ಉಡುಪಿ: ಪ್ರಮುಖ 16 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆಂಟರ್ ಆಪ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಜೂನ್ 14 ರಂದು ಉಡುಪಿ ತಾಲೂಕು ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿ, ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು. ಬೀಡಿ ಕಾರ್ಮಿಕರ ಮಕ್ಕಳಿಗೆ 1 ನೇ ತರಗತಿಯಿಂದ 8 ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿ ಮೂಲಕ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು, ಪೆಟ್ರೋಲ್, ಡೀಸೆಲ್, ಆಹಾರ ಪದಾರ್ಥಗಳ ಸಹಿತ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನಿಯಂತ್ರಣ ಹಾಕಬೇಕು, ಕಾರ್ಮಿಕರ ಕನಿಷ್ಟ ವೇತನವನ್ನು ನ್ಯಾಯವಾದ ಮೌಲ್ಯಗಳ ಆಧಾರದಲ್ಲಿ ಸರಕಾರ ಪರಿಷ್ಕರಣೆ ಮಾಡಬೇಕು, ಅಂಗನವಾಡಿ, ಬಿಸಿಯೂಟ, ಆಶಾ, ಸರ್ವ ಶಿಕ್ಷಾ ಅಭಿಯಾನ, ಆರೋಗ್ಯ ಇಲಾಖೆಯೇ ಮುಂತಾದೆಡೆಗಳಲ್ಲಿ ಒಂದು ಕೋಟಿಗೂ ಮಿಕ್ಕಿ ಮಹಿಳೆಯರನ್ನು ಸ್ವಯಂಸೇವಕರೆಂದು ನೇಮಿಸಿಕೊಂಡು ಗೌರವಧನದ ಆಧಾರದಲ್ಲಿ ದಶಕಗಳಿಂದ ದುಡಿಸಿಕೊಳ್ಳಲಾಗುತ್ತಿದ್ದು ಇವರನ್ನು ಸರಕಾರಿ ನೌಕರರೆಂದು ಪರಿಗಣಿಸಿ ಸ್ಕಿಲ್ ಆಧಾರದಲ್ಲಿ ಕನಿಷ್ಟ ವೇತನವನ್ನು ನಿಗದಿಪಡಿಸಬೇಕು ಎಮದು ಸಿಐಟಿಯು ಸರಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದೆ. ಸಾಮಾನ್ಯ ಕನಿಷ್ಟ ವೇತನವನ್ನು ನಿಗದಿ ಮಾಡಲು ಸರಕಾರ ರಚಿಸಿದ ತಜ್ಞರ ಸಮಿತಿಯನ್ನು ರಾಜ್ಯ ಸರಕಾರ ರಚಿಸಿದ್ದು, ಈ ಸಮಿತಿಯನ್ನು ಕಾರ್ಯನಿರ್ವಹಿಸುವಂತೆ ಮಾಡಬೇಕು, ಗ್ರಾಮ ಪಂಚಾಯತಿಗಳಲ್ಲಿ ದಶಕದಿಂದ ದುಡಿಯುತ್ತಿರುವ ಕಸ ಗುಡಿಸುವವರು, ಪಂಪ್ ಆಪರೇಟರ್, ಬಿಲ್ ಕಲೆಕ್ಟರ್ಗಳೇ ಮೊದಲದ ನೌಕರರಿಗೆ ಭಡ್ತಿ ನೀಡಬೇಕು, 1996 ಕ್ಕೆ ಮೊದಲು ಇದ್ದ ವಿಧಾನದಂತೆ ಪಡಿತರ ಚೀಟಿ ವ್ಯವಸ್ಥೆಯನ್ನು ಜ್ಯಾರಿಗೊಳಿಸಬೇಕು ಎಂದು ಸಿಐಟಿಯು ಸರಕಾರವನ್ನು ಆಗ್ರಹಿಸಿದೆ.
ಕಾರ್ಮಿಕರ ಸಮಸ್ಯೆಗಳನ್ನು ಚರ್ಚಿಸಲು ಕೇಂದ್ರ ಸರಕಾರದ ಮಾದರಿಯಲ್ಲಿ ರಾಜ್ಯದಲ್ಲಿ ರಾಜ್ಯ ಮಟ್ಟದ ಕಾರ್ಮಿಕರ ಸಮ್ಮೇಳನವನ್ನು ನಡೆಸುವ ವ್ಯವಸ್ಥೆಯನ್ನು
ಜ್ಯಾರಿಗೊಳಿಸಬೇಕು, ಎಲ್ಲಾ ಕಾರ್ಮಿಕರಿಗೂ ಉಚಿತವಾಗಿ ನಿವೇಶನ ಮತ್ತು ವಸತಿ ವಿತರಿಸಬೇಕು, ರಾಜ್ಯ ಸರಕಾರದ ಒಡೆತನದಲ್ಲಿರುವ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು, ಕಾರ್ಮಿಕ ಚಳುವಳಿಯ ಸಂದರ್ಭದಲ್ಲಿ ಕಾರ್ಮಿಕರ ಮೇಲೆ ಹೂಡಲಾದ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳಬೇಕು, ವಿವಿಧ ಇಲಾಖೆಗಳಲ್ಲಿ ಕಾಲಿ ಇರುವ ಸಿಬ್ಬಂದಿಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಪ್ರತಿಭಟನಾಕಾರರು ಹಕ್ಕೊತ್ತಾಯ ಮಂಡಿಸಿದರು.
ಸಿಐಟಿಯು ಮುಖಂಡರುಗಳಾದ ಬಾಲಕೃಷ್ಣ ಶೆಟ್ಟಿ, ಪಿ.ವಿಶ್ವನಾಥ ರೈ, ದೋಗು ಸುವರ್ಣ, ಕೆ.ಲಕ್ಷ್ಮಣ ಮಲ್ಪೆ, ಉಮೇಶ್ ಉಡುಪಿ, ಜ್ಯೋತಿ ಸಗ್ರಿ, ಸತೀಶ್ ಪೂಜಾರಿ ಕಲ್ಯಾಣಪುರ, ಗೋಡ್ವಿನ್ ಫೆರ್ನಾಂಡಿಸ್ ಬ್ರಹ್ಮಾವರ, ವಿಠಲ ಪೂಜಾರಿ ಬ್ರಹ್ಮಾವರ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
Posts Tagged ‘cpim’
ವಿವಿಧ ಬೇಡಿಕೆ ಮುಂದಿಟ್ಟು ಸಿಐಟಿಯು ಪ್ರತಿಭಟನ ೆ
Posted: June 15, 2013 in UncategorizedTags: : situ, bjp, congress, cpi, cpim, cpm
ಜೂ.14: ಮಹಿಳಾ ಶೋಷಕ ಸರಕಾರದ ವಿರುದ್ಧ ಸಿಐಟಿಯುನಿಂ ದ ರಾಜ್ಯಾದ್ಯಂತ ಪ್ರತಿಭಟನೆ
Posted: June 10, 2013 in UncategorizedTags: aiyf, citu, congress, congress govt, cpi, cpim, dyfi, nda, sfi, upa
ಉಡುಪಿ: ಬೀಡಿ ಕಾರ್ಮಿಕರ ಮಕ್ಕಳಿಗೆ ಇದುವರೆಗೆ 1 ನೇ ತರಗತಿಯಿಂದ 8 ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಬೀಡಿ ಕಾರ್ಮಿಕರ ಕಲ್ಯಾಣ ಮಂಡಳಿ ಮೂಲಕ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ಸ್ಥಗಿತಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿರುವುದನ್ನು ಖಂಡಿಸುವುದರ ಜೊತೆಗೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಜೂನ್ 14 ರಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ಮೆರವಣಿಗೆ, ಧರಣಿ
ಇತ್ಯಾದಿಗಳನ್ನು ಹಮ್ಮಿಕೊಳ್ಳಲು ಸಿಐಟಿಯು ನಿರ್ಧರಿಸಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್ ತಿಳಿಸಿದ್ದಾರೆ.
ನಗರದ ಖಾಸಗಿ ಹೋಟೇಲೊಂದರಲ್ಲಿ ಜೂನ್ 9 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಈ ಬಗ್ಗೆ ವಿವರ ನೀಡಿದರು.
ಪೆಟ್ರೋಲ್, ಡೀಸೆಲ್, ಆಹಾರ ಪದಾರ್ಥಗಳ ಸಹಿತ ವಿವಿಧ ಅಗತ್ಯ ವಸ್ತುಗಳ ಬೆಲೆ ತೀವ್ರವಾಗಿ ಏರುತ್ತಿವೆ. ಸಕ್ಕರೆ ನಿಯಂತ್ರಣವನ್ನೂ ಕೇಂದ್ರ ಸರಕಾರ ತೆಗೆದು ಹಾಕಿದೆ. ಕಾರ್ಮಿಕರ ಕನಿಷ್ಟ ವೇತನವನ್ನು ನ್ಯಾಯವಾದ ಮೌಲ್ಯಗಳ ಆಧಾರದಲ್ಲಿ ಸರಕರ ಪರಿಷ್ಕರಣೆ ಮಾಡುತ್ತಿಲ್ಲ.
ಅಂಗನವಾಡಿ, ಬಿಸಿಯೂಟ, ಆಶಾ, ಸರ್ವ ಶಿಕ್ಷಾ ಅಭಿಯಾನ, ಆರೋಗ್ಯ ಇಲಾಖೆಯೇ
ಮುಂತಾದೆಡೆಗಳಲ್ಲಿ ಒಂದು ಕೋಟಿಗೂ ಮಿಕ್ಕಿ ಮಹಿಳೆಯರನ್ನು ಸ್ವಯಂಸೇವಕರೆಂದು ನೇಮಿಸಿಕೊಂಡು ಗೌರವಧನದ ಆಧಾರದಲ್ಲಿ ದಶಕಗಳಿಂದ ದುಡಿಸಿಕೊಳ್ಳುತ್ತಿದೆ. ಇವರಿಗೆ ಸರಕಾರ ಅತೀ ಕಡಿಮೆ ವೇತನವನ್ನು ನೀಡುತ್ತಿದೆ. ಇವರಿಗೆಲ್ಲಾ ಇನ್ನಾದರೂ ಸರಕಾರಿ ನೌಕರರೆಂದು ಪರಿಗಣಿಸಿ ಕನಿಷ್ಟ ವೇತನವನ್ನು ನಿಗದಿ ಮಾಡುವುದರ ಜೊತೆಗೆ ಎಲ್ಲಾ ಕಾನೂನುಬದ್ಧ ಸೌಲಭ್ಯಗಳನ್ನು ಅನುಷ್ಟಾನ ಗೊಳಿಸಬೇಕು. ಸ್ವಯಂಸೇವಕರೆಂದು ಹೇಳಿ ಮಹಿಳೆಯರನ್ನು ದುಡಿಸಿಕೊಳ್ಳುವ ಮೂಲಕ ಸರಕಾರವೇ ಮಹಿಳೆಯರನ್ನು ಶೋಷಣೆ ಮಾಡುತ್ತಿದೆ. ಇದೆಲ್ಲಾ ತಪ್ಪಬೇಕು ಎಂದು ಪ್ರಸನ್ನಕುಮಾರ್ ಹೇಳಿದರು.
