭಟನೆ ನಡೆಸಿದ ಸಿಪಿಐಎಂ ಪಕ್ಷದ ಕಾರ್ಯಕರ್ತರ ಮೇಲೆ ರಾಜ್ಯದ ಬಿಜೆಪಿ ಸರಕಾರ, ಪೇಜಾವರ ಸ್ವಾಮೀಜಿ ಹಾಗೂ ಪೊಲೀಸ್ ಅಧಿಕಾರಿಗಳು ಷಡ್ಯಂತ್ರ ಹೂಡಿ ಅನಾಗರಿಕ ಲಾಠಿಚಾರ್ಜ್ ನಡೆಸಿದ್ದಾರೆ. ಲಾಠಿಚಾರ್ಜ್ ಗೆ ಕಾರಣರಾದ ಉಡುಪಿ ನಗರ ಸರ್ಕಲ್ ಇನ್ ಸ್ಪೆಕ್ಟರ್ ಮಾರುತಿ ನಾಯಕ್ ಅವರನ್ನು ಕೂಡಲೇ ಅಮಾನತುಪಡಿಸಿ, ಇಡೀ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಪಕ್ಷದ ರಾಜ್ಯ ಸಮಿತಿ ಕಾರ್ಯದಶರ್ಿ ಮತ್ತು ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಇಂದು ಬೆಳಗ್ಗೆ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಪಕ್ಷದ ರಾಜ್ಯ ಸಮಿತಿ ಪರವಾಗಿ ಅವರು ಮಾತನಾಡುತ್ತಿದ್ದರು.
ಪಂಕ್ತಿಬೇಧ ಮತ್ತು ಮಡೆಸ್ನಾನದ ವಿರುದ್ಧ ಕಳೆದ ಜನವರಿಯಲ್ಲಿ ಒಂದು ಬಾರಿ ಪ್ರತಿಭಟನೆ ನಡೆಸಿ ನಮ್ಮ ಬೇಡಿಕೆಯನ್ನು ಮಂಡಿಸಲಾಗಿತ್ತು. ಮಠದಿಂದಾಗಲೀ, ಸರಕಾರದಿಂದಾಗಲೀ ಸೂಕ್ತ ಸ್ಪಂದನೆ ಲಭಿಸದ ಕಾರಣ ಡಿಸೆಂಬರ್ನಲ್ಲಿ ಜನಾಂದೋಲನ ಹಮ್ಮಿಕೊಳ್ಳಲಾಗಿತ್ತು. ಎರಡನೇ ಬಾರಿ ಜನಾಂದೋಲನ ಆಯೋಜಿಸಿದ ಬಗ್ಗೆ 2 ತಿಂಗಳ ಹಿಂದೆಯೇ ತಿಳಿಸಲಾಗಿದೆ. ವಾಹನ ಜಾಥಾ, ಕಾಲ್ನಡಿಗೆ ಜಾಥಾ ಮೊದಲಾದವುಗಳನ್ನು ನಡೆಸಲಾಗಿದೆ. ಎಲ್ಲಾ ವಿಷಯ ಗೊತ್ತಿದ್ದರೂ ಪೇಜಾವರ ಸ್ವಾಮೀಜಿಯಾಗಲೀ, ಪರ್ಯಾಯ ಸ್ವಾಮೀಜಿಯಾಗಲೀ, ಜಿಲ್ಲಾಡಳಿತವಾಗಲೀ, ಪೊಲಸ್ ಅಧಿಕಾರಿಗಳಾಗಲೀ ಸಮಸ್ಯೆ ಪರಿಹರಿಸಲು ಯಾವುದೇ ಕನಿಷ್ಟ ಕ್ರಮಗಳನ್ನೂ ಕೈಗೊಂಡಿಲ್ಲ. ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಡಿಸಿ, ಎಸ್ಪಿ ಇದ್ದಾರೆಯೇ ಎಂದು ಖಾರವಾಗಿ ಪ್ರಶ್ನಿಸಿದ ಶ್ರೀರಾಮ ರೆಡ್ಡಿಯವರು, ಜಿಲ್ಲೆಯಲ್ಲಿ ಪೇಜಾವರ ರಿಪಬ್ಲಿಕ್ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಪ್ರತಿಭಟನೆಗೆ ಮೂರು ಸಾವಿರ ಮಂದಿ ಸೇರಿದ್ದರು. ಇವರಲ್ಲಿ ಒಂದು ಸಾವಿರ ಮಂದಿ ದ.