Posts Tagged ‘dr.boralingayya’

ಉಡುಪಿ: ಅಕ್ಟೋಬರ್ 1 ರಂದು ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಉದ್ಘಾಟನೆಗಾಗಿ ಉಡುಪಿ ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಆ ದಿನದ ಕಾರ್ಯಕ್ರಮಗಳ ಬಗ್ಗೆ ಕೆಲವೊಂದು ಗೊಂದಲ ನಿರ್ಮಾಣವಾಗಿರುವುದು ಮತ್ತು ಉಡುಪಿ ಶಾಸಕ ರಘುಪತಿ ಭಟ್ ಬಗ್ಗೆ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ (ರಿ) ಅಧ್ಯಕ್ಷರಾದ ಎ.ಜಿ.ಕೊಡ್ಗಿ ಅಸಮಾಧಾನಗೊಂಡಿರುವುದು ಬಹಿರಂಗಕ್ಕೆ ಬಂದಿದೆ.
ಇಂದು ಬೆಳಗ್ಗೆ ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಎ.ಜಿ.ಕೊಡ್ಗಿ ನಡೆಸಿದ
ಮಾಧ್ಯಮಗೋಷ್ಟಿಯಲ್ಲಿ ಈ ವಿಷಯ ಬೆಳಕಿಗೆ ಬಂತು.
ಅಕ್ಟೋಬರ್ ಒಂದರಂದು ಮುಖ್ಯಮಂತ್ರಿಗಳಿಗೆ ಬೇರೆ ಕಾರ್ಯಕ್ರಮ ನಿಗದಿಯಾಗಿತ್ತು. ನಮ್ಮ ಉಡುಪಿಯ ಕಾರ್ಯಕ್ರಮಗಳಿಗೆ ಅವರು ಮೊದಲು ಒಪ್ಪಿಗೆ ನೀಡಿರಲಿಲ್ಲ. ತಾನು ಒತ್ತಡ ಹಾಕಿದ ಬಳಿಕ ಅವರ ನಿಗದಿತ ಕಾರ್ಯಕ್ರಮವನ್ನು ಮುಂದೂಡಿ, ಉಡುಪಿ ಕಾರ್ಯಕ್ರಮಗಳಿಗೆ ಒಪ್ಪಿಗೆ ನೀಡಿದರು. ಆ ಕಾರ್ಯಕ್ರಮದ ಪ್ರಕಾರ ಬೆಳಗ್ಗೆ ಮುಖ್ಯಮಂತ್ರಿಗಳು ನೇರವಾಗಿ
ಅಮಾಸೆಬೈಲುವಿಗೆ ಆಗಮಿಸಿ ಅಭಿವೃದ್ದಿ ಕಾಮಗಾರಿಗಳ ಉದ್ಘಾಟನಾ ಸಮಾರಂಭಗಳಲ್ಲಿ ಭಾಗವಹಿಸಬೇಕಾಗಿತ್ತು. ಆದರೆ, ಇದೀಗ ಶಾಸಕ ಭಟ್ ಅವರಿಂದಾಗಿ ಶೆಟ್ಟರ್ ಅವರ ಬೆಳಗ್ಗಿನ ಕಾರ್ಯಕ್ರಮದಲ್ಲಿ ಬದಲಾವಣೆಯಾಗಿದೆ. ಮೊದಲಿಗೆ ಉಡುಪಿಯಲ್ಲಿ ಖಾಸಗಿ
ಕಾರ್ಯಕ್ರಮವೊಂದರಲ್ಲಿ ಶೆಟ್ಟರ್ ಅವರು ಭಾಗವಹಿಸಬೇಕಾಗಿದೆ. ಇದರಿಂದಾಗಿ
ಗೊಂದಲವುಂಟಾಗಿದೆ ಎಂದು ಕೊಡ್ಗಿ ಹೇಳಿಕೊಂಡರು.