ನಿರಂತರ ಹೋರಾಟದ ಫಲವಾಗಿ ಸಾಮಾನ್ಯ ಕನಿಷ್ಟ ವೇತನವನ್ನು ನಿಗದಿ ಮಾಡುವ ಕುರಿತು ತಜ್ಞರ ಸಮಿತಿಯೊಂದನ್ನು ರಾಜ್ಯ ಸರಕಾರ ರಚಿಸಿದೆ. ಆದರೆ ಈ ಸಮಿತಿಯನ್ನು
ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ರಾಜ್ಯ ಸರಕಾರ ಮತ್ತು ಕಾರ್ಮಿಕ ಇಲಾಖೆ ಸಂಪೂರ್ಣ ವಿಫಲವಾಗಿದೆ. ಗ್ರಾಮ ಪಂಚಾಯತಿಗಳಲ್ಲಿ ದಶಕದಿಂದ ದುಡಿಯುತ್ತಿರುವ ಕಸ ಗುಡಿಸುವವರು, ಪಂಪ್ ಆಪರೇಟರ್, ಬಿಲ್ ಕಲೆಕ್ಟರ್ ಗಳೇ ಮೊದಲದ ನೌಕರರಿಗೆ ಭಡ್ತಿ ನೀಡಬೇಕಾದರೆ ಸರಕಾರದ ಅನುಮೋದನೆ ಪಡೆಯಬೇಕೆಂಬ ನಿಯಮವನ್ನು ವಿಭಿನ್ನವಾಗಿ ಜ್ಯಾರಿಗೊಳಿಸಲು ಸರಕಾರ ಮುಂದಾಗಿದೆ ಎಂದು ಪ್ರಸನ್ನಕುಮಾರ್ ಆರೋಪಿಸಿದರು.
ಕೇಂದ್ರ ಸರಕಾರ ಕೇವಲ 79 ಉದ್ಯೋಗಗಳನ್ನು ಮಾತ್ರ ಶೆಡ್ಯೂಲ್ ವ್ಯಾಪ್ತಿಗೆ ಸೇರಿಸಿದೆ. ಈ ಶೆಡ್ಯೂಲ್ ವ್ಯವಸ್ಥೆಯೇ ರದ್ದಾಗಬೇಕು. ಎಲ್ಲಾ ಉದ್ಯೋಗಗಳಿಗೂ ಸ್ಕಿಲ್ ಆಧಾರದಲ್ಲಿ ಕನಿಷ್ಟ ವೇತನ ನಿಗದಿ ಮಾಡಬೇಕು. ಪಂಜಾಬ್, ಹರ್ಯಾಣ ಸಹಿತ ದೇಶದ 8 ರಾಜ್ಯಗಳಲ್ಲಿ ಸ್ಕಿಲ್ ಆಧಾರಿತ ಕನಿಷ್ಟ ವೇತನ ಜ್ಯಾರಿಯಲ್ಲಿದೆ. ಕರ್ನಾಟಕವೂ ಇದನ್ನು
ಜ್ಯಾರಿಗೊಳಿಸಬೇಕು ಎಂದು ಪ್ರಸನ್ನಕುಮಾರ್ ಒತ್ತಾಯಿಸಿದರು.
ತ್ರಾಸಿಯಲ್ಲಿ ಕೊರಗ ಸಮುದಾಯಕ್ಕೆ ಸೇರಿದ ಗ್ರಾಮ ಪಂಚಾಯತ್ ಅಧ್ಯಕ್ಷೆಯ ಮದುವೆ ನೆರವೇರಿಸಲು ಬ್ರಾಹ್ಮಣ ಪುರೋಹಿತ ನಿರಾಕರಿಸುವ ಮೂಲಕ ಜಾತಿ ಅಸ್ಪೃಶ್ಯತೆ
ನಡೆಸಿದ್ದನ್ನು ಸಿಐಟಿಯು ಖಂಡಿಸುತ್ತದೆ ಎಂದು ತಿಳಿಸಿದ ಪ್ರಸನ್ನಕುಮಾರ್, ಇದೇ ಗ್ರಾ.ಪಂ.ಅಧ್ಯಕ್ಷೆಯನ್ನು ಮುಂದಿಟ್ಟುಕೊಂಡು ಮಸೀದಯ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದ ಸಂಗ ಪರಿವಾರ ಈಗ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.
ಸಾಮಾಜಿಕ ನ್ಯಾಯಕ್ಕಾಗಿ ಪಂಕ್ತಿಬೇಧ ವಿರೋಧಿಸಿ ಉಡುಪಿಯಲ್ಲಿ ಪ್ರತಿಭಟನೆ ನಡೆಸಿದವರ ವಿರುದ್ಧ ಪೊಲೀಸರು ದಾಖಲಿಸಿದ ಕೇಸುಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಪ್ರಸನ್ನ ಕುಮಾರ್ ಆಗ್ರಹಿಸಿದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಉಡುಪಿ ಜಿಲ್ಲೆ: 3 ಕಾಂಗ್ರೆಸ್, 1 ಬಿಜೆಪಿ, 1 ಪಕ್ಷೇತ ರ
Posted: May 8, 2013 in UncategorizedTags: bjp, BSP, congress, cpim, Election, jds, jdu, karnataka election, sdpi, udupi election, udupibits, udupibits.com, www.udupibits.com
ಉಡುಪಿ: ಪ್ರಮೋದ್ ಮಧ್ವರಾಜ್ (ಕಾಂಗ್ರೆಸ್)- 86,868, ಬಿ.ಸುಧಾಕರ ಶೆಟ್ಟಿ (ಬಿಜೆಪಿ)- 47,344, ಅಲೆವೂರು ಯೋಗೀಶ್ ಆಚಾರ್ಯ (ಪಕ್ಷೇತರ)- 1,472, ಬಾರಕೂರು ಸತೀಶ್ ಪೂಜಾರಿ (ಜೆಡಿಎಸ್)- 1,017, ವಿ.ಮಂಜುನಾಥ್ (ಬಿಎಸ್ಪಿ)- 986, ತುಕರಾಮ ಕೋಟ್ಯಾನ್ (ಪಕ್ಷೇತರ)- 498 ಮತ್ತು ನಾಸಿರ್ ಹುಸೇನ್ (ಪಕ್ಷೇತರ)- 245.
ಕಾಪು: ವಿನಯ ಕುಮಾರ್ ಸೊರಕೆ (ಕಾಂಗ್ರೆಸ್)- 52,782, ಲಾಲಾಜಿ ಆರ್.ಮೆಂಡನ್ (ಬಿಜೆಪಿ)- 50,927, ವಸಂತ ವಿ. ಸಾಲಿಯಾನ್ (ಜೆಡಿಎಸ್)- 4,327, ಅಬ್ದುಲ್ ಹಕೀಂ (ಎಸ್ಡಿಪಿಐ)- 2,171, ಶ್ರೀಕಾಂತ್ ಬಿ.ಆಚಾರ್ಯ (ಪಕ್ಷೇತರ)- 1,174, ಹಮೀದ್ (ಪಕ್ಷೇತರ)- 1,174, ವಿಜಯ ಕುಮಾರ್ ಹೆಗ್ಡೆ (ಪಕ್ಷೇತರ)- 467, ರೊನಾಲ್ಡ್ ಕ್ಯಾಸ್ಟಲಿನೊ (ಪಕ್ಷೇತರ)- 269, ಸ್ಟೀಫನ್ ರಿಚರ್ಡ್ ಲೋಬೊ (ಪಕ್ಷೇತರ)- 249, ಖಾಸೀಮ್ (ಪಕ್ಷೇತರ)- 208 ಮತ್ತು ಪ್ರವೀಣ್ ಕುಮಾರ್ (ಪಕ್ಷೇತರ)- 162.
ಕುಂದಾಪುರ: ಹಾಲಾಡಿ ಶ್ರೀನಿವಾಸ ಶೆಟ್ಟಿ (ಪಕ್ಷೇತರ)- 80,563, ಮಲ್ಯಾಡಿ ಶಿವರಾಮ ಶೆಟ್ಟಿ (ಕಾಂಗ್ರೆಸ್)- 39,952, ಕಿಶೋರ್ ಕುಮಾರ್ (ಬಿಜೆಪಿ)- 14,524, ಶ್ರೀನಿವಾಸ ಎಚ್. (ಪಕ್ಷೇತರ)- 2,442, ಮಂಜುನಾಥ್ (ಪಕ್ಷೇತರ)- 764 ಮತ್ತು ಕೃಷ್ಣ ಭರತ್ ಕಲ್ (ಜೆಡಿಯು)- 738.
ಬೈಂದೂರು: ಕೆ.ಗೋಪಾಲ ಪೂಜಾರಿ (ಕಾಂಗ್ರೆಸ್)- 82,277, ಬಿ.ಎಂ.ಸುಕುಮಾರ ಶೆಟ್ಟಿ (ಬಿಜೆಪಿ)- 51,128, ನವೀನಚಂದ್ರ ಖಾರ್ವಿ ಉಪ್ಪುಂದ (ಕೆಜೆಪಿ)- 4,177, ಕೆ.ಶಂಕರ್ (ಸಿಪಿಐಎಂ)- 2,960, ಎಚ್.ಸುರೇಶ್ ಪೂಜಾರಿ (ಪಕ್ಷೇತರ)- 1,611, ಉದಯ ಕುಮಾರ್ ತಲ್ಲೂರು (ಬಿಎಸ್ಪಿ)- 1,515, ಸುರಯ್ಯಾ ಭಾನು (ಜೆಡಿಎಸ್)- 1,023, ಶ್ರೀಧರ ಪೇದೆಮನೆ (ಪಕ್ಷೇತರ)- 957, ಲೋಕೇಶ್ ವಿಠಲ್ ಬೋರ್ಕರ್ (ಪಕ್ಷೇತರ)- 630, ದಿವಾಕರ ಕೋಟ್ಯಾನ್ (ಪಕ್ಷೇತರ)- 620, ಅಬ್ದುಲ್ ಅಝೀಝ್ (ಪಕ್ಷೇತರ)- 463, ಅಬ್ದುಲ್ ಹಜೀದ್ (ಪಕ್ಷೇತರ)- 395 ಮತ್ತು ಮಂಜುನಾಥ್ ಕೆ. (ಜೆಡಿಯು)- 334.