ಕ.ಜಿಲ್ಲೆಯವರಾಗಿದ್ದರೆ, 800 ಮಂದಿ ಉಡುಪಿ ಜಿಲ್ಲೆಯವರು. ಉಳಿದವರು ವಿವಿಧ ಜಿಲ್ಲೆಗಳಿಗೆ ಸೇರಿದವರು. ಇವರಲ್ಲಿ 60 ರಿಂದ 70 ಮಂದಿ ಪ್ರತಿಭಟನಾಕಾರರಿಗೆ ಲಾಠಿ ಏಟು ಬಿದ್ದಿದೆ. ಇದರಿಂದಾಗಿ 9 ಮಂದಿ ಗಾಯಗೊಂಡಿದ್ದಾರೆ. ಒಬ್ಬರಿಗೆ ಗಂಭೀರ ಗಾಯವಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮೈಸೂರಿನ ಜಗದೀಶ್ ಎಂಬವರು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರೆಡ್ಡಿ ವಿವರ ನೀಡಿದರು.
ಬಂಧಿತರಾದ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೆ ಮಠದಿಂದ ಊಟ ವಿತರಿಸಲಾಗಿದೆ ಎಂದು ‘ಉದಯವಾಣಿ’ ದಿನ ಪತ್ರಿಕೆಯಲ್ಲಿ ವರದಿಯಾಗಿದೆ. ಲಾಠಿಚಾರ್ಜ್ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಮಠದೊಂದಿಗೆ ಶಾಮೀಲಾಗಿದ್ದಾರೆ ಎನ್ನುವುದಕ್ಕೆ ಇದುವೇ ಸಾಕ್ಷಿ ಎಂದು ಸ್ಪಷ್ಟಪಡಿಸಿದ ಸಿಪಿಐಎಂ ರಾಜ್ಯ ಕಾರ್ಯದರ್ಶಿಯವರು, ಲಾಠಿಚಾರ್ಜ್ ನಂಥ ಯಾವುದೇ ದಬ್ಬಾಳಿಕೆಗೂ ಕಮ್ಯುನಿಸ್ಟರು ಹೆದರುವುದಿಲ್ಲ. ಇಂಥ ಧಮನಗಳನ್ನು ಸವಾಲಾಗಿ ಸ್ವೀಕರಿಸಿಕೊಂಡೇ ಕಮ್ಯುನಿಸ್ಟ್ ಚಳುವಳಿ ಮುಂದುವರಿದುಕೊಂಡು ಬಂದಿದೆ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಯಾವುದೇ ರೀತಿಯ ಬಲಿದಾನಕ್ಕೂ ಪಕ್ಷ ಸಿದ್ಧವಿದೆ. ಮುಂದಕ್ಕೆ ಇನ್ನಷ್ಟೂ ತೀವ್ರಗತಿಯಲ್ಲಿ ಹೋರಾಟ ಮುಂದುವರಿಯಲಿದೆ. ಮುಂದಿನ ಸಲ ಹೇಳಿ ಮಾಡಲ್ಲ. ಡೈರೆಕ್ಟ್ ಆಗಿ ಆಕ್ಷನ್ ಮಾಡಲಿದ್ದೇವೆ. ಆಗ ಸಾಧ್ಯವಿದ್ದರೆ ತಡೆಯಲಿ ನೋಡೋಣ ಎಂದು ನೇರ ಸವಾಲು ಹಾಕಿದರು.