ಜಗದೀಶ್ ಶೆಟ್ಟರ್ ಅವರು ಬಜಪೆಯಿಂದ ರಸ್ತೆ ಮೂಲಕ ಉಡುಪಿಗೆ ಆಗಮಿಸುತ್ತಾರೋ, ಹೆಲಿಕಾಫ್ಟರ್ ಮೂಲಕ ಆಗಮಿಸುತ್ತಾರೋ ಎನ್ನುವುದು ಸ್ಪಷ್ಟವಾಗಬೇಕಾಗಿದೆ. ಬೆಳಗ್ಗೆ 9 ಗಂಟೆಗೆ ಉಡುಪಿ ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ
ಅಮಾಸೆಬೈಲುವಿಗೆ ಯಾವುದರ ಮೂಲಕ ಆಗಮಿಸುತ್ತಾರೆ ಎನ್ನುವುದೂ ಇನ್ನಷ್ಟೇ
ಸ್ಪಷ್ಟವಾಗಬೇಕಾಗಿದೆ. ಅಮಾಸೆಬೈಲು ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ಎಂದು ನಿರ್ಧರಿಸಲಾಗಿದೆ. ಉಡುಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ 10 ಗಂಟೆಗೆ ಅಮಾಸೆಬೂಲು ಕಾರ್ಯಕ್ರಮಕ್ಕೆ ಆಗಮಿಸಲು ಸಿಎಂ ಅವರಿಗೆ ಕಷ್ಟ ಎಂದು ಕೊಡ್ಗಿ ಆತಂಕ
ವ್ಯಕ್ತಪಡಿಸಿದರು.
ಅಮಾಸೆಬೈಲಿನಲ್ಲಿ ನಡೆಯುವುದು ಜಿಲ್ಲಾಡಳಿತ, ಜಿ.ಪಂ., ಜಿಲ್ಲಾ ಪೋಲೀಸ್ ಇಲಾಖೆ ಮತ್ತು ಗ್ರಾ.ಪಂ.ಗಳ ಕಾರ್ಯಕ್ರಮ. 9 ಗಂಟೆಗೆ ಉಡುಪಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸಿಎಂ ಅವರೇನೋ ಅಮಾಸೆಬೈಲ್ ಗೆ ಹೆಲಿಕಾಫ್ಟರ್ ನಲ್ಲಿ
ಬಂದಿಳಿಯಬಹುದು. ಆದರೆ, ಇದೇ ಸಮಯಕ್ಕೆ ಅಧಿಕಾರಿಗಳು ಅಮಾಸೆಬೈಲಿಗೆ ಆಗಮಿಸಲು ಸಾಧ್ಯವೇ ಎಂಬಿತ್ಯಾದಿ ಪ್ರಶ್ನೆಗಳು ಇದೀಗ ಉದ್ಭವಿಸಿವೆ ಎಂದು ಕೊಡ್ಗಿ ಕಳವಳ ವ್ಯಕ್ತಪಡಿಸಿದರು. ಸಿಎಂ ಉಡುಪಿಗೆ ಆಗಮಿಸುವಾಗ ಜಿಲ್ಲಾಡಳಿತದ ಅಧಿಕಾರಿಗಳು ಉಡುಪಿಯಲ್ಲಿ ಅವರ ಜೊತೆ ಇರಲೇ ಬೇಕಾಗುತ್ತದೆ. 9 ಗಂಟೆಗೆ ಉಡುಪಿಯಲ್ಲಿನ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸಿಎಂ ಏನೋ ಹೆಲಿಕಾಫ್ಟರ್ ನಲ್ಲಿ ತಡವಾಗಿ ಅಮಾಸೆಬೈಲಿಗೆ ಆಗಮಿಸಿ
ಕಾರ್ಯಕ್ರಮಗಳಲ್ಲಿ ಭಾಗಿಯಾಗಬಹುದು. ಆದರೆ, ಇದೇ ಸಮಯಕ್ಕೆ ಡಿಸಿ, ಜಿ.ಪಂ.ಸಿಇಓ, ಎಸ್ ಪಿ ಮೊದಲಾದವರು ಅಮಾಸೆಬೈಲಿಗೆ ಆಗಮಿಸಲು ಸಾಧ್ಯವೇ ?, ಅಮಾಸೆಬೈಲಿನಲ್ಲಿ
ನಡೆಯುತ್ತಿರುವುದು ಜಿಲ್ಲಾಡಳಿತ, ಜಿ.ಪಂ., ಪೋಲೀಸ್ ಇಲಾಖೆಯದೇ ಕಾರ್ಯಕ್ರಮ ಅಲ್ಲವೇ ಎಂದು ಎ.ಜಿ.ಕೊಡ್ಗಿ ಪ್ರಶ್ನಿಸಿದರು.