ಕಾರ್ಕಳ: ವಿ.ಸುನಿಲ್ ಕುಮಾರ್ (ಬಿಜೆಪಿ)- 65,039, ಎಚ್.ಗೋಪಾಲ ಭಂಡಾರಿ
(ಕಾಂಗ್ರೆಸ್)- 60,785, ವಾಲ್ಟರ್ ಡಿಸೋಜ (ಜೆಡಿಎಸ್)- 1,302, ಸುನಿಲ್ ಸೋನ್ಸ್ (ಬಿಎಸ್ಪಿ)- 878, ಯು.ಕೆ.ಸಯ್ಯದ್ (ಪಕ್ಷೇತರ)- 873, ಪ್ರವೀಣ್ ಪೂಜಾರಿ (ಕೆಜೆಪಿ)- 553, ಕೆ.ಪಿ.ಪದ್ಮಾವತಿ (ಪಕ್ಷೇತರ)- 478, ರಿಯಾಝ್ (ಪಕ್ಷೇತರ)- 334 ಮತ್ತು ಗೋಪಾಲ (ಪಕ್ಷೇತರ)- 232.
ಅತ್ಯಧಿಕ ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿ: ಹಾಲಾಡಿ ಶ್ರೀನಿವಾಸ ಶೆಟ್ಟಿ, ಅಂತರ: 40,611. ಅತೀ ಕಡಿಮೆ ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿ: ವಿನಯ ಕುಮಾರ್ ಸೊರಕೆ. ಅಂತರ: 1,855. ಅತೀ ಕಡಿಮೆ ಮತ ಪಡೆದ ಅಭ್ಯರ್ಥಿ: ಕಾಪು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರವೀಣ್ ಕುಮಾರ್. ಪಡೆದ ಮತ: 162.
- haladi 1
- pramod madhwaraj 1
- gopal pujari 1
- sorake 1
- sunil
ಉಡುಪಿ: ಕಾಂಗ್ರೆಸ್, ಬಿಜೆಪಿ ಸೋಲಿಸಲು ಮತದಾರರಿಗ ೆ ಸಿಪಿಐಎಂ ಕರೆ
Posted: April 30, 2013 in UncategorizedTags: aituc, bjp, citu, congress, cpim, cpm, dyfi, Election, jds, karnataka election, sfi, udupi election, udupibits, udupibits.com, www.udupibits.com
ಉಡುಪಿ: ಭ್ರಷ್ಟ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸುವಂತೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ನಿತ್ಯಾಣದ ಸ್ವಾಮಿ ಮತದಾರರಿಗೆ ಕರೆ ನೀಡಿದ್ದಾರೆ. ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಎ.30 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಸಿಪಿಐಎಂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸದ ಕ್ಷೇತ್ರಗಳಲ್ಲಿ ಸಿಪಿಐ, ಫಾರ್ವರ್ಡ್ ಬ್ಲಾಕ್, ಲೋಕಸತ್ತಾ ಮತ್ತು ಸರ್ವೋದಯ ಕರ್ನಾಟಕ ಪಕ್ಷಗಳ ಅಭ್ಯರ್ಥಿಗಳನ್ನು ಬೆಂಬಲಿಸಲು ಪಕ್ಷ ರಾಜ್ಯ ಮಟ್ಟದಲ್ಲಿ ನಿರ್ಧರಿಸಿದೆ ಎಂದು ಸ್ವಾಮಿ ತಿಳಿಸಿದರು.
ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐಎಂ ಪಕ್ಷದಿಂದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮತ್ತು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಶಂಕರ್ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಬಗ್ಗೆ ಭ್ರಮನಿರಸನಗೊಂಡಿರುವ ಬೈಂದೂರು ಕ್ಷೇತ್ರದ ಮತದಾರರು, ಇಲ್ಲಿ ಕೆ.ಶಂಕರ್ ಅವರ ಕಡೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ. ಬಡ ಕಾರ್ಮಿಕರು, ನಿವೇಶನರಹಿತರು, ಪಡಿತರ ಚೀತಿ ವಂಚಿತರು ಮೊದಲಾದವರ ಬಗ್ಗೆ ಪಕ್ಷ ನಡೆಸುತ್ತಿರುವ ಹೋರಾಟವನ್ನು ಇಲ್ಲಿನ ಮತದಾರರು
ಗಮನಿಸಿದ್ದಾರೆ ಎಂದು ನಿತ್ಯಾನಂದ ಸ್ವಾಮಿ ಹೇಳಿದರು.
ಉಡುಪಿ, ಕಾಪು, ಕಾರ್ಕಳ ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿದ್ದು, ಇಲ್ಲೆಲ್ಲಾ ಭ್ರಷ್ಟ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸಲು ಜೆಡಿಎಸ್ ಅಭ್ಯರ್ಥಿಗಳನ್ನು
ಬೆಂಬಲಿಸುವಂತೆ ಸಿಪಿಐಎಂ ಮತದಾರರನ್ನು ವಿನಂತಿಸಿದೆ.
ಸಿಪಿಐಎಂ ಪಕ್ಷ ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ದೊಡ್ಡ ಸಂಕಟವಾಗಿದೆ. ಈ ಹಿಂದಿನ ಬಹುತೇಕ ಚುನಾವಣೆಯಲ್ಲಿ ಸಿಪಿಐಎಂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಬಿಜೆಪಿ ಸೋಲಿಸುವ ಉದ್ಧೇಶದೊಂದಿಗೆ ಕಾಂಗ್ರೆಸ್ ಗೆ ಮತ ಹಾಕುತ್ತಿದ್ದರು. ಆದರೆ, ಈ ಬಾರಿ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡನ್ನೂ ಸೋಲಿಸಲು ಕರೆ ನೀಡಿದ ಕಾರಣ ಈ ಬಾರಿ ಇದು ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಕಗ್ಗಂಟಾಗಿ ಪರಿಣಮಿಸಲಿದೆ.
ಬೈಂದೂರು ಕ್ಷೇತ್ರದ ಅಭ್ಯರ್ಥಿ ಕೆ.ಶಂಕರ್ ಹಾಗೂ ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಫೆ.20-21: ಬೆಲೆ ಏರಿಕೆ ವಿರುದ್ಧ ದೇಶವ್ಯಾಪಿ ಐತಿಹಾಸ ಿಕ ಸಾರ್ವತ್ರಿಕ ಮುಷ್ಕರ
Posted: February 15, 2013 in UncategorizedTags: abvp, aituc, bank, bjp, bms, citu, congress, cpi, cpim, cpm, jctu, jds, lic, nsui, sfi, tucc, utuc
ಉಡುಪಿ: ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ಪ್ರತಿಭಟಿಸಿ ಮತ್ತು ಜನತೆಯ ಹತ್ತು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಯು ಫೆ.20 ಮತ್ತು 21 ರಂದು ಎರಡು ದಿನಗಳ ಕಾಲ ದೇಶವ್ಯಾಪಿ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ ಎಂದು ಜೆಸಿಟಿಯು ಉಡುಪಿ ಜಿಲ್ಲಾ ಸಂಚಾಲಕರಾದ ಅದಮಾರು ಶ್ರೀಪತಿ ಆಚಾರ್ಯ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಇಂದು ಬೆಳಗ್ಗೆ ನಡೆಸಿದ ಮಾದ್ಯಮಗೋಷ್ಟಿಯಲ್ಲಿ ಅವರು ಮುಷ್ಕರದ ಬಗ್ಗೆ ವಿವರ ನೀಡಿದರು.
ಫೆ.20 ರಂದು ಬೆಳಗ್ಗೆ 9 ಗಂಟೆಗೆ ಕುಂದಾಪುರದಲ್ಲಿ ಮತ್ತು ಬೆಳಗ್ಗೆ ಗಂಟೆ 10.30 ಕ್ಕೆ ಉಡುಪಿಯ ಅಜ್ಜರಕಾಡು ಎಲ್ಐಸಿ ಕಚೇರಿ ಆವರಣದಿಂದ ಕಾರ್ಪೋರೇಶನ್ ಬ್ಯಾಂಕ್ ಸ್ಥಾಪಕರ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ.
ಬೆಲೆ ಏರಿಕೆಯನ್ನು ತಡೆಗಟ್ಟಬೇಕು, ಉದ್ಯೋಗಾವಕಾಶಗಳನ್ನು ಉಳಿಸಿ ಹೆಚ್ಚಿಸಲು ಸೂಕ್ತ ಪ್ಯಾಕೇಜ್ ರೂಪಿಸಬೇಕು, ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜ್ಯಾರಿಗೊಳಿಸಬೇಕು, ಅಸಂಘಟಿತ ವಲಯದ ಕಾರ್ಮಿಕರಿಗೆ ಶೆಡ್ಯೂಲ್ ಗಳ ವ್ಯತ್ಯಾಸವಿಲ್ಲದೆ ಸಾಮಾಜಿಕ ಸುರಕ್ಷೆ ಮತ್ತು ಅದಕ್ಕಾಗಿ ರಾಷ್ಟ್ರೀಯ ಸಾಮಾಜಿಕ ಸುರಕ್ಷಾ ನಿಧಿಯ ಸ್ಥಾಪನೆ ಹಾಗೂ ಲಾಭದಾಯಕವಾಗಿರುವ ಸಾರ್ವಜನಿಕ ರಂಗದ ಶೇರುಗಳನ್ನು ಹಿಂತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು ಇತ್ಯಾದಿ ಒಟ್ಟು ಹತ್ತು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲು ಮುಷ್ಕರ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯಾನಂತರ ಇದೇ ಮೊದಲು ಎರಡು ದಿನದ ಮುಷ್ಕರ ನಡೆಸಲಾಗುತ್ತಿದ್ದು, ಇದು ಐತಿಹಾಸಿಕವಾಗಲಿದೆ ಎಂದು ಆಚಾರ್ಯ ತಿಳಿಸಿದರು.
ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಎಐಟಿಯುಸಿ, ಇಂಟಕ್, ಬಿಎಂಎಸ್, ಯುಟಿಯುಸಿ, ಟಿಯುಸಿಸಿ ಮತ್ತಿತರ ಕಾರ್ಮಿಕ ಸಂಘಟನೆಗಳು, ಬ್ಯಾಂಕ್, ವಿಮಾ, ರೈಲ್ವೆ ಮುಂತಾದ ನಾಕರರ ಅಖಿಲ ಭಾರತ ಸಂಘಟನೆಗಳು, ಕೇಂದ್ರ ಮತ್ತು ರಾಜ್ಯ ಸರಕಾರಿ ನೌಕರರ ಸಂಘಟನೆಗಳ ಸಹಿತ ಹಲವಾರು ಸಂಘಟನೆಗಳು 2 ದಿನಗಳ ಸಾರ್ವತ್ರಿಕ ಮುಷ್ಕರದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಿದೆ. 10 ಕೋಟಿಗೂ ಅಧಿಕ ಮಂದಿ ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಆಚಾರ್ಯರು ಮಾಹಿತಿ ನೀಡಿದರು.
1991 ರಲ್ಲಿ ಅಂದಿನ ಪ್ರಧಾನಿ ಪಿ.ವಿ.ನರಸಿಂಹ ರಾವ್ ಹಾಗೂ ಇಂದಿನ ಪ್ರಧಾನಿ ಡಾ.ಮನಮೋಹನ ಸಿಂಗರು ಅಮೇರಿಕಾ ಮತ್ತಿತರ ಸಾಮ್ರಾಜ್ಯಶಾಹಿಗಳ ಒತ್ತಡಕ್ಕೆ ಮಣಿದು ಆರಂಭಿಸಿದ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ನೀತಿಗಳು ದೇಶದ ಕೆಲವೇ ಕೆಲವು ಜನ ಗುತ್ತೇದಾರಿ ಬಂಡವಾಳಗಾರರು ಹಾಗೂ ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ಅಪಾರ ಸಂಪತ್ತನ್ನು ಗಳಿಸಿಕೊಳ್ಳುವಂತೆ ಮಾಡಿದೆ. ಇದರಿಂದಾಗಿ ದೇಶದ ಬಹುಸಂಖ್ಯಾತ ಕಾಮರ್ಿಕರು ಮತ್ತು ಬಡ ಜನತೆ ದಟ್ಟ ದಾರಿದ್ರ್ಯದಲ್ಲಿ ನರಳಿ ಕಂಗಾಲಾಗುವಂತೆ ಮಾಡಿವೆ ಎಂದು ಶ್ರೀಪತಿ ಆಚಾರ್ಯ ಹೇಳಿದರು.
ಜವಾಹರ ಲಾಲ್ ನೆಹರೂ ಅವರಿಂದ ಮೊದಲ್ಗೊಂಡು ಇಂದಿರಾ ಗಾಂಧಿ ವರೆಗಿನ ಸರಕಾರಗಳು ಬಡವ ಮತ್ತು ಶ್ರೀಮಂತರ ನಡುವೆ ತೋರಿಕೆಗಾದರೂ ತಟಸ್ಥ ನೀತಿಯನ್ನು ಅನುಸರಿಸುತ್ತಿದ್ದವು. ಇದೀಗ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ತಾನು ಕೇವಲ ಶ್ರೀಮಂತರ ಪರ ಮತ್ತು ಬಡವರು ಏನಾದರೂ ಆಗಲಿ ಎಂಬ ನೀತಿಯನ್ನು ಬಹಿರಂಗವಾಗಿಯೇ ಅನುಸರಿಸುತ್ತಿದೆ. ದೇಶದ ದುಡಿಯುವ ಜನತೆ ಉತ್ಪಾದಿಸಿದ ಸಂಪತ್ತನ್ನು ಶ್ರೀಮಂತರಿಗೆ ವರ್ಗಾಯಿಸುವುದಷ್ಟೇ ತನ್ನ ಕೆಲಸ ಎಂದು ಯುಪಿಎ ಸರಕಾರ ಭಾವಿಸಿದಂತಿದೆ. ದೇಶದ ಸಾರ್ವಜನಿಕ ರಂಗವನ್ನು ಸರ್ವನಾಶ ಮಾಡಲು ಕೇಂದ್ರ ಸರಕಾರ ತುದಿಗಾಲಲ್ಲಿ ನಿಂತಿದೆ. ಬೆಲೆ ಏರಿಕೆಗೆ ಸರಕಾರವೇ ಪ್ರಚೋದನೆ ನೀಡುತ್ತಿದೆ. ವಿದೇಶಿ ಬಂಡವಾಳಗಾರರನ್ನು ಓಲೈಸುವ ಸಲುವಾಗಿ ಕಾರ್ಮಿಕರು ದಶಕಗಳ ಕಾಲ ಹೋರಾಡಿ ಗಳಿಸಿದ ಹಕ್ಕುಗಳನ್ನೂ ಸರಕಾರ ಮುರಿಯುತ್ತಿದೆ ಎಂದು ಆಚಾರ್ಯ ಆರೋಪಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಕಾರ್ಮಿಕ ನಾಯಕರಾದ ಬಾಲಕೃಷ್ಣ ಶೆಟ್ಟಿ, ಕೆ.ವಿ.ಭಟ್ ಹಾಗೂ ಪಿ.ವಿಶ್ವನಾಥ ರೈ ಉಪಸ್ಥಿತರಿದ್ದರು.
ಉಡುಪಿ: 170 ಮಂದಿ ಸಿಪಿಐಎಂ ಕಾರ್ಯಕರ್ತರು ಕೋರ್ಟಿಗ ೆ ಹಾಜರು..
Posted: January 24, 2013 in UncategorizedTags: cpim, cpm, madesnaana, pankthibedha, police, udupi police
ಉಡುಪಿ: ಮಡೆಸ್ನಾನ ಮತ್ತು ಪಂಕ್ತಿಬೇಧದ ವಿರುದ್ಧ ಉಡುಪಿಯಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಲಾಠಿಚಾರ್ಜ್ ನಡೆದು ಪೊಲೀಸರಿಂದ ಬಂಧಿಸಲ್ಪಟ್ಟು ಬಳಿಕ ಜಾಮೀನು ಪಡೆದುಕೊಂಡಿದ್ದ 178 ಮಂದಿ ಸಿಪಿಐಎಂ ಕಾರ್ಯಕರ್ತರಲ್ಲಿ 170 ಮಂದಿ ಇಂದು ಉಡುಪಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು (ಕಿರಿಯ ವಿಭಾಗ) ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್ ಅವರ ಮುಂದೆ ಹಾಜರಾಗಿ ಜಾಮೀನು ಭದ್ರತೆ ಒದಗಿಸುವ ಮೂಲಕ ಖಾಯಂ ಜಾಮೀನು ಪಡೆದುಕೊಂಡರು. ನ್ಯಾಯಾಲಯಕ್ಕೆ ಹಾಜರಾದ 170 ಮಂದಿ ಪಕ್ಷ ಕಾರ್ಯಕರ್ತರ ಪರವಾಗಿ 20 ಮಂದಿ ಜಾಮೀನು ಭದ್ರತೆ ಒದಗಿಸಿದರು. ಮಂಗಳೂರಿನ ವಕೀಲರಾದ ಶಶಿರಾಜ್ ರಾವ್ ಕಾವೂರು ಹಾಗೂ ಇತರ ವಕೀಲರು ಕಾರ್ಯಕರ್ತರ ಪರವಾಗಿ ವಾದಿಸಿದರು.
182 ಮಂದಿ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಿ ಉಡುಪಿ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದರು. ಇವರಲ್ಲಿ ಮೂವರು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪೊಲೀಸರ ವಶದಿಮದ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಅವರ ವಿರುದ್ಧ ಮತ್ತೊಂದು ಕೇಸು ದಾಖಲಿಸಿಕೊಂಡಿದ್ದರು. ತಪ್ಪಿಸಿಕೊಮಡವರು ಯಾರೆಂದು ನಮಗೆ ತಿಳಿದಿಲ್ಲ. ಅವರ್ಯಾರೂ ನಮ್ಮ ಪಕ್ಷದ ಕಾರ್ಯಕರ್ತರಲ್ಲ ಎಂದು ಸಿಪಿಐಎಂ ಪಕ್ಷದ ಅಧಿಕೃತರು ತಿಳಿಸಿದ್ದರು.
ಉಳಿದ 179 ರಲ್ಲಿ 178 ಮಂದಿ ಮಂದಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು
ಪಡೆದುಕೋಮಡಿದ್ದರು. ಓರ್ವ ಮಾನಸಿಕವಾಗಿ ಬೆಳವಣಿಗೆಯಾಗದ ವಿಕಲಚೇತನ, ಆತನಿಗೆ ನ್ಯಾಯಾಲಯ ಹಾಜರಾತಿಯಿಂದ ವಿನಾಯಿತಿ ನೀಡಬೇಕೆಂದು ಸಿಪಿಐಎಂ ಪರ ವಕೀಲರು
ನ್ಯಾಯಾಲಯದಲ್ಲಿ ವಾದಿಸುವುದರ ಜೊತೆಗೆ ಈ ಸಂಬಂಧವಾಗಿ ದಾಖಲಾತಿಗಳನ್ನು
ಸಲ್ಲಿಸಿದ್ದರು.
178 ಮಂದಿಯಲ್ಲಿ 170 ಮಂದಿ ಗುರುವಾರ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಭದ್ರತೆ ನಿಡಿದ್ದು, ಉಳಿದವರನ್ನು ಮುಂದೆ ಹಾಜರುಪಡಿಸಲಾಗುವುದು ಎಂದು ವಕೀಲರು
ಸ್ಪಷ್ಟಪಡಿಸಿದರು.