ಲಾಠಿಚಾರ್ಜ್ ವಿರುದ್ಧ ರಾಜ್ಯದಾದ್ಯಂತ ಚಳುವಳಿಗೆ ಕರೆ ನೀಡಲಾಗಿದೆ. ಲಾಠಿಚಾರ್ಜ್ ನಡೆದ ದಿನವೇ ಕೆಲವೆಡೆ ಪ್ರತಿಭಟನೆಗಳು ನಡೆದಿವೆ. ಈ ಪ್ರತಿಭಟನೆಗಳ ಬೇಡಿಕೆ ಈಡೇರುವ ವರೆಗೂ ಮುಂದುವರಿಯಲಿದೆ ಎಂದು ಜಿ.ವಿ.ಶ್ರೀರಾಮ ರೆಡ್ಡಿ ಸ್ಪಷ್ಟಪಡಿಸಿದರು. ಪೇಜಾವರ ಸ್ವಾಮೀಜಿ ಮಠವನ್ನು ತಮ್ಮ ರಾಜಕೀಯ ಲಾಭಕ್ಕೆ ದುರ್ಬಳಕೆ
ಮಾಡಿಕೊಳ್ಳುತ್ತಿದ್ದಾರೆ. ಅವರು ಮಠದ ಹೆಸರಲ್ಲಿ ರಾಜಕೀಯ ಮಾಡುವುದು ಬಿಟ್ಟು ಇನ್ನಾದರೂ ಧಾರ್ಮಿಕ ಕೆಲಸಗಳನ್ನು ನಡೆಸಲಿ. ಮಾಂಸಾಹಾರಿಗಳ ಜೊತೆ ಕುಳಿತು ಊಟ ಮಾಡಿದರೆ ಸಸ್ಯಾಹಾರಿಗಳಿಗೆ ನೋವಾಗುತ್ತೆ ಎನ್ನುವ ಪೇಜಾವರ ಸ್ವಾಮೀಜಿಯವರು, ಮಾಂಸಾಹಾರಿಗಳಲ್ಲದ, ಸಸ್ಯಾಹಾರಿಗಳಾಗಿರುವ ಬ್ರಾಹ್ಮಣೇತರರಿಗೆ ಬ್ರಹ್ಮಾಣರ ಜೊತೆ ಕುಳಿತು ಊಟ ಮಾಡಲು ಯಾಕೆ ಅವಕಾಶ ನೀಡಬಾರದು ಎಂದು ಮಾರ್ಮೀಕವಾಗಿ ಪ್ರಸ್ನಿಸಿದ ಶ್ರೀರಾಮ ರೆಡ್ಡಿಯವರು, ಬ್ರಾಹ್ಮಣರಲ್ಲಿ ಮಾಂಸಾಹಾರಿಗಳಿಲ್ಲವೇ ಎಂದೂ ಪೇಜಾವರರಲ್ಲಿ ಪ್ರಶ್ನಿಸಿದರಲ್ಲದೆ, ಪೇಜಾವರ ಸ್ವಾಮೀಜಿ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆಂದು ಟೀಕಿಸಿದರು. ಕೃಷ್ಣ ದೇಗುಲ ಖಾಸಗಿ ಅಸ್ತಿಯಲ್ಲ, ಸಾರ್ವಜನಿಕ ಆಸ್ತಿ. ಇದನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆದುಕೊಳ್ಳಬೇಕೆಂದು ಆಗ್ರಹಿಸಿದ ರೆಡ್ಡಿ, ಲಾಠಿಚಾರ್ಜ್ ಮೂಲಕ ಕಂದಾಚಾರ, ಮಾನವವಿರೋಧಿ, ಜನ ವಿರೋಧಿ, ಕಾನೂನು ಬಾಹಿರ ಮೂಢನಂಬಿಕೆಗಳ ವಿರುದ್ಧದ ಜನಾಂದೋಲನ ವಿಸ್ತಾರಗೊಳ್ಳಲು ಕಾರಣರದ ಪೊಲೀಸ್ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದರು. ಮಾಧ್ಯಮಗೋಷ್ಟಿಯಲ್ಲಿ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರುಗಳಾದ ಜಿ.ಎನ್.ನಾಗರಾಜ್, ಬಯ್ಯಾ ರೆಡ್ಡಿ, ಮಾರುತಿ ಮಾನ್ಪಡೆ, ಬಾಲಕೃಷ್ಣ ಶೆಟ್ಟಿ, ಯು.ಬಸವರಾಜ್ ಹಾಗೂ ಕೆ.ಶಂಕರ್ ಉಪಸ್ಥಿತರಿದ್ದರು.