ಉಡುಪಿ ಶಾಸಕರಾದ ರಘುಪತಿ ಭಟ್ ರವರು ಅ.1 ರಂದು ಬೆಳಗ್ಗೆ 9 ಗಂಟೆಗೆ ಉಡುಪಿ ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುವಂತೆ
ಮಾಡಿರುವುದರಿಂದಾಗಿ ಗೊಂದಲವಾಗಬಹುದು ಎಂಬ ಬಗ್ಗೆ ಈಗಾಗಲೇ ತಾನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ನಿರ್ಮಾಣಗೊಂಡಿರುವ ಸಣ್ಣದೊಂದು ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ಪಶ್ಚಿಮ ವಲಯದ ಐಜಿಪಿ ಅವರು ಸಿಎಂ ಜೊತೆಗೆ ಮಾತಾಡಲಿದ್ದಾರೆ ಎಂದು ಕೊಡ್ಗಿ ತಿಳಿಸಿದರು.
ಅ.1 ರಂದು ಅಮಾಸೆಬೈಲು ಗ್ರಾಮವನ್ನು ಸೋಲಾರ್ ಗ್ರಾಮವನ್ನಾಗಿ ಅನುಷ್ಠಾನಗೊಳಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ. ಗ್ರಾಮವೊಂದನ್ನು ಸೋಲಾರ್ ಗ್ರಾಮವನ್ನಾಗಿ ಪರಿವರ್ತಿಸುವುದು ರಾಜ್ಯದಲ್ಲಿಯೇ ಪ್ರಥಮ ಎಂದು ಕೊಡ್ಗಿ
ಮಾದ್ಯಮಗೋಷ್ಟಿಯಲ್ಲಿ ತಿಳಿಸಿದರಲ್ಲದೆ, ಈ ಬಗ್ಗೆ ಮಾಹಿತರಿಯನ್ನು ನೀಡಿದರು.

ಉಡುಪಿ: ಇಲ್ಲಿನ ಅಲಂಕಾರ್ ಟಾಕೀಸ್ ಹಿಂಬದಿ ಇರುವ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ‘ಪ್ರಸಾದ್ ನೇತ್ರಾಲಯ’ ಕ್ಕೆ ದಾನಿಗಳು ಕೊಡಮಾಡಿದ ಸ್ಪೆಕ್ಯೂಲರ್ ಮೈಕ್ರೋಸ್ಕೋಪ್ ಮತ್ತು ಅಂಬ್ಯುಲೆನ್ಸ್ ಇವುಗಳ ಉದ್ಘಾಟನಾ ಕಾರ್ಯಕ್ರಮ ಆ.23 ರಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ನಡೆಯಿತು.
ಕಣ್ಣಿನ ಸಾಂದ್ರತೆಯನ್ನು ಕಂಡು ಹಿಡಿಯಬಲ್ಲ ಅತ್ಯಾಧುನಿಕ ಯಂತ ಮೈಕ್ರೋಸ್ಕೋಪ್ ಯಂತ್ರವನ್ನು ಸೆಂಚುರಿ ಗ್ರೂಪ್ ನ ಆಡಳಿತ ನಿರ್ದೇಶಕರಾದ ಡಾ.ಪಿ.ದಯಾನಂದ ಪೈ ಆಸ್ಪತ್ರೆಗೆ ನೀಡಿದ್ದರು. ಅಂಬ್ಯುಲೆನ್ಸ್ ನ್ನು ಭಾರತೀಯ ರೆಡ್ ಕ್ರಾಸ್ ಸೊಸೈಟಿ ನೀಡಿತ್ತು.
ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ಅರವಿಂದ ಲಿಂಬಾವಳಿ ಇವುಗಳನ್ನು ಉದ್ಘಾಟಿಸಿದರು. ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ರಾಜ್ಯ ಘಟಕದ ಉಪ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಸೆಂಚುರಿ ಗ್ರೂಪ್ ಎಂಡಿ ಡಾ.ದಯಾನಂದ ಪೈ, ಶಾಸಕ ಕೆ.ರಘುಪತಿ ಭಟ್, ನಗರಸಭಾಧ್ಯಕ್ಷ ಕಿರಣ ಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ಎಸ್ ಪಿ ಡಾ.ಬೋರಲಿಂಗಯ್ಯ, ನಗರ ಸಭಾ ಸದಸ್ಯ ಯಶಪಾಲ್ ಸುವರ್ಣ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ನ ರಘುರಾಮ ರಾವ್ ಕೆ., ಪ್ರಸಾದ್ ನೇತ್ರಾಲಯದ ಡಾ.ಕೃಷ್ಣ ಪ್ರಸಾದ್, ರಶ್ಮಿ ಕೃಷ್ಣ ಪ್ರಸಾದ್, ಬಾಲಕೃಷ್ಣ ಮಧೂರು ಮೊದಲಾದವರು ಸಮಾರಂಬದಲ್ಲಿ ಉಪಸ್ಥಿತರಿದ್ದರು. ಚಿತ್ರಗಳು: ಶ್ರೀರಾಮ ದಿವಾಣ.

ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಉನ್ನತೀಕರಣ ಕಾಮಗಾರಿಗೆ ಶಂಕುಸ್ಥಾಪನೆ, ನವೀಕೃತ ಡಯಾಲಿಸಿಸ್ ಮತ್ತು ಪ್ರಯೋಗಾಲಯ ವಿಭಾಗಗಳ ಉದ್ಘಾಟನಾ ಕಾರ್ಯಕ್ರಮ
ಅಜ್ಜರಕಾಡುವಿನಲ್ಲಿರುವ ಆಸ್ಪತ್ರೆಯ ಆವರಣದಲ್ಲಿ ಇಂದು ಬೆಳಗ್ಗೆ ನಡೆಯಿತು. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಅರವಿಂದ ಲಿಂಬಾವಳಿ ಅವರು ಶಂಕುಸ್ಥಾಪನೆ ನೆರವೇರಿಸಿ, ನವೀಕೃತ ವಿಭಾಗಗಳನ್ನು ಉದ್ಘಾಟಿಸಿದರು. ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಪಂಚಾಯತ್ ಅಧ್ಯಕ್ಷ ದೇವದಾಸ್ ಹೆಬ್ಬಾರ್, ನಗರ ಸಭಾದ್ಯಕ್ಷ ಕಿರಣ್ ಕುಮಾರ್, ಉಪಾಧ್ಯಕ್ಷೆ ಭಾರತಿ ಚಂದ್ರಸೇಖರ್, ಸ್ಥಳೀಯ ನಗರ ಸಭಾ ಸದಸ್ಯ ಯಶಪಾಲ್ ಸುವರ್ಣ, ಜಿಲ್ಲಾಸ್ಪತ್ರೆ ಅಭಿವೃದ್ದಿ ಸಮಿತಿ ಅಧ್ಯಕ್ಷ ರಬೀಂದ್ರ ನಾಯಕ್, ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಬೋರಲಿಂಗಯ್ಯ ಎಂ.ಬಿ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎ.ಪ್ರಭಾಕರ ಶರ್ಮ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯಿರಿ, ಡಾ.ಆನಂದ ನಾಯಕ್ ಮೊದಲಾದವರು ಸಮಾರಂಬದಲ್ಲಿ ಉಪಸ್ಥಿತರಿದ್ದರು.
ವೈದ್ಯಾಧಿಕಾರಿಗಳ ಸಂಘದ ಉಡುಪಿ ಘಟಕದ ವತಿಯಿಂದ ಇದೇ ಸಂದರ್ಭದಲ್ಲಿ ಸಚಿವ
ಲಿಂಬಾವಳಿಯವರನ್ನು ಸಮ್ಮಾನಿಸಲಾಯಿತು.

ಉಡುಪಿ: 66 ನೇ ಸ್ವಾತಂತ್ರ್ಯೋತ್ಸವವನ್ನು ಉಡುಪಿ ಜಿಲ್ಲಾಡಳಿತ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ ವೈಭವದಿಂದ ಆಚರಿಸಿತು.
ಬೆಳಗ್ಗೆ ಗಂಟೆ 8.30 ರಿಂದ ಬಿ.ಕೃಷ್ಣ ಕಾರಂತ ಹಾಗೂ ಬಳಗದವರಿಂದ ದೇಶ ಭಕ್ತಿ ಗೀತೆಗಳ ಗಾಯನ ಆಯೋಜಿಸಲಾಗಿತ್ತು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಧ್ವಜಾರೋಹಣ ನೆರವೇರಿಸಿ ವಿವಿಧ ತಂಡಗಳ ಗೌರವ ರಕ್ಷೆ ಸ್ವೀಕರಿಸಿದರು. ಪಥ ಸಂಚಲನ ವೀಕ್ಷಿಸಿದರು.ಸ್ವಾತಂತ್ರ್ಯೋತ್ಸವ ಸಂದೇಶವನ್ನೂ ನೀಡಿದರು.
ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಜಿಲ್ಲೆಯ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳನ್ನು, ಉತ್ತಮ ಸೇವೆ ಸಲ್ಲಿಸಿದ ಯರ್ಲಪಾಡಿ ಮತ್ತು ಮಾಳ ಗ್ರಾಮ ಪಂಚಾಯತಿನ ಭಾರತ್ ನಿರ್ಮಾಣ್ ಸ್ವಯಂ ಸೇವಕರನ್ನು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಸಮಾರಂಭದಲ್ಲಿ ಸಮ್ಮಾನಿಸಲಾಯಿತು. ಪಥ ಸಂಚಲನದಲ್ಲಿ ಉತ್ತಮ ನಿರ್ವಹಣೆ ಪ್ರದರ್ಶಿಸಿದ ವಿವಿಧ ಶಾಲೆಗಳ ವಿದ್ಯಾರ್ಥಿಗಳ ತಂಡಗಳಿಗೆ ಬಹುಮಾನ ನೀಡಿ
ಅಭಿನಂದಿಸಲಾಯಿತು.
ಶಾಲಾ ಮಕ್ಕಳಿಂದ ನಾಡ ಗೀತೆ, ರೈತ ಗೀತೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಚಿತ್ರಗಳು: ಶ್ರೀರಾಮ ದಿವಾಣ.

ಉಡುಪಿ: ದೇಶದ 66 ನೇ ಸ್ವಾತಂತ್ರ್ಯೋತ್ಸವವನ್ನು ಉಡುಪಿ ಜಿಲ್ಲಾಡಳಿತದ ವತಿಯಿಂದ ಉಡುಪಿಯ ಅಜ್ಜರಕಾಡುವಿನಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಅತ್ಯಂತ ಸಡಗರ – ಸಂಭ್ರಮಗಳೊಂದಿಗೆ ವಿವಿಧ ವೈವಿಧ್ಯಮ ಕಾರ್ಯಕ್ರಮಗಳ ಮೂಲಕ ಇಂದು ಬೆಳಗ್ಗೆ
ಆಚರಿಸಲಾಯಿತು.
ರಾಜ್ಯದ ಮುಜುರಾಯಿ, ಬಂದರು ಮತ್ತು ಒಳನಾಡ ಜಲ ಸಾರಿಗೆ ಸಚಿವರೂ, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೋಟ ಶ್ರೀನಿವಾಸ ಪೂಜಾರಿ ಅವರು ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು. ಸ್ವಾತಂತ್ರ್ಯ, ಸ್ವಾತಂತ್ರ್ಯ, ಸ್ವಾತಂತ್ರ್ಯ ಗೀತಂ
ಭವ್ಯ ಭಾರತ ವರ್ಷ ಗಣರಾಜ್ಯ ಗೀತಂ
ಭಾರತಾಂಬೆಯೇ ನಿನಗೆ ಗೌರವ ಪ್ರಣಾಮಂ
ಮುನ್ನಡೆಸು ನಮ್ಮನಿದೋ ಕೈಮುಗಿದು ಪ್ರಾರ್ಥಿಪೆನ್.. ಎಂಬ ಪ್ರಾರ್ಥನೆಯೊಂದಿಗೆ ಮಾತು ಆರಂಭಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು, ಕವಿ ಕಯ್ಯಾರ ಕಿಞ್ಞಣ್ಣ ರೈ ಅವರ ಐಕ್ಯವೊಂದೇ ಮಂತ್ರ
ಐಕ್ಯದಿಂದ ಸ್ವತಂತ್ರ್ಯ
ಐಕ್ಯಗಾನದಿ ರಾಷ್ಟ್ರ ತೇಲುತಿರಲಿ
ಭಾರತದಿ ಮಮ ಜನ್ಮ
ಸ್ವಾತಂತ್ರ್ಯವೇ ಧರ್ಮ
ಒಕ್ಕೊರಲಿನ ಉದ್ಘೋಷ ಕೇಳುತಿರಲಿ..