ಪೇಜಾವರ ಸ್ವಾಮೀಜಿ ದಲಿತರನ್ನು ಮಠಕ್ಕೆ ಕರೆಸಿ ಸ ಹಪಂಕ್ತಿ ಭೋಜನ ಮಾಡಲಿ: ನೀಲಾ ಸವಾಲು
Posted: January 7, 2013 in UncategorizedTags: ಆಹಾರ, ಆಹಾರ ಸಂಸ್ಕೃತಿ, ಉಡುಪಿ ಮಠ, ಉಡುಪಿ ಲಾಠಿಚಾರ್ಜ್, ಕೂಡಲ ಸಂಗಮ, ಚಳುವಳಿ, ಜನವಾದಿ ಮಹಿಳಾ ಸಂಘಟನೆ, ಜಯನ್ ಮಲ್ಪೆ, ತಾರತಮ್ಯ, ದಲಿತ ಸಂಘರ್ಷ ಸಮಿತಿ, ದಸಂಸ, ನೀಲಾ ಕೆ., ಪಂಕ್ತಿಬೇಧ, ಪೇಜಾವರ ಮಠ, ಪೇಜಾವರ ಸ್ವಾಮೀಜಿ, ಪೊಲೀಸ್ ಲಾಠಿಚಾರ್ಜ್, ಪ್ರತಿಭಟನೆ, ಬಸವಣ್ಣ, ಬಹುಸಂಸ್ಕೃತಿ, ಮಡೆಸ್ನಾನ, ಮಾಂಸಾಹಾರ, ಲಾಠಿಚಾರ್ಜ್, ವಚನ, ವಚನ ಚಳುವಳಿ, ಸಮಾಜ ಸುಧಾರಣಾ ಚಳುವಳಿ, ಸಮಾಜ ಸುಧಾರಣೆ, ಸಸ್ಯಾಹಾರ, ಸಾಮಾಜಿಕ ಕ್ರಾಂತಿ, ಸಿಪಿಎಂ, ಸಿಪಿಐಎಂ, ಹೋರಾಟ, basavanna, citu, cpim, cpm, dyfi, jwf, karnataka police, police, sfi, udupi police
ಉಡುಪಿ: ಪಂಕ್ತಿಬೇಧ, ಜಾತಿ ತಾರತಮ್ಯದ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಲಾಗುತ್ತಿದೆ. ಈ ಸಂಬಂಧವಾಗಿ ಪೇಜಾವರ ಸ್ವಾಮೀಜಿಯವರು ಗೊಂದಲವನ್ನು ಸೃಷ್ಟಿಸುತ್ತಾ, ರಾಜಕಾರಣಿಗಳ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಮಡೆಸ್ನಾನ ಮತ್ತು ಪಂಕ್ತಿಬೇಧದ ವಿರುದ್ಧ ಪ್ರತಿಭಟಿಸಿದ ಸಿಪಿಐಎಂ ಕಾರ್ಯಕರ್ತರ ಮೇಲೆ ನಡೆಸಿದ ಲಾಠಿಚಾರ್ಜ್ ನ್ನು ಮಾನವೀಯತೆ ಇದ್ದವರು, ಇದ್ದರೆ ಖಂಡಿಸಬೇಕು. ಆದರೆ, ಪೇಜಾವರ ಸ್ವಾಮೀಜಿಯವರು ಖಂಡಿಸುವ ಬದಲಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅದರ ಮೇಲೆ ಎಲ್ಲರಿಗೂ ಬುದ್ಧಿವಾದ ಹೇಳತೊಡಗಿದ್ದಾರೆ. ಅವರಿಗೆ ಬುದ್ಧಿವಾದ ಹೇಳುವ ಕಂಟ್ರಾಕ್ಟ್ ಕೊಟ್ಟಂತೆ ಕಾಣುತ್ತಿದೆ. ಮಠ ಮತ್ತು ಧರ್ಮದ ಹೆಸರಿನಲ್ಲಿ ಬೇಧಭಾವವೆಸಗುತ್ತಾ, ನೀರಿನಲ್ಲೂ ತಾರತಮ್ಯ ಮಾಡುವ ಪೇಜಾವರ ಸ್ವಾಮೀಜಿಗಳ ಬುದ್ಧಿವಾದ ದುಡಿಯುವ ವರ್ಗಕ್ಕೆ ಅಗತ್ಯವಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆಯ ಮಾಜಿ ರಾಜ್ಯಾಧ್ಯಕ್ಷೆ, ಸಾಮಾಜಿಕ ಹೋರಾಟಗಾರ್ತಿ, ಪ್ರಸಿದ್ಧ ಲೇಖಕಿ ಶ್ರೀಮತಿ ಕೆ. ನೀಲಾ ಅವರು ಹೇಳಿದರು.
ಮಡೆಸ್ನಾನ ಮತ್ತು ಪಂಕ್ತಿಬೇಧವನ್ನು ವಿರೋಧಿಸಿ ಹಾಗೂ ಪ್ರತಿಭಟನಾಕಾರರ ಮೇಲೆ ಉಡುಪಿಯಲ್ಲಿ ನಡೆದ ಲಾಠಿಚಾರ್ಜ್ ನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟ ಉಡುಪಿಯಲ್ಲಿ ಇಂದು ಮಧ್ಯಾಹ್ನ ನಡೆಸಿದ ಬಹಿರಂಗ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪೇಜಾವರ ಸ್ವಾಮೀಜಿಗೆ ಹೊಟ್ಟೆ ತುಂಬದ ಜನರ ಬಗ್ಗೆಯಾಗಲೀ, ತಲಾ ಆದಾಯ ಕೇವಲ 20 ರು. ಇರುವ 71 ಶೇಕಡಾ ಜನರ ಬಗ್ಗೆಯಾಗಲೀ ಕಾಳಜಿ ಇಲ್ಲ, ಬದಲಾಗಿ ಹೊಟ್ಟೆ ತುಂಬಿದವರ ಬಗ್ಗೆ ಅವರ ಕಾಳಜಿ ಇದೆ. ಹಾಗಾಗಿ ಸ್ವಾಮೀಜಿಗಳು ಪಂಕ್ತಿಬೇಧವನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದು ಟೀಕಿಸಿದ ನೀಲಾ, ಪೇಜಾವರರು ದಲಿತ ಕೇರಿಗಳಿಗೆ ಹೋಗಬೇಕಾದುದಿಲ್ಲ, ಅದರ ಬದಲಾಗಿ ದಲಿತರನ್ನು ತನ್ನ ಮಠಕ್ಕೆ ಕರೆಸಿ ಅವರ ಜೊತೆಗೆ ಕುಳಿತು ಭೋಜನ ಮಾಡಲಿ ಎಂದು ಸವಾಲು ಹಾಕಿದರು.
ಪೇಜಾವರ ಸ್ವಾಮೀಜಿ, ಮೋಹನ್ ಭಾಗವತ್ ಮುಂತಾದವರು ಪ್ರತಿನಿಧಿಸುವ ಹಿಂದುತ್ವ ದಲಿತರನ್ನು, ಹಿಂದುಳಿದ ವರ್ಗದವರನ್ನು ಮನುಷ್ಯರೆಂದು ಕಂಡಿಲ್ಲ. ಆದುದರಿಂದ ಹೆಣ್ಣು ಮಕ್ಕಳು ಮನೆಯೊಳಗೇ ಇರಬೇಕು, ಗಂಡನ ಜೊತೆಗೆ ಚಿತೆಗೆ ಹಾರಬೇಕು, ತಲೆ ಬೋಳಿಸಬೇಕು ಎಂದೆಲ್ಲಾ ಹೇಳ್ತಾರೆ. ಬ್ರಿಟೀಷ್ ಆಡಳಿತ ಸತಿ ಪದ್ಧತಿಯನ್ನು ನಿಷೇಧಿಸಲು ಮುಂದಾದಾಗ ಹಿಂದುತ್ವವನ್ನು ಪ್ರತಿಪಾದಿಸುವವರ ನಿಯೋಗವೊಂದು ಬ್ರಟೀಷ್ ಆಡಳಿತದಾರರನ್ನು ಭೇಟಿಯಾಗಿ ಸತಿ ಪದ್ಧತಿಯನ್ನು ನಿಷೇಧಿಸದಂತೆ ಒತ್ತಾಯಿಸಿ ಮನವಿ ಸಲ್ಲಿಸಿತು ಎಂದು ನೀಲಾ ತಿಳಿಸಿದರು.
ಈ ದೇಶದ ಜನಸಂಖ್ಯೆಯಲ್ಲಿ ಶೇಕಡಾ 45 ರಷ್ಟು ಕುಟುಂಬಗಳು ಹೆಣ್ಣು ಮಕ್ಕಳೇ
ನೇತೃತ್ವದಲ್ಲಿಯೇ ಇದೆ. 84 ಶೇಕಡಾ ಗದ್ದೆ ಕೆಲಸಗಳನ್ನು ಮಹಿಳೆಯರೇ ಮಾಡ್ತಾರೆ. ಸಂಸಾರ ಸರಿತೂಗಿಸಲು ಇಂದು ಗಂಡು ಹೆಣ್ಣು ಇಬ್ಬರೂ ದುಡಿಯುವ ಅವಶ್ಯಕತೆ ಇದು ಇದೆ ಎಂದು ಮೋಹನ್ ಭಾಗವತ್ ಹಾಗೂ ಪೇಜಾವರ ಸ್ವಾಮೀಜಿಗಳಿಗೆ ಬಹಿರಂಗ ಪಾಠ ಮಾಡಿದ ನೀಲಾ, ಮೋಹನ್ ಭಾಗವತ್ ಹೇಳಿದ ಭಾರತದಲ್ಲಿರುವ ಹಳ್ಳಿಗಳಲ್ಲಿ ಮತ್ತು ಸ್ಲಂಗಳಲ್ಲಿಯೇ 75 ಶೇಕಡಾ ಮಹಿಳಾ ದೌರ್ಜನ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಹಿಂದುತ್ವವಾದಿಗಳು ಮೀಸಲಾತಿಯನ್ನು ವಿರೋಧಿಸುವ ಹೊತ್ತಿಗೆಯೇ, ಖಾಸಗೀಕರಣದ ಮೂಲಕ ಮೀಸಲಾತಿಯನ್ನು ಹಿಂಬಾಗಿಲ ಮೂಲಕ ವಾಪಾಸ್ ಹಿಂತೆಗೆಯುವ ಪ್ರಕ್ರಿಯೆಯೂ ನಡೆದಿದೆ ಎಂದು ಹೇಳಿದ ನೀಲಾ, ಬಸವಣ್ಣ ಆಹಾರದಲ್ಲಿ ಅವೈಜ್ಞಾನಿಕ ಪದ್ಧತಿಯನ್ನು ಸಮಥರ್ಿಸಿಲ್ಲವೆಂದರು. ಎಡಕೈಲಿ ಸುರೆ, ಬಲಕೈಲಿ ಮಾಂಸ, ಕೊರಳಲ್ಲಿ ಲಿಂಗವಿರಲು ಶರಣೆಂಬೆ ಕೂಡಲಸಂಗಮ ಎಂದವನು ಬಸವಣ್ಣ. ಪೇಜಾವರ ಸ್ವಾಮೀಜಿ ಮೊದಲು ಶರಣರ ವಚನಗಳನ್ನು ಓದಲಿ ಎಂದು ಸಲಹೆ ನೀಡಿದರು. ಹಿರಿಯ ಚಿಂತಕ ಜಿ.ರಾಜಶೇಖರ್, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಜಯನ್ ಮಲ್ಪೆ, ದಸಂಸ ಅಂಬೇಡ್ಕರ್ವಾದ ರಾಜ್ಯ ಸಮಿತಿ ಸದಸ್ಯ ಸುಂದರ ಮಾಸ್ತರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಸುಂದರ ಗುಜ್ಜರಬೆಟ್ಟು, ಶ್ಯಾಮರಾಜ್ ಬಿತರ್ಿ, ದಲಿತಾ ಕಲಾ ಮಂಡಳಿಯ ಜಿಲ್ಲಾ ಸಂಚಾಲಕ ಶಂಕರದಾಸ್ ಚೇಂಡ್ಕಳ, ಸಮತಾ ಸೈನಿಕ ದಳ ಜಿಲ್ಲಾದ್ಯಕ್ಷ ವಿಸ್ವನಾಥ ಪೇತ್ರಿ, ದಸಂಸ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತದ ವಿಭಾಗೀಯ ಸಂಚಾಲಕ ಶೇಖರ ಹೆಜಮಾಡಿ, ಜಿಲ್ಲಾ ಸಂಚಾಲಕ ರಮೇಶ್ ಕೋಟ್ಯಾನ್, ಕೊರಗ ಸಂಘಟನೆಯ ಗಣೇಶ್ ಕುಂದಾಪುರ ಮೊದಲಾದವರು ಉಪಸ್ಥಿತರಿದ್ದರು.
ಬಹಿರಂಗ ಸಭೆಗಿಂತ ಮೊದಲು ಜಿಲ್ಲೆಯ ಸಾವಿರಾರು ದಲಿತರು ಅಜ್ಜರಕಾಡು ಪುರಭವನದಿಂದ ಪಂಕ್ತಿಬೇದ ಮತ್ತು ಮಡೆಸ್ನಾನ ಹಾಗೂ ಪೊಲೀಸ್ ಲಾಠಿಚಾರ್ಜ್ ವಿರುದ್ಧ ಘೋಷಣೆ ಕೂಗುತ್ತಾ ಹಳೆ ತಾಲೂಕು ಕಚೇರಿ, ಕೋರ್ಟ್ ರಸ್ತೆ, ಕವಿ ಮುದ್ದಣ ಮಾರ್ಗ, ಸರ್ವಿಸ್ ಬಸ್ ನಿಲ್ದಾಣವಾಗಿ ಬಸ್ ನಿಲ್ದಾಣ ಪಕ್ಕದ ಜಟ್ಕಾ ಸ್ಟ್ಯಾಂಡ್ ವರೆಗೆ ಬೃಹತ್ ಮೆರವಣಿಗೆ ನಡೆಸಿದರು.
ಜ.7: ಲಾಠಿಚಾರ್ಜ್ ಖಂಡಿಸಿ ಉಡುಪಿಯಲ್ಲಿ ದಲಿತ ಸಂಘ ಟನೆಗಳಿಂದ ಬೃಹತ್ ಪ್ರತಿಭಟನೆ
Posted: December 31, 2012 in UncategorizedTags: ಉಡುಪಿ ಕೃಷ್ಣ ಮಠ, ಕುಕ್ಕೆ ಸುಬ್ರಹ್ಮಣ್ಯ, ಡಾ.ಅಂಬೇಡ್ಕರ್, ದಲಿತ ಸಂಘರ್ಷ ಸಮಿತಿ, ದಸಂಸ, ಪಂಕ್ತಿಬೇಧ, ಪೇಜಾವರ ಸ್ವಾಮೀಜಿ, ಮಡೆಸ್ನಾನ, ಲಾಠಿಚಾರ್ಜ್, citu, cpim, cpm, dalith, daliths, dalits, dss, dyfi, jayan malpe, jwa, jwf, sc/st, sfi
ಉಡುಪಿ: ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಅನಿಷ್ಟ ಪದ್ಧತಿಗಳಾದ ಮಡೆಸ್ನಾನ ಮತ್ತು ಪಂಕ್ತಿಬೇಧದ ವಿರುದ್ಧ ಪ್ರತಿಭಟನೆ ನಡೆಸಿದ ಸಿಪಿಐಎಂ ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್ ಅಮಾನುಷ ಕೃತ್ಯವಾಗಿದ್ದು, ಇದಕ್ಕೆ ಕಾರಣಕರ್ತರಾದ ಉಡುಪಿಯ ಇನ್ ಚಾರ್ಜ್ ತಹಶಿಲ್ದಾರ್ ಜಗನ್ನಾಥ ರಾವ್, ಡಿವೈಎಸ್ಪಿ ಡಾ.ಪ್ರಭುದೇವ ಬಿ.ಮಾನೆ ಹಾಗೂ ಉಡುಪಿ ಸರ್ಕಲ್ ಇನ್ಸ್ ಪೆಕ್ಟರ್ ಮಾರುತಿ ನಾಯಕ್ ಅವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು. ಎಸ್ಪಿ ಡಾ.ಎಂ.ಬಿ.ಬೋರಲಿಂಗಯ್ಯ ಇದರ ನೈತಿಕ ಹೊಣೆ ಹೊತ್ತುಕೊಳ್ಳಬೇಕು ಎಂದು ದಲಿತ ಸಂಘಟನೆಗಳ ಒಕ್ಕೂಟ ಸರಕಾರವನ್ನು ಒತ್ತಾಯಿಸಿದೆ.
ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು ಒಗ್ಗಟ್ಟಾಗಿ ಒಕ್ಕೂಟವನ್ನು ರಚಿಸಿಕೊಂಡು ಇಂದು ಸಂಜೆ ನಗರದ ಖಾಸಗಿ ಹೋಟೇಲಿನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಈ ಬಗ್ಗೆ ತಮ್ಮ
ನಿರ್ಧಾರಗಳನ್ನು ಪ್ರಕಟಿಸಿದರು.
ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿದ ಪೊಲೀಸರ ಕ್ರಮವನ್ನು ಖಂಡಿಸಿ ಜ.7 ರಂದು ಬೆಳಗ್ಗೆ ಗಂಟೆ 10.30 ಕ್ಕೆ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಎಲ್ಲಾ ಸಂಗಟನೆಗಳಿಗೂ ಸೇರಿದ ಅಂದಾಜು 2 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ದಲಿತ ನಾಯಕರು ಜಂಟಿ ಹೇಳಿಕೆಯಲ್ಲಿ ತಿಳಿಸಿದರು. ಪೊಲೀಸರು ನಡೆಸಿದ ಲಾಠಿ ಚಾರ್ಜ್ ಹಿಂದೆ ಪೇಜಾವರ ಸ್ವಾಮೀಜಿಗಳ ಕೈವಾಡವಿದೆ ಎಂದು ಆರೋಪಿಸಿದ ದಲಿತ ಮುಖಂಡರು, ಲಾಠಿ ಚಾರ್ಜ್ ನಡೆಸುವಾಗ ಸೊಂಟದ ಕೆಳಭಾಗಕ್ಕೆ ಮಾತ್ರ ಹೊಡೆಯಬೇಕೆಂಬ ನಿಯಮ ಇದ್ದರೂ, ಈ ನಿಯಮವನ್ನು ಉಲ್ಲಂಘಿಸಿ, ಪ್ರತಿಭಟನಾ ನಿರತರ ತಲೆ, ಬೆನ್ನು ಮುಂತಾದ ಸೊಂಟದ ಮೇಲಿನ ಭಾಗಗಳಿಗೂ ರಣಹದ್ದುಗಳಂತೆ ಹೊಡೆದು ಕ್ರೂರತೆ ಮೆರೆಯಲಾಗಿದೆ. ಈ ಪೊಲೀಸರಿಗೆ ಲಾಠಿಚಾರ್ಜ್ ಯಾವಾಗ, ಹೇಗೆ ನಡೆಸಬೇಕು ಎಂಬ ಬಗ್ಗೆ ಪ್ರಾಥಮಿಕ ತರಬೇತಿ ನೀಡುವ ಅಗತ್ಯವಿದೆ ಎಂದು ಹೇಳಿದರು.
ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ ದಲಿತ ಮುಖಂಡರು, ಮುಜರಾಯಿ ಇಲಾಕೆಯ ಅಧೀನದಲ್ಲಿರುವ ಯಾವೆಲ್ಲಾ ದೇವಾಲಯಗಳಲ್ಲಿ ಪಂಕ್ತಬೇಧ ಮತ್ತು ಮಡೆಸ್ನಾನ ಇದೆಯೋ ಅಲ್ಲೆಲ್ಲಾ ಇವುಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಮುಂದಿನ ದಿನಗಳಲ್ಲಿ ನಿರ್ಧಿಷ್ಟ ಪ್ರಕರಣಗಳಲ್ಲಿ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಐಕ್ಯತೆಯಿಂದ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಹಮ್ಮಿಕೊಳ್ಳಲಿದೆ. ಇದಕ್ಕಾಗಿ ಕೋರ್ ಕಮಿಟಿಯನ್ನು ರಚಿಸಿಕೊಳ್ಳಲಿದ್ದೇವೆ ಎಂದು ದಲಿತ ಮುಖಂಡರು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಸ್ಪಷ್ಟಪಡಿಸಿದರು.
ಮಾಧ್ಯಮಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ನಾಯಕರಾದ ಜಯನ್ ಮಲ್ಪೆ, ಸುಂದರ ಕಪ್ಪೆಟ್ಟು, ದಸಂಸ ಅಂಬೇಡ್ಕರ್ ವಾದದ ನಾಯಕರಾದ ಸುಂದರ ಮಾಸ್ತರ್, ಹೂವಪ್ಪ ಮಾಸ್ತರ್, ಸುಂದರ ಗುಜ್ಜರಬೆಟ್ಟು, ಶ್ಯಾಮರಾಜ್ ಬಿರ್ತಿ, ದಸಂಸ
ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ನಾಯಕರಾದ ಶೇಖರ ಹೆಜಮಾಡಿ, ರಮೇಶ್ ಕೋಟ್ಯಾನ್, ಪ್ರಶಾಂತ್ ತೊಟ್ಟಂ, ಸಮತಾ ಸೈನಿಕ ದಳದ ವಿಸ್ವನಾಥ ಪೇತ್ರಿ ಮೊದಲಾದವರು
ಉಪಸ್ಥಿತರಿದ್ದರು.
ಸಿಪಿಐಎಂ ರಾಜ್ಯ ಮುಖಂಡರ ಸಹಿತ 178 ಪ್ರತಿಭಟನಾಕಾರ ರು ಕೋರ್ಟಿಗೆ ಹಾಜರು- ಜಾಮೀನು
Posted: December 31, 2012 in UncategorizedTags: ಉಡುಪಿ, ಉಡುಪಿ ಕೃಷ್ಣ ದೇವಾಲಯ, ಉಡುಪಿ ಕೃಷ್ಣ ಮಠ, ಉಡುಪಿ ಮಠ, ಎಸ್ಎಫ್ಐ, ಕೃಷ್ಣ ದೇವಾಲಯ, ಕೃಷ್ಣ ಮಠ, ಜನವಾದಿ ಮಹಿಳಾ ಸಂಘಟನೆ, ಜಾತಿ, ಜಾತಿ ಅಸಮಾನತೆ, ಜಾತಿ ತಾರತಮ್ಯ, ಡಿವೈಎಫ್ಐ, ತಾರತಮ್ಯ, ಪಂಕ್ತಿಬೇಧ, ಪೇಜಾವರ ಸ್ವಾಮೀಜಿ, ಪ್ರಗತಿಪರ ಚಳುವಳಿ, ಪ್ರಗತಿಪರ ಹೋರಾಟ, ಪ್ರತಿಭಟನೆ, ಮಡೆಸ್ನಾನ, ಸಮಾಜ ಸುಧಾರಣಾ ಚಳುವಳಿ, ಸಮಾಜ ಸುಧಾರಣೆ, ಸಮುದಾಯ, ಸಿಐಟಿಯು, ಸಿಪಿಎಂ, ಸಿಪಿಐಎಂ, ಹೋರಾಟ, citu, cpim, cpm, dyfi, mdesnaana, sfi, udupi krishna matth, udupi matth
ಉಡುಪಿ: ಅನಿಷ್ಟ ಪದ್ಧತಿಗಳಾದ ಮಡೆಸ್ನಾನ ಮತ್ತು ಪಂಕ್ತಿಬೇಧದ ವಿರುದ್ಧ ಡಿ.27 ರಂದು ಉಡುಪಿಯಲ್ಲಿ ನಡೆದ ಪ್ರತಿಭಟನಾ ಪ್ರದರ್ಶನದ ಸಂದರ್ಭದಲ್ಲಿ ಪೊಲೀಸರ ಲಾಠಿ ಏಟು ತಿಂದು ಗಾಯಗೊಂಡದ್ದೂ ಅಲ್ಲದೆ, ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ 179 ಮಂದಿ ಸಿಪಿಐಎಂ ಕಾರ್ಯಕರ್ತರ ಪೈಕಿ 178 ಮಂದಿ ಇಂದು ಬೆಳಗ್ಗೆ ಉಡುಪಿ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಹಾಜರಾಗಿ ಖಾಯಂ ಜಾಮೀನು ಕೋರಿದಾಗ ನ್ಯಾಯಾಧೀಶರಾದ ಅಬ್ದುಲ್ ರಹಿಮಾನ್ ಅವರು ಜಾಮೀನು ನೀಡಿ ಆದೇಶಿಸಿದರು.
ಯಶಸ್ವಿ ಎಂಬ ಹೆಸರಿನ ಓರ್ವ ಮಾನಸಿಕವಾಗಿ ಇನ್ನೂ ಬೆಳವಣಿಯಾಗದವನಾದ ವಿಕಲ
ಚೇತನನಾಗಿರುವುದರಿಂದ ಈತನನ್ನು ಹಾಜರುಪಡಿಸಲು ಸಾಧ್ಯವಾಗುತ್ತಿಲ್ಲ, ಈತನಿಗೆ ಪ್ರಕರಣದಿಂದ ವಿನಾಯಿತಿ ನೀಡಬೇಕು ಎಂದು ಪ್ರತಿಭಟನಾಕಾರರ ಪರ ವಕೀಲರು
ನ್ಯಾಯಾಧೀಶರಲ್ಲಿ ದಾಖಲಾತಿಗಳ ಸಹಿತ ಮನವಿ ಮಾಡಿಕೊಂಡರು. ಪ್ರತಿಭಟನಾಕಾರರ ಪರವಾಗಿ ಮಂಗಳುರಿನ ವಕೀಲ ಶಶಿರಾಜ್ ರಾವ್ ಕಾವೂರು, ಉಡುಪಿ ವಕೀಲರುಗಳಾದ ಧೀರೇಂದ್ರ ಹಾಗೂ ಮನೋಹರ್ ವಾದಿಸಿದ್ದರು.
178 ಮಂದಿ ಪ್ರತಿಭಟನಾಕಾರರು ಜನವರಿ 24 ರಂದು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಭದ್ರತೆ ನೀಡಬೇಕೆಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ಸೂಚಿಸಿರುವುದರಿಂದ, ಪ್ರತಿಭಟನಾಕಾರರು ಜ.24 ರಂದು ಮತ್ತೆ ಉಡುಪಿ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದೆ. ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರುಗಳಾದ ಜಿ.ಎನ್.ನಾಗರಾಜ್, ಮಾರುತಿ ಮಾನ್ಪಡೆ, ಬಿ.ಮಾಧವ, ವಿ.ಜೆ.ಕೆ.ನಾಯರ್, ಎಸ್.ಪ್ರಸನ್ನ ಕುಮಾರ್,
ಬಾಲಕೃಷ್ಣ ಶೆಟ್ಟಿ, ಯು.ಬಸವರಾಜ್, ಮೂಡಬಿದ್ರೆ ಪುರಸಭೆ ಉಪಾಧ್ಯಕ್ಷೆ ರಮಣಿ, ಮಂಗಳೂರು ಕಾರ್ಪೋರೇಟರ್ ಜಯಂತಿ ಬಿ.ಶೆಟ್ಟಿ, ಬಿ.ಎಂ.ಭಟ್, ಭರತ್ ರಾಜ್,
ಕೆ.ಎನ್.ಉಮೇಶ್ ಸಹಿತ 182 ಮಂದಿ ವಿರುದ್ಧ ಡಿ.27 ರಂದು ಸಂಜೆ ಲಾಠಿಚಾರ್ಜ್ ನಡೆಸಿದ ಉಡುಪಿ ನಗರ ಸರ್ಕಲ್ ಇನ್ಸ್ಪೆಕ್ಟರ್ ಮಾರುತಿ ಜಿ.ನಾಯಕ್ ಅವರು ಸುಮುಟೊ ಆಗಿ ಮೊಕದ್ದಮೆ ದಾಖಲಿಸಿಕೊಂಡಿದ್ದರು.
ಡಿ. 26 ರಂದು ಸಂಜೆ ಇವರುಗಳನ್ನು ಬಂಧಿಸಿದ ಪೊಲೀಸರು ಐಪಿಸಿ ಕಲಂಗಳಾದ 114, 143, 147, 148, 149, 323, 324, 332, 333, 341, 353, 427 ಪ್ರಕಾರ ಮೊಕದ್ದಮೆ ದಾಖಲಿಸಿಕೊಂಡಿದ್ದರು. ಬಳಿಕ ಮಧ್ಯರಾತ್ರಿ ನ್ಯಾಯಾಧೀಶರಾದ ಚಂದ್ರಶೇಖರ ಯು. ಅವರ ನಿವಾಸಕ್ಕೆ ಹಾಜರುಪಡಿಸಿದಾಗ, ಪ್ರತಿಭಟನಾಕಾರರ ಪರ ವಕೀಲರ ವಾದ ಆಲಿಸಿದ ನ್ಯಾಯಾಧೀಶರು ಡಿ.31 ರ ವರೆಗೆ ಮಂಧ್ಯಂತರ ಜಾಮೀನು ನೀಡಿ, ಡಿ.31 ರಂದು ಬೆಳಗ್ಗೆ ಮತ್ತೆ ತೆರೆದ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದರು. ಇದರಂತೆ ಪ್ರತಿಭಟನಾಕಾರರು ಇಂದು ನ್ಯಾಯಾಲಯಕ್ಕೆ ಹಾಜರಾಗಿ ಖಾಯಂ
ಜಾಮೀನು ಪಡೆದುಕೊಂಡಿದ್ದಾರೆ.
ಡಿ.26 ರಂದು ಮಧ್ಯರಾತ್ರಿ ಪ್ರತಿಭಟನಾಕಾರರನ್ನು ಬಂಧಿಸಿಟ್ಟಿದ್ದ ಡಿಎಆರ್ ಮೈದಾನದಿಂದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸುವ ಸಮಯದಲ್ಲಿ ಬಂಧಿತರಾಗಿದ್ದ 182 ಮಂದಿಯಲ್ಲಿ ಮೂವರು ಪೊಲೀಸರ ಬಂಧನದಿಂದ ತಪ್ಪಿಸಿಕೊಂಡಿದ್ದರು ಎಂದು ಹೇಳಿ ಮೂವರ ವಿರುದ್ಧ ಮತ್ತೆ ಉಡುಪಿ ನಗರ ಠಾಣೆಯ ಪೊಲೀಸರು ಪ್ರತ್ಯೇಕ ಮೊಕದ್ದಮೆ ದಾಖಲಿಸಿದ್ದರು. ಆಶ್ಚರ್ಯವೆಂದರೆ, ಪೊಲೀಸ್ ಬಂಧನದಿಂದ ತಪ್ಪಿಸಿಕೊಂಡ ಮೂವರು ಯಾರೆಂದು ತಮಗೆ ತಿಳಿದೇ ಇಲ್ಲ. ಪೊಲೀಸರು ಯಾರ ವಿರುದ್ಧ ಪ್ರತ್ಯೇಕ ಕೇಸುಗಳನ್ನು ದಾಖಲಿಸಿಕೊಂಡಿದ್ದಾರೋ, ಆ ಮೂವರೂ ನಮ್ಮ ಪಕ್ಷದ ಕಾರ್ಯಕರ್ತರೇ ಅಲ್ಲವೆಂದು ಸಿಪಿಐಎಂ ಅಧಿಕೃತರು udupibits.com ಜೊತೆ ಮಾತನಾಡುತ್ತಾ ಸ್ಪಷ್ಟಪಡಿಸಿದ್ದಾರೆ.