ಪ್ರತಿಭಟನಾಕಾರರಿಗೆ ಮಧ್ಯರಾತ್ರಿ ಮಧ್ಯಂತರ ಜಾಮ ೀನು
Posted: December 28, 2012 in UncategorizedTags: citu, cpim, cpm, dyfi, fir, jwa, jwf, madesnaana, police, sfi, udupi police
ಉಡುಪಿ: ಮಡೆಸ್ನಾನ ಮತ್ತು ಪಂಕ್ತಿಬೇಧದ ವಿರುದ್ಧ ಸಿಪಿಐಎಂ ಡಿ.27 ರಂದು
ಉಡುಪಿಯಲ್ಲಿ ನಡೆಸಿದ ಪ್ರತಿಭಟನಾ ಪ್ರದರ್ಶನದ ಮೇಲೆ ಲಾಠಿಚಾರ್ಜ್ ಮಾಡಿದ ಪೊಲೀಸರು, 182 ಮಂದಿ ಪ್ರತಿಭಟನಾಕಾರರ ವಿರುದ್ಧ ವಿವಿಧ ಸೆಕ್ಷನ್ ಗಳಡಿಯಲ್ಲಿ ಮೊಕದ್ದೆಮ ದಾಖಲಿಸಿದ್ದಾರೆ.
ಐಪಿಸಿ ಕಲಂಗಳಾದ 114, 143, 147, 148, 149, 323, 324, 327, 332, 333, 341, 353 ರ ಪ್ರಕಾರ ಉಡುಪಿ ನಗರ ಠಾಣೆಯ ಪೊಲೀಸರು ಮೊಕದ್ದೆಮ ದಾಖಲಿಸಿಕೊಂಡಿದ್ದಾರೆ. 183 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ಗುರುವಾರ ಮಧ್ಯರಾತ್ರಿ ಉಡುಪಿ ಸಿವಿಲ್ ಜಡ್ಜ್ (ಕಿರಿಯ ವಿಭಾಗ) ಜೆಎಂಎಫ್ ಸಿ ನ್ಯಾಯಾಲಯದ ನ್ಯಾಧೀಶರಾದ ಚಂದ್ರಶೇಖರ ಯು. ಅವರ ಮುಮದೆ ಹಾಜರುಪಡಿಸಿದಾಗ, ನ್ಯಾಯಾಧೀಶರು ಪ್ರತಿಭಟನಾಕಾರರಿಗೆ ಡಿ.31 ರ ವರೆಗೆ ಮದ್ಯಂತರ ಜಾಮೀನು ನೀಡಿ ಬಿಡುಗಡೆಗೊಳಿಸಿದರು. ಪ್ರತಿಭಟನಾಕರರ ಪರವಾಗಿ ಮಂಗಳುರಿನ ವಕೀಲರಾದ ಶಶಿರಾಜ್ ರಾವ್ ಕಾವೂರು ಹಾಗೂ ಉಡುಪಿಯ ವಕೀಲರಾದ ಧೀರೇಮದ್ರ ವಾದಿಸಿದ್ದರು. ಪ್ರತಿಭಟನಾಕಾರರು ತಮ್ಮನ್ನು ಬಂಧನದಲ್ಲಿ ಇರಿಸಲಾಗಿದ್ದ ಡಿಎಆರ್ ಮೈದಾನದಲ್ಲಿ ಒಂದೋ ಬಿಡುಗಡೆಗೊಳಿಸಿ, ಇಲ್ಲವೇ ಕೂಡಲೇ ನ್ಯಾಯಾಲಯಕ್ಕೆ ಹಾಜರುಪಡಿಸಿ ಎಂದು ಒತ್ತಾಯಿಸಿ ಮಧ್ಯರಾತ್ರಿವರೆಗೂ ಪೊಲೀಸ್ ಅಧಿಕಾರಿಗಳ ಜೊತೆಗೆ ಮಾತಿನ ಚಕಮಕಿ ನಡೆಸಿದರು ಮತ್ತು ಪೊಲೀಸ್ ಅಧಿಕಾರಿಗಳ ನಡವಳಿಕೆ ವಿರುದ್ಧ ಪ್ರತಿಭಟನೆ ನಡೆಸಿದರು.
ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ, ರಾಜ್ಯ ಕಾರ್ಯದರ್ಶಿ ಮಂಡಳಿ
ಸದಸ್ಯರಾದ ಜಿ.ಎನ್.ನಾಗರಾಜ್, ಮಾರುತಿ ಮಾನ್ಪಡೆ, ಬಯ್ಯಾ ರೆಡ್ಡಿ, ಬಸವರಾಜ್, ನಿತ್ಯಾನಂದ ಸ್ವಾಮಿ, ಬಾಲಕೃಷ್ಣ ಶೆಟ್ಟಿ, ಲಕ್ಷ್ಮಿ, ಬಿ.ಎಂ.ಭಟ್ ಸಹಿತ 182 ಮಂದಿ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ಇವರೆಲ್ಲರೂ ಡಿ.31 ರಂದು ಮತ್ತೆ ನ್ಯಾಯಾಲಯಕ್ಕೆ ಹಾಜರಾಗಿ ಖಾಯಂ ಜಾಮೀನು ಪಡೆದುಕೊಳ್ಳಬೇಕಾಗಿದೆ.
ಬಂಧನದಲ್ಲಿದ್ದ ಮಹಿಳಾ ಪ್ರತಿಭಟನಾಕಾರರೊಂದಿಗೆ ಪೊಲೀಸರ ಅಮಾನುಷ ವರ್ತನೆ: ಸಿಪಿಐಎಂ ಗಂಭೀರ ಆರೋಪ
Posted: December 28, 2012 in UncategorizedTags: citu, cpim, cpm, dyfi, jwa, jwf, madesnaana, police, sfi, udupi matth, udupi police, udupi temple
ಉಡುಪಿ: ಉಡುಪಿಯಲ್ಲಿ ಡಿ.27 ರಂದು ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ
ನಡೆಸುತ್ತಿದ್ದವರ ಮೇಲೆ ಅಮಾನುಷವಾಗಿ ಲಾಠಿಚಾರ್ಜ್ ನಡೆಸಿದ ಉಡುಪಿಯ ಪೊಲೀಸ್ ಅಧಿಕಾರಿಗಳ ಕ್ರಮದ ವಿರುದ್ಧ ರಾಜ್ಯ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಸಿಪಿಐಎಂ ರಾಜ್ಯ ಸಮಿತಿ ಸದಸ್ಯೆ ಮತ್ತು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ಕೆ.ಎಸ್.ಲಕ್ಷ್ಮಿ ತಿಳಿಸಿದ್ದಾರೆ.