ಎಂಬ ಐಕ್ಯಗಾನವನ್ನು ಉಲ್ಲೇಖಿಸುತ್ತಾ, ದೇಶದ ಐಕ್ಯತೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿಕೊಂಡು ಸ್ವಾತಂತ್ರ್ಯ ಶಿಲ್ಪಿಗಳ ಉದಾತ್ತ ಆದರ್ಶವನ್ನು ಯುವ ಜನಾಂಗ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪರಮ ಸತ್ಯದ ಸಾಕ್ಷಾತ್ಕಾರವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲೆಯ ಜನತೆಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ 3 ನೇ ಹಣಕಾಸು ಆಯೋಗದ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ
ಎ.ಜಿ.ಕೊಡ್ಗಿ, ಶಾಸಕರಾದ ಕೆ.ರಘುಪತಿ ಬಟ್, ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಬೋರಲಿಂಗಯ್ಯ ಎಂ.ಬಿ. ಮೊದಲಾದವರು ಉಪಸ್ಥಿತರಿದ್ದರು. ಚಿತ್ರಗಳು – ವರದಿ: ಶ್ರೀರಾಮ ದಿವಾಣ.

ಉಡುಪಿ: ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ನಡೆಸಿದ ಬಂದೂಕು ತರಬೇತಿ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸುವ ಕಾರ್ಯಕ್ರಮವು ಜೂನ್ 16 ರಂದು ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕೇಂದ್ರ ಸ್ಥಾನದಲ್ಲಿ ನಡೆಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಎಂ.ಬಿ.ಬೋರಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಿದ ಸಮಾರಂಭದಲ್ಲಿ ಹೆಚ್ಚುವರಿ ಎಸ್ಪಿ ಎಂ.ವಿ.ವೆಂಕಟೇಶಪ್ಪ, ಉಡುಪಿ ಉಪ ವಿಭಾಗದ ಡಿವೈಎಸ್ಪಿ ಡಾ.ಪ್ರಭುದೇವ ಮಾನೆ, ಕಾರ್ಕಳ ಉಪ ವಿಭಾಗದ ಡಿವೈಎಸ್ಪಿ ಜಯಂತ್ ವಿ.ಶೆಟ್ಟಿ ಹಾಗೂ ಮೀಸಲು ಪಡೆಯ ಇನ್ಸ್ ಪೆಕ್ಟರ್ ಎಂ.ಎಂ.ಯಾದವಾಡ್ ಉಪಸ್ಥಿತರಿದ್ದರು.
ಸ್ವಯಂ ರಕ್ಷಣೆಗಾಗಿ 50 ಮಂದಿ ನಾಗರೀಕರಿಗೆ ಬಂದೂಕು ತರಬೇತಿ ನೀಡಲಾಗಿದೆ. ಬಂದೂಕು ತರಬೇತುದಾರರಾದ ಸುದರ್ಶನ್ ಅವರು ತರಬೇತಿ ನೀಡಿದ್ದಾರೆ. ಶಿಬಿರದಲ್ಲಿ ಭಾಗವಹಿಸಿದವರು ಮುಂದಿನ ದಿನಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಜೊತೆಗೆ ಸಹಕರಿಸುವುದಾಗಿ ಪ್ರಮಾಣ ಮಾಡಿದ್ದಾರೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಉಡುಪಿ: ಇಲ್ಲಿನ ಆಫೀಸರ್ಸ್ ಕ್ಲಬ್, ಪ್ರಸಾದ್ ನೇತ್ರಾಲಯ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಸ್ವದೇಶಿ ಗ್ರೂಪ್ ಆಫ್ ಕನ್ಸರ್ನ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ನಿವಾರಣಾ ವಿಭಾಗ) ಇವುಗಳ ಜಂಟೀ ಆಶ್ರಯದಲ್ಲಿ ಮೇ.1 ರಂದು ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು.