ಸಿಪಿಐಎಂ ರಾಜ್ಯ ಮುಖಂಡರ ಸಹಿತ 179 ಪ್ರತಿಭಟನಾಕಾರ ರು ಡಿ.31 ಕ್ಕೆ ಉಡುಪಿ ಕೋರ್ಟಿಗೆ
Posted: December 30, 2012 in UncategorizedTags: ಉಡುಪಿ, ಉಡುಪಿ ಕೃಷ್ಣ ದೇವಾಲಯ, ಉಡುಪಿ ಕೃಷ್ಣ ಮಠ, ಉಡುಪಿ ಮಠ, ಎಸ್ಎಫ್ಐ, ಕೃಷ್ಣ ದೇವಾಲಯ, ಕೃಷ್ಣ ಮಠ, ಜನವಾದಿ ಮಹಿಳಾ ಸಂಘಟನೆ, ಜಾತಿ, ಜಾತಿ ಅಸಮಾನತೆ, ಜಾತಿ ತಾರತಮ್ಯ, ತಾರತಮ್ಯ, ದಿವೈಎಫ್ಐ, ಪಂಕ್ತಿಬೇಧ, ಪೇಜಾವರ ಸ್ವಾಮೀಜಿ, ಪ್ರಗತಿಪರ ಚಳುವಳಿ, ಪ್ರಗತಿಪರ ಹೋರಾಟ, ಪ್ರತಿಭಟನೆ, ಮಡೆಸ್ನಾನ, ಸಮಾಜ ಸುಧಾರಣಾ ಚಳುವಳಿ, ಸಮಾಜ ಸುಧಾರಣೆ, ಸಮುದಾಯ, ಸಿಐಟಿಯು, ಸಿಪಿಎಂ, ಸಿಪಿಐಎಂ, ಹೋರಾಟ, citu, cpim, cpm, dyfi, mdesnaana, sfi, udupi krishna matth, udupi matth
ಉಡುಪಿ: ಮಡೆಸ್ನಾನ ಮತ್ತು ಪಂಕ್ತಿಬೇಧದ ವಿರುದ್ಧ ನಡೆದ ಪ್ರತಿಭಟನಾ ಪ್ರದರ್ಶನದ ಸಂದರ್ಭದಲ್ಲಿ ಲಾಠಿ ಏಟು ತಿಂದು ಗಾಯಗೊಂಡದ್ದೂ ಅಲ್ಲದೆ, ಪೊಲೀಸರಿಂದ
ಬಂಧನಕ್ಕೊಳಗಾಗಿದ್ದ 182 ಮಂದಿ ಸಿಪಿಐಎಂ ಕಾರ್ಯಕರ್ತರು ನಾಳೆ (ಸೋಮವಾರ) ಬೆಳಗ್ಗೆ ಗಂಟೆ 10.30 ಕ್ಕೆ ಉಡುಪಿಯ ಸಿವಿಲ್ ಜಡ್ಜ್ (ಕಿರಿಯ ವಿಭಾಗ) ಜೆಎಂಎಫ್ಸಿ
ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಜಿ.ವಿ.ಶ್ರೀರಾಮ ರೆಡ್ಡಿ, ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರುಗಳಾದ ಜಿ.ಎನ್.ನಾಗರಾಜ್, ಮಾರುತಿ ಮಾನ್ಪಡೆ, ನಿತ್ಯಾನಂದ ಸ್ವಾಮಿ, ಬಿ.ಮಾಧವ, ಕೆ.ಆರ್.ಶ್ರೀಯಾನ್, ವಿ.ಜೆ.ಕೆ.ನಾಯರ್, ಎಸ್.ಪ್ರಸನ್ನ ಕುಮಾರ್, ಬಾಲಕೃಷ್ಣ ಶೆಟ್ಟಿ, ಬಯ್ಯಾ ರೆಡ್ಡಿ, ಯು.ಬಸವರಾಜ್, ಸಿಐಟಿಯು ಅಖಿಲ ಭಾರತ ಕಾರ್ಯದರ್ಶಿ ವರಲಕ್ಷ್ಮಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದಶರ್ಿ
ಕೆ.ಎಸ್.ಲಕ್ಷ್ಮಿ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ
ರಾಜ್ಯಾಧ್ಯಕ್ಷ ಕೆ,ಎಸ್.ಶಿವರಾಮು, ಮೂಡಬಿದ್ರೆ ಪುರಸಭೆ ಉಪಾಧ್ಯಕ್ಷೆ ರಮಣಿ, ಮಂಗಳೂರು ಕಾರ್ಪೋರೇಟರ್ ಜಯಂತಿ ಬಿ.ಶೆಟ್ಟಿ, ಬಿ.ಎಂ.ಭಟ್, ಯಾದವ ಶೆಟ್ಟಿ, ಭರತ್ ರಾಜ್, ಕೆ.ಎನ್.ಉಮೇಶ್ ಸಹಿತ 182 ಮಂದಿ ವಿರುದ್ಧ ಡಿ.27 ರಂದು ಸಂಜೆ ಲಾಠಿಚಾರ್ಜ್ ನಡೆಸಿದ ಉಡುಪಿ ನಗರ ಸರ್ಕಲ್ ಇನ್ಸ್ಪೆಕ್ಟರ್ ಮಾರುತಿ ಜಿ.ನಾಯಕ್ ಅವರು ಸುಮುಟೊ ಆಗಿ ಮೊಕದ್ದಮೆ ದಾಖಲಿಸಿಕೊಂಡಿದ್ದರು.
ಡಿ. 26 ರಂದು ಸಂಜೆ ಇವರುಗಳನ್ನು ಬಂಧಿಸಿದ ಪೊಲೀಸರು ಐಪಿಸಿ ಕಲಂಗಳಾದ 114, 143, 147, 148, 149, 323, 324, 332, 333, 341, 353, 427 ಪ್ರಕಾರ ಮೊಕದ್ದಮೆ ದಾಖಲಿಸಿಕೊಂಡಿದ್ದರು. ಬಳಿಕ ಮಧ್ಯರಾತ್ರಿ ನ್ಯಾಯಾಧೀಶರಾದ ಚಂದ್ರಶೇಖರ ಯು. ಅವರ ನಿವಾಸಕ್ಕೆ ಹಾಜರುಪಡಿಸಿದಾಗ, ಪ್ರತಿಭಟನಾಕಾರರ ಪರ ವಕೀಲರಾದ ಶಶಿರಾಕ್ ಕೆ. ಕಾವೂರು ಹಾಗೂ ಸುಧೀಂದ್ರ ವಾದ ಆಲಿಸಿದ ನ್ಯಾಯಾಧೀಶರು ಡಿ.31 ರ ವರೆಗೆ ಮಂಧ್ಯಂತರ ಜಾಮೀನು ನೀಡಿ, ಡಿ.31 ರಂದು ಬೆಳಗ್ಗೆ ಮತ್ತೆ ತೆರೆದ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದರು. ಇದರಂತೆ ಪ್ರತಿಭಟನಾಕಾರರು ಇಂದು ನ್ಯಾಯಾಲಯಕ್ಕೆ ಹಾಜರಾಗಿ ಖಾಯಂ ಜಾಮೀನು ಪಡೆದುಕೊಳ್ಳಿದ್ದಾರೆ.
ಡಿ.26 ರಂದು ಮಧ್ಯರಾತ್ರಿ ಪ್ರತಿಭಟನಾಕಾರರನ್ನು ಬಂಧಿಸಿಟ್ಟಿದ್ದ ಡಿಎಆರ್ ಮೈದಾನದಿಂದ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸುವ ಸಮಯದಲ್ಲಿ ಬಂಧಿತರಾಗಿದ್ದ 182 ಮಂದಿಯಲ್ಲಿ ಮೂವರು ಪೊಲೀಸರ ಬಂಧನದಿಂದ ತಪ್ಪಿಸಿಕೊಂಡಿದ್ದರು ಎಂದು ಹೇಳಿ ಮೂವರ ವಿರುದ್ಧ ಮತ್ತೆ ಉಡುಪಿ ನಗರ ಠಾಣೆಯ ಪೊಲೀಸರು ಪ್ರತ್ಯೇಕ ಮೊಕದ್ದಮೆ ದಾಖಲಿಸಿದ್ದರು. ಆಶ್ಚರ್ಯವೆಂದರೆ, ಪೊಲೀಸ್ ಬಂಧನದಿಂದ ತಪ್ಪಿಸಿಕೊಂಡ ಮೂವರು ಯಾರೆಂದು ತಮಗೆ ತಿಳಿದೇ ಇಲ್ಲ. ಪೊಲೀಸರು ಯಾರ ವಿರುದ್ಧ ಪ್ರತ್ಯೇಕ ಕೇಸುಗಳನ್ನು ದಾಖಲಿಸಿಕೊಂಡಿದ್ದಾರೆ, ಆ ಮೂವರು ನಮ್ಮ ಪಕ್ಷದ ಕಾರ್ಯಕರ್ತರೇ ಅಲ್ಲವೆಂದು ಸಿಪಿಐಎಂ ಮೂಲಗಳು udupibits.com ಗೆ ಸ್ಪಷ್ಟಪಡಿಸಿದೆ. ಪೊಲೀಸ್ ಬಂಧನದಲ್ಲಿದ್ದ ಮೂವರು ಪೊಲೀಸ್ ಕಸ್ಟಡಿಯಿಂದ ತಪ್ಪಿಕೊಳ್ಳಲು ಪೊಲೀಸರ ಭದ್ರತೆಯಲ್ಲಿನ ಲೋಪವೇ ಕಾರಣವಾಗಿದ್ದು, ಇದೀಗ ಅಂದು ಚಂದು ಮೈದಾನದಲ್ಲಿ ಬಂಧಿತರ ಕಾವಲು ಕಾಯುತ್ತಿದ್ದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಅಮಾನತು ಭೀತಿಯಲ್ಲಿದ್ದಾರೆ.