ಮಡೆಸ್ನಾನ ಮತ್ತು ಪಂಕ್ತಬೇಧದ ವಿರುದ್ಧ ಸಿಪಿಐಎಂ ರಾಜ್ಯ ಸಮಿತಿ ಹಮ್ಮಿಕೊಂಡ ಪ್ರತಿಭಟನಾ ಪ್ರದರ್ಶನದ ವಿರುದ್ಧ ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ, ಲಾಠಿಚಾರ್ಜ್ ಗೆ ಕಾರಣಕರ್ತರಾದ ಉಡುಪಿ ನಗರ ಸರ್ಕಲ್ ಇನ್ ಸ್ಪೆಕ್ಟರ್ ಮಾರುತಿ ನಾಯಕ್ ಅಮಾನತಿಗೆ ಒತ್ತಾಯಿಸಿ ಇಂದು ಸಂಜೆ ಪಕ್ಷದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವವರಿಗೆ ರಕ್ಷಣೆ ನಿಡಿದ ಉಡುಪಿ ಪೊಲೀಸರು, ಸಂವಿಧಾನದ ಆಶಯಗಳಿಗೆ ಪರವಾಗಿ ಹೋರಟ ನಡೆಸಿದವರ ಮೇಲೆ ಲಾಠಿಚಾರ್ಜ್ ನಡೆಸಿದ್ದಾರೆ. ಗೂಂಡಾಗಳಂತೆ ವರ್ತಿಸಿದ ಪೊಲೀಸರು ಬಿಜೆಪಿ ಸರಕಾರದ ಏಜೆಂಟರಂತೆ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನಾಕಾರರನ್ನು ಬಂಧಿಸಿ ಇರಿಸಲಾಗಿದ್ದ ಡಿಎಆರ್ ಮೈದಾನದಲ್ಲಿ ಮಹಿಳಾ ಪ್ರತಿಭಟನಾಕಾರರ ಜೊತೆ ಅವರಿಗೆ ದೇಹ ಬಾಧೆ ತೀರಿಸಲು ಅವಕಾಶ ಕೇಳಿದಾಗ ಕೆಲವು ಪೊಲೀಸರು ಅಮಾನುಷವಾಗಿ ನಡೆದುಕೊಂಡರು ಎಂದು ಸಿಪಿಐಎಂ ಉಡುಪಿ ತಾಲೂಕು ಕಾರ್ಯದರ್ಶಿ
ಪಿ.ವಿಶ್ವನಾಥ ರೈ ದೂರಿದರು.
ಪ್ರತಿಭಟನಾಕಾರರನ್ನು ಜೈಲಿಗೆ ಕಳುಹಿಸುವುದು, ದೂರದ ಊರುಗಳಿಂದ ಬಂದವರಿಗೆ ತೊಂದರೆ ಕೊಡುವುದು ಇತ್ಯಾದಿ ಪೊಲೀಸರ ಉದ್ಧೇಶವಾಗಿತ್ತು. ಸಂಜೆಯೇ ಪ್ರತಿಭಟನಾಕಾರರನ್ನು ಬಿಡುಗಡೆಗೊಳಿಸಬೇಕಾಗಿತ್ತು, ಆದರೆ, ಅದರ ಬದಲಾಗಿ ಹಲವು ಸೆಕ್ಷನ್ ಗಳನ್ನು ದಾಖಲಿಸಿ ಮಧ್ಯರಾತ್ರಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು. ಆದರೆ, ಮ್ಯಾಜಿಸ್ಟ್ರೇಟರು ಹೋರಟಗಾರರ ಪರ ವಾದಿಸಿದ ವಕೀಲರ ವಾದವನ್ನು ಆಲಿಸಿ ಜಾಮೀನು ಮಂಜೂರು ಮಾಡಿದರೆಂದು ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಹೇಳಿದರು. ಪೊಲೀಸರ ದಬ್ಬಾಳಿಕೆಗೆ ಹೆದರುವವರು ಕಮ್ಯುನಿಸ್ಟರಲ್ಲ, ಲಾಠಿಚಾರ್ಜ್ ನ್ನು ಸವಾಲಾಗಿ ಸ್ವೀಕರಿಸಲಾಗುವುದು ಎಂದೂ ಶೆಟ್ಟಿ ಘೋಷಿಸಿದರು.
ಸಿಪಿಐಎಂ ಮುಖಂಡರುಗಳಾದ ವೆಂಕಟೇಶ್ ಕೋಣಿ, ವಿಠಲ ಪೂಜಾರಿ, ದೋಗು ಸುವರ್ಣ, ಎಡ್ವಿನ್ ಮೆನೇಜಸ್ ಮೊದಲಾದವರು ಪ್ರತಿಭಟನಾ ಪ್ರದರ್ಶನದ ನೇತೃತ್ವ ವಹಿಸಿದ್ದರು.