ಸ್ವದೇಶಿ ಗ್ರೂಪ್ ಆಪ್ ಕನ್ಸರ್ನ್ ನ ನಾಗೇಶ್ ಹೆಗ್ಡೆ ಶಿಬಿರವನ್ನು ಉದ್ಘಾಟಿಸಿದರು. ಎಸ್ಪಿ ಡಾ.ಬೋರಲಿಂಗಯ್ಯ ಎಂ.ಬಿ., ಜಿ.ಪಂ.ಸಿಇಓ ಎಸ್.ಎ.ಪ್ರಭಾಕರ ಶರ್ಮ, ಪ್ರಸಾದ್ ನೇತ್ರಾಲಯದ ಡಾ.ಕೃಷ್ಣಪ್ರಸಾದ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಡಾ.ನಿತ್ಯಾನಂದ ನಾಯಕ್ ಅತಿಥಿಗಳಾಗಿ ಭಾಗವಹಿಸಿದ್ದರು. ಆಫೀಸರ್ಸ ಕ್ಲಬ್ ನ ಗೋಕುಲದಾಸ್ ನಾಯಕ್ ಉಪಸ್ಥಿತರಿದ್ದರು.

ಉಡುಪಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮತ್ತು ಕರ್ನಾಟಕ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ನೌಕರರ ಒಕ್ಕೂಟ ಇವುಗಳ ಜಂಟೀ ಆಶ್ರಯದಲ್ಲಿ ಎ.30 ರಂದು ಉಡುಪಿಯಲ್ಲಿ ಭಾರತರತ್ನ, ಸಂವಿಧಾನಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 121 ನೇ ಜನ್ಮ ದಿನವನ್ನು ಆಚರಿಸಲಾಯಿತು.
ಬೆಳಗ್ಗೆ ಅಜ್ಜರಕಾಡು ಪುರಭವನದ ಮುಂಭಾಗದಿಂದ ಬನ್ನಂಜೆವರೆಗೆ ಅಂಬೇಡ್ಕರ್ ಹಾಗೂ ಭಗವಾನ್ ಬುದ್ದರ ಭಾವಚಿತ್ರಗಳನ್ನು ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಎಸ್ಪಿ ಡಾ.ಬೋರಲಿಂಗಯ್ಯ ಜಾಥಾಕ್ಕೆ ಚಾಲನೆ ನೀಡಿದರು.
ಮಧ್ಯಾಹ್ನ ಬನ್ನಂಜೆಯಲ್ಲಿರುವ ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸಮಾಜ ಕಲ್ಯಾಣ ಮತ್ತು ಬಂಧಿಖಾನೆ ಸಚಿವ ಎ.ನಾರಾಯಣ ಸ್ವಾಮಿ ಸಮಾರಂಭವನ್ನು ಉದ್ಘಾಟಿಸಿದರು. ಶಾಸಕ ಕೆ.ರಘುಪತಿ ಭಟ್ ಅವರು ಅಂಬೇಡ್ಕರ್
ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿದರು. ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಹೂವಪ್ಪ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ಉದ್ಯಮಿ ಪ್ರಮೋದ್ ಮಧ್ವರಾಜ್, ಪ್ರೊ.ಮುರುಗೇಶಿ, ಉಪನ್ಯಾಸಕ ವಾಸುದೇವ ಬೆಳ್ಳೆ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿದ್ದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ, ಸಮಾಜ ಸೇವಕರಾದ ಜಿ.ಗುರುವಪ್ಪ ಮಾಸ್ತರ್, ನಿವೃತ್ತ ಮುಖ್ಯ ಶಿಕ್ಷಕ ಬಿರ್ತಿ ನಾರಾಯಣ ಮಾಸ್ತರ್ ಹಾಗೂ ದಸಂಸ ಸಂಘಟಕ ಸುಂದರ ಗುಜ್ಜರಬೆಟ್ಟು ಇವರನ್ನು ಸಮ್ಮಾನಿಸಲಾಯಿತು. ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ದಸಂಸ ಮುಖಂಡರಾದ ಸುಂದರ ಮಾಸ್ತರ್, ಶ್ಯಾಮರಾಜ್ ಬಿರ್ತಿ, ಎಸ್.ಎಸ್.ಪ್ರಸಾದ್, ಪರಮೇಶ್ವರ ಉಪ್ಪೂರು ಮುಂತಾದವರು ಉಪಸ್ಥಿತರಿದ್ದರು.

ಉಡುಪಿ: ಮಣಿಪಾಲದ ನೂತನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಸಾರಿಗೆ ಇಲಾಖಾ ಕಚೇರಿ ಕಟ್ಟಡವನ್ನು ಸಾರಿಗೆ ಮತ್ತು ಗೃಹ ಸಚಿವರಾದ ಆರ್.ಅಶೋಕ್ ಅವರು ಫೆ.16 ರಂದು ಬೆಳಗ್ಗೆ ಪರಿಶೀಲನೆ ನಡೆಸಿ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯನ್ನೂ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು, ಜಿಲ್ಲಾ ಪೋಲೀಸ್ ಅಧೀಕ್ಷಕರಾದ ಡಾ.ಬೋರಲಿಂಗಯ್ಯ, ಸಾರಿಗೆ ಅಧಿಕಾರಿ ರಮೇಶ್ ಮೊದಲಾದವರು ಸಚಿವರ ಜೊತೆಗೆ ಇದ್ದರು.
ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಚಿವರು, ಬನ್ನಂಜೆಯಲ್ಲಿ ನೂತನವಾಗಿ ನಿರ್ಮಿಸಲಿರುವ ಸಾರಿಗೆ ನಿಲ್ದಾಣಕ್ಕೆ ದಿವಂಗತ ಡಾ.ವಿ.ಎಸ್.ಆಚಾರ್ಯರ ಹೆಸರು ಇರಿಸುವುದಾಗಿ ಹೇಳಿದರು. ಕರಾವಳಿ ಕಾಲು, ನಕ್ಸಲ್ ಚಟುವಟಿಕೆ ಮತ್ತು ಕೋಮು ಸೌಹಾರ್ದದ ಕಡೆ ಸರಕಾರ ವಿಶೇಷ ನಿಗಾ ವಹಿಸಲಿದೆ ಎಂದು ತಿಳಿಸಿದರು. ಪೋಲೀಸ್ ಇಲಾಖೆಯನ್ನು ಆಧುನಿಕೀಕರಣಗೊಳಿಸಲಾಗುವುದು, ಪೋಲೀಸ್ ಸಿಬ್ಬಂದಿಗಳ ನೇಮಕಾತಿ ಪ್ರಕ್ರೀಯೆ ನಡೆಸಲಾಗುವುದು ಎಂದು ಹೇಳಿದರು.
ಫೆ.15 ರಂದು ಉದುಪಿಗೆ ಆಗಮಿಸಿದ ಸಚಿವರು ಡಾ.ಆಚಾರ್ಯರ ಮನೆಗೆ ಭೇಟಿ ನೀಡಿ, ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು.

ಉಡುಪಿ: ಮಲ್ಪೆಯ ಸೈಂಟ್ ಮೇರೀಸ್ ಐಲ್ಯಾಂಡ್ ನಲ್ಲಿ ಜಿಲ್ಲಾಡಳಿತದ ವತಿಯಿಂದ 3 ದಿನಗಳ ಕಾಲ ಮುಕ್ತ ಕಾಮಕೇಳಿ ಸಹಿತವಾಗಿ ನಡೆದ ರೇವ್ ಪಾರ್ಟಿಯನ್ನು ಖಂಡಿಸಿ ಫೆ.7 ರಂದು ಬೆಳಗ್ಗೆ ಜೆಡಿಎಸ್ ಪಕ್ಷದ ಜಿಲ್ಲಾ ಸಮಿತಿಯ ವತಿಯಿಂದ ಉಡುಪಿ ನಗರದಲ್ಲಿ ಬಹಿರಂಗ ಸಭೆ ಆಯೋಜಿಸಲಾಗಿದೆ.
ಸಭೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಎಂ.ಜಿ.ಹೆಗಡೆ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ.