ಉಡುಪಿ: ಚುನಾವಣೆ ಸಮಯದಲ್ಲಿ ಪಕ್ಷ ಬಿಡುಗಡೆಗೊಳಿಸಿದ ಪ್ರಣಾಳಿಕೆಯೇ ನನಗೆ ಭಗವದ್ಗೀತೆ, ಬೈಬಲ್, ಖುರಾನ್ ಎಲ್ಲವೂ. ಪ್ರಣಾಣಿಕೆಯಲ್ಲಿ ನಾವು ಕೊಟ್ಟ ಭರವಸೆಯನ್ನು ಈಡೇರಿಸಲು ದಕ್ಷತೆಯಿಂದ ಪ್ರಮಾಣಿಕವಾಗಿ ಪ್ರಯತ್ನ ನಡೆಸಲಾಗುವುದು. ಆಡಳಿತದಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗುವುದು ಎಂದು ರಾಜ್ಯದ ನೂತನ ನಗರಾಭಿವೃದ್ಧಿ (ಬೆಂಗಳೂರು ಹೊರತುಪಡಿಸಿ), ನೀರು ಸರಬರಾಜು ಮತ್ತು ಒಳಚರಂಡಿ ಸಚಿವ ವಿನಯ ಕುಮರ್ ಸೊರಕೆ ತಿಳಿಸಿದರು.
ಕ್ಯಾಬಿನೆಟ್ ಸಚಿವರಾದ ಬಳಿಕ ಮೊದಲ ಬಾರಿಗೆ ಮೇ 20 ರಂದು ಜಿಲ್ಲೆಗೆ ಆಗಮಿಸಿದ ಸೊರಕೆಯವರು ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆಸಿದ ಮೊದಲ ಅಧಿಕೃತ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ಇಂದು (ಸೋಮವಾರ) ಬೆಳಗ್ಗೆ ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳ ಮೊದಲ ಸಭೆಯನ್ನು ನಡೆಸಿದ್ದೇನೆ. ಇದೇ ತಿಂಗಳ 22 ಕ್ಕೆ ಮತ್ತೆ ಬೆಂಗಳೂರಿನಲ್ಲಿ ವಿಸೃತ ಮಟ್ಟದ ಸಭೆ ಕರೆದಿದ್ದೇನೆ. ಸ್ಥಳೀಯ ಸಂಸ್ಥೆಗಳ ಮೀಸಲಾತಿ ಪಟ್ಟಿಯನ್ನು ಈ ಸಭೆಯಲ್ಲಿ ತಂದೊಪ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಳಿಕ ಕೂಡಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮೀಸಲಾತಿಯನ್ನು ಬಿಡುಗಡೆಗೊಳಿಸುವುದಾಗಿ ವಿನಯಕುಮರ್ ಸೊರಕೆ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರಕಾರದ ಸಹಕಾರದೊಂದಿಗೆ ಜಿಲ್ಲೆಯ ಸಮಗ್ರ ಅಬಿವೃದ್ಧಿಗೆ ಕಾರ್ಯ ಯೋಜನೆ ಹಾಕಿಕೊಳ್ಳಲಾಗುವುದು. ತಿಂಗಳಿಗೊಮ್ಮೆ ರಾಜ್ಯ ಮಟ್ಟದ ಅಧಿಕರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದೂ ಇದೇ ಸಂದರ್ಭದಲ್ಲಿ ಸಚಿವರು ಮಾಹಿತಿ ನೀಡಿದರು. ಮಾಧ್ಯಮಗೋಷ್ಟಿಯಲ್ಲಿ ಶಾಸಕರಾದ ಪ್ರಮೋದ್ ಮಧ್ವರಾಜ್, ಪ್ರತಾಪಚಂದ್ರ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ಅಮೃತ್ ಶೆಣೈ, ಶಿವಾಜಿ ಸುವರ್ಣ ಮೊದಲಾದವರು ಉಪಸ್ಥಿತರಿದ್ದರು. ಮೊದಲ ದಿನವೇ ಎಲ್ಲರನ್ನೂ ಕಾಯಿಸಿದ ಸಚಿವ ಸೊರಕೆ:
ಸಚಿವ ಸೊರಕೆ ಸಂಜೆ 5 ಗಂಟೆಗೆ ಉಡುಪಿ ನಾಯರ್ ಕೆರೆಯಲ್ಲಿರುವ ಕಾಂಗ್ರೆಸ್ ಭವನಕ್ಕೆ ಆಗಮಿಸಬೇಕಾಗಿತ್ತು. ಇಲ್ಲಿ ಪಕ್ಷದ ವತಿಯಿಂದ ಸೊರಕೆಯವರಿಗೆ ಅಭಿನಂದನಾ
ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗಂಟೆ 5.30 ಕ್ಕೆ ಮಾಧ್ಯಮಗೋಷ್ಟಿಯನ್ನು ನಿಗದಿಪಡಿಸಲಾಗಿತ್ತು.
ಆದರೆ, ಸಚಿವರು ಉಡುಪಿ ಪತ್ರಕರ್ತರನ್ನು ಸರಿಯಾಗಿ ಒಂದು ಗಂಟೆ ಕಾಲ ಕಾಯಿಸಿದರು. 5.30 ಕ್ಕೆ ಬರಬೇಕದ ಸೊರಕೆಯವರು ಗಂಟೆ 6.30 ಕ್ಕೆ ಕಾಂಗ್ರೆಸ್ ಭವನಕ್ಕೆ ಆಗಮಿಸಿ ಮಾಧ್ಯಮಗೋಷ್ಟಿ ನಡೆಸಿದರು. ಮಾಧ್ಯಮಗೋಷ್ಟಿ ಮುಗಿಸಿದ ಬಳಿಕ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಭಾಗವಹಿಸಿದರು. 6 ಗಂಟೆಗೆ ಸಚಿವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಸರಕಾರಿ ಅಧಿಕಾರಿಗಳ ಸಭೆಯನ್ನು ಕರೆದಿದ್ದರು. ಈ ಸಭೆಗೆ ಸಚಿವರು ಆಗಮಿಸಿದಾಗ ರಾತ್ರಿ ಗಂಟೆ 8. ಅಧಿಕಾರಿಗಳು, ನೌಕರರು, ಸಿಬ್ಬಂದಿಗಳು ಸಚಿವರಿಗಾಗಿ ರಾತ್ರಿವರೆಗೆ ಕಾದು ಬಳಿಕ ತಡವಾಗಿ ತಮ್ಮ ಮನೆಗಳಿಗೆ ತೆರಳಬೇಕಾಯಿತು. ಮುಖ್ಯವಾಗಿ ಮಹಿಳಾ ನೌಕರರು ಹಾಗೂ ಸಿಬ್ಬಂದಿಗಳು ಇದರಿಂದಾಗಿ ಭಾರೀ ಸಮಸ್ಯೆ ಅನುಭವಿಸಬೇಕಾಗಿ ಬಂತು.
Posts Tagged ‘congress’
ಪಕ್ಷದ ಪ್ರಣಾಳಿಕೆಯೇ ನನಗೆ ಭಗವದ್ಗೀತೆ, ಬೈಬಲ್, ಖುರಾನ್ ಎಲ್ಲವೂ: ಸಚಿವ ಸೊರಕೆ
Posted: May 21, 2013 in UncategorizedTags: : mla pramod madhwaraj, amrith shenoy p., ashok kumar kodavoor, congress, congress govt, govt of karnataka, mlc prathapchandra shetty, press meet, udupi press, udupibits, udupibits.com, vinaykumar sorake, www.udupibits.com
ಸೊರಕೆ ಜಾತಿವಾದವನ್ನು ಕೆಪಿಸಿಸಿ ಅಧ್ಯಕ್ಷರಿಗೆ ಮನವರಿಕೆ ಮಾಡಿಸಿತು ದಲಿತರ ನಿಯೋಗ !
Posted: May 16, 2013 in UncategorizedTags: : mla pramod madhwaraj, ಉಡುಪಿ ರಾಜಕೀಯ, ಉಡುಪಿ ಸುದ್ದಿ, ಕರ್ನಾಟಕ ರಾಜಕೀಯ, ಕಾಂಗ್ರೆಸ್, ಕಾಂಗ್ರೆಸ್ ರಾಜಕೀಯ, ಜಾತಿ ರಾಜಕೀಯ, ಜಾತಿವಾದ, ಜಾತ್ಯತೀತ, ಡಾ.ಜಿ.ಪರಮೇಶ್ವರ್, ಪ್ರಮೋದ್ ಮಧ್ವರಾಜ್, ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜಕೀಯ, ವಿನಯ ಕುಮಾರ್ ಸೊರಕೆ, cm siddaramayya, congress, dalith, dalith sangharsha samithi, daliths, dr.g.parameshwar, dss, karnataka news, mla vinayakumar sorake, sc/st, sc/st congress, udupi, udupi news, udupibits, udupibits.com, www.udupibits.com
ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮಧ್ವರಾಜ್ ಅವರನ್ನು ಜಿಲ್ಲೆಯಿಂದ ಸಚಿವರನ್ನಾಗಿ ಆಯ್ಕೆ ಮಾಡುವಂತೆ ಜಿಲ್ಲೆಯ ದಲಿತ ಮುಖಂಡರ ನಿಯೋಗವೊಂದು ಬೆಂಗಳೂರಿಗೆ ತೆರಳಿ ಕೆಪಿಸಿಸಿ ಅದ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡು ಒತ್ತಡ ಹಾಕಿದೆ.
ಪ್ರಮೋದ್ ಅವರು ಬಡವರು, ದಲಿತರು, ಮಹಿಳೆಯರ ಬಗ್ಗೆ ಅಪಾರವಾದ ಕಾಳಜಿಯುಳ್ಳವರು. ಜನ ಸಾಮಾನ್ಯರ ಕೈಗೆ ಸಿಕ್ಕುವಂಥ ವ್ಯಕ್ತಿ. ಯಾವುದೇ ಒಂದು ಜಾತಿಯವರ ಪರವಾಗಿಯಷ್ಟೇ ಕೆಲಸ ಮಾಡಿದವರೂ ಅಲ್ಲ. ಇವರನ್ನು ಸಚಿವರನ್ನಾಗಿ ಮಡಿದಲ್ಲಿ ಮಾತ್ರ ಮುಂದಿನ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಗೆ ಪ್ರಯೋಜನವಾಗಲಿದೆ. ಮಾತ್ರವಲ್ಲ, ಪ್ರಮೋದರು ಸಚಿವರಾದರೆ ಮಾತ್ರವೇ ಜಿಲ್ಲೆಯ ಎಲ್ಲಾ ಜಾತಿ, ಮತ, ವರ್ಗಗಳ ಜನರಿಗೂ ಉಪಕಾರವಾಗಲಿದೆ ಎಂದು ದಲಿತ ನಾಯಕರು ಡಾ.ಪರಮೇಶ್ವರ್ ಅವರಿಗೆ ಮನವರಿಕೆ ಮಾಡಿಕೊಟ್ಟರು ಎಂದು ತಿಳಿದುಬಂದಿದೆ. ಕಾಪು ಕ್ಷೇತ್ರದಿಂದ ಶಾಸಕರಾದ ವಿನಯ ಕುಮಾರ್ ಸೊರಕೆಯವರು ಸಂಸದರಾಗಿದ್ದ ಅವಧಿಯಲ್ಲಿಯೂ ಅವರು ಜಿಲ್ಲೆಗಾಗಲೀ, ಜಿಲ್ಲೆಯ ಬಡ ಜನರಿಗಾಗಲೀ ಮಾಡಿದ್ದೇನೂ ಇಲ್ಲ. ಸ್ವಜಾತಿ ವಾದಿಯಾದ ಸೊರಕೆಯವರು ತಮ್ಮ ಸುತ್ತಲೂ ಸ್ವಜಾತಿ ಬಾಂಧವರನ್ನೇ ಇಟ್ಟುಕೊಂಡು ರಾಜಕೀಯ ಮಾಡಿದವರು. ಸೊರಕೆಯವರನ್ನು ಸಚಿವರನ್ನಾಗಿ ಮಡಿದಲ್ಲಿ ಇತರ ಯವ ಜಾತಿಯವರಿಗೂ ಯಾವುದೇ ಲಾಭವಾಗದು. ಸೊರಕೆಯವರನ್ನು ಸುತ್ತುವರಿದಿರುವ ಅವರ ಸ್ವಜಾತಿ ಬಾಂಧವರೂ ಇತರ ಯಾರನ್ನೂ ಶಾಸಕರ ಹತ್ತಿರ ಸುಳಿಯಲೂ ಬಿಡಲಾರದ ಸ್ಥಿತಿ ನಿರ್ಮಾಣವಾಗುವುದು ಖಚಿತ ಎಂದು ದಲಿತ ಮುಖಂಡರು ಸೊರಕೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದರು ಎಂದು ಹೇಳಲಾಗಿದೆ. ಉಡುಪಿ ಜಿಲ್ಲೆಯಿಂದ ಸಚಿವರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಸೊರಕೆಯವರ ಬದಲಾಗಿ ಪ್ರಮೋದ್ ಮಧ್ವರಾಜ್ ಅವರನ್ನು ಪರಿಗಣಿಸಬೇಕು. ಪ್ರಮೋದರನ್ನು ಸಚಿವರನ್ನಾಗಿ ಮಾಡಿದಲ್ಲಿ ಜಿಲ್ಲೆಯ ಸಮಸ್ತ ದಲಿತ ಸಮುದಾಯ ಪ್ರಮೋದ್ ಜೊತೆಗೆ ಸಹಕರಿಸಲಿದೆ. ಮಾತ್ರವಲ್ಲ, ಮುಂಬರುವ ಲೋಕಸಭ ಚುನಾವಣೆಯಲ್ಲಿ ದಲಿತ ಸಮುದಾಯ ಕಾಂಗ್ರೆಸ್ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಲಿದೆ ಎಂದು ದಲಿತರ ನಿಯೋಗ ಕೆಪಿಸಿಸಿ ಅಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟಿತು. ಕೆಪಿಸಿಸಿ ಅಧ್ಯಕ್ಷರು ನಿಯೋಗದ ಜೊತೆಗೆ ಸಕರಾತ್ಮಕವಾಗಿ ಸ್ಪಂದಿಸಿತು ಎಂದು ಮಾಹಿತಿ ಮೂಲಗಳು ತಿಳಿಸಿವೆ.
ಉಡುಪಿಗೆ ಬಂದ ಆಸ್ಕರ್ ಗೆ ಪ್ರಮೋದ್ ಬೆಂಬಲಿಗರ ಮು ತ್ತಿಗೆ
Posted: May 14, 2013 in UncategorizedTags: : mla pramod madhwaraj, congress, mla b. ramanatha rai, mla vinay kumar sorake, mp askar
ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿ ಅಭ್ಯರ್ಥಿಯನ್ನು 39 ಸಾವಿರಕ್ಕೂ ಅಧಿಕ ಮತಗಳಿಂದ ಪರಾಜಯಗೊಳಿಸಿ ಶಾಸಕರಾಗಿ ಆಯ್ಕೆಯಾದ ಪ್ರಮೋದ್ ಮಧ್ವರಾಜ್ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಮುಸ್ಲಿಮ್, ಕ್ರಿಶ್ಚಿಯನ್ ಹಾಗೂ ಮೊಗವೀರ ಸಮುದಾಯದ ಇನ್ನೂರಕ್ಕೂ ಹೆಚ್ಚು ಮಂದಿ ಆದಿತ್ಯವಾರ ಏಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆನಾಂಡಿಸ್ ಅವರಿಗೆ ಒತ್ತಡ ಹಾಕಿದ ಪ್ರಸಂಗ ನಡೆದಿದೆ.
ಕಾಂಗ್ರೆಸ್ ಪರಮೋಚ್ಛ ನಾಯಕಿ ಸೋನಿಯಾ ಗಾಂಧಿಯವರ ಪರಮಾಪ್ತರೂ, ಮಾಜಿ ಕೇಂದ್ರ ಮಂತ್ರಿಯೂ ಆದ ಆಸ್ಕರ್ ಅವರು ಆದಿತ್ಯವಾರ ಉಡುಪಿಗೆ ಆಗಮಿಸಲಿದ್ದಾರೆ ಎನ್ನುವುದು ಪ್ರಮೋದ್ ಹಾಗೂ ಇವರ ಆಪ್ತ ಬೆಂಬಲಿಗರಿಗೆ ಮೊದಲೇ ತಿಳಿದಿತ್ತು. ಪ್ರಮೋದರಿಗೆ ಸಚಿವ ಗಿರಿ ಸಿಗುವಂತೆ ಮಾಡಲು ಒತ್ತಡ ತಂತ್ರವನ್ನು ಅನುಸರಿಸಿರುವ ಪ್ರಮೋದ್ ಬೆಂಬಲಿಗರು ಈ ಅವಕಾಶವನ್ನು ಸಮರ್ಥವಾಗಿ ಸದುಪಯೋಗಪಡಿಸಿಕೊಳ್ಳು ನಿರ್ಧರಿಸಿ ವಿವಿಧ ಸಮುದಾಯಗಳ ಮುಖಂಡರನ್ನು ಸಂಪರ್ಕಿಸಿ ಪ್ರಮೋದರಿಗೆ ಸಚಿವ ಸ್ಥಾನ ನೀಡುವಂತೆ ಆಸ್ಕರ್ ಮೂಲಕ ಲಾಬಿ ನಡೆವಂತೆ ಹಲವರಲ್ಲಿ ಮನವಿ ಮಾಡಿದರೆನ್ನಲಾಗಿದೆ.
ಮನವಿಗೆ ಸ್ಪಂದಿಸಿದ ಮುಸ್ಲೀಮ್, ಕ್ರಿಶ್ಚಿಯನ್ ಹಾಗೂ ಮೀನುಗಾರ ಮುಂದಾಳುಗಳು ಬನ್ನಂಜೆಯಲ್ಲಿರುವ ಪ್ರವಾಸಿ ಬಂಗಲೆಯಲ್ಲಿದ್ದ ಆಸ್ಕರ್ ಫೆರ್ನಾಂಡಿಸ್ ಅವರನ್ನು ಭೇಟಿಯಾಗಿ ಪ್ರಮೋದರಿಗೆ ಈ ಸಂಬಂಧವಾಗಿ ಮನವಿ ಮಾಡಿಕೊಂಡರು. ಜಯಪ್ರಕಾಶ್ ಹೆಗ್ಡೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಮಯದಲ್ಲಿ ಮಾತ್ರವೇ ಕರಾವಳಿ ಮೀನುಗಾರರಿಗೆ ಪ್ರಯೋಜನಕಾರಿಯಾಗುವಂಥ ಕೆಲವು ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಟಾನಗೊಮಡಿವೆ. ಹೆಗ್ಡೆಯವರನ್ನು ಹೊರತುಪಡಿಸಿದರೆ, ವಸಂತ ಸಾಲ್ಯಾನ್ ಸಹಿತ ಉಳಿದ ಯಾರೊಬ್ಬರ ಅವಧಿಯಲ್ಲೂ ಮೀನುಗಾರರಿಗೆ ಲಾಭಕರವಾದ ಯೋಜನೆಗಳು ಜ್ಯಾರಿಯಾಗಿಲ್ಲ ಎಂದು ಮೀನುಗಾರ ಮುಖಂಡರು ಆಸ್ಕರ್ ಅವರಲ್ಲಿ ಹೇಳಿಕೊಂಡರು ಎಂದು ತಿಳಿದುಬಂದಿದೆ.
ಸಿದ್ಧರಾಮಯ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನದ ಅವಕಾಶ ದಕ್ಕಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯಿಂದ ಆಯ್ಕೆಯಾದ ಮೂವರು ಶಾಸಕರೂ ತಮ್ಮದೇ ರೀತಿಯಲ್ಲಿ ಉನ್ನತ ಮಟ್ಟದಲ್ಲಿ ಭಾರೀ ಲಾಬಿ ಮಾಡುತ್ತಿದ್ದಾರೆ. ಲಾಬಿ ಮಾಡಲು ಯಾರೂ ದೆಹಲಿಗೆ ಬರಬೇಡಿ ಎಂದು ಹೈಕಮಾಂಡ್ ಸೂಚನೆ ನೀಡಿದ್ದರೂ, ಪ್ರಮೋದ್ ಮಧ್ವರಾಜ್ ಶಾಸಕರಾಗಿ ಆಯ್ಕೆಯಾದ ಬೆನ್ನಿಗೆ ದೆಹಲಿಗೆ ದೌಡಯಿಸಿದ್ದಾರೆ. ಅಮ್ಮ ಮನೋರಮಾ ಮಧ್ವರಾಜ್ ಅವರು ಸಚಿವರಾಗಿದ್ದ ಅವಧಿಯಲ್ಲಿ ಮತ್ತು ಸಂಸದೆಯಾಗಿದ್ದ ಅವಧಿಯಲ್ಲಿ ಮನೋರಮಾ ಮೂಲಕ ಹೈಕಮಾಂಡ್ ಮಟ್ಟದ ಅನೇಕ ನಾಯಕರು ಪ್ರಮೋದರ ಸಂಪರ್ಕಕ್ಕೆ ಬಂದಿದ್ದರು. ಇದೇ ಸಂಪರ್ಕವನ್ನು
ಉಪಯೋಗಿಸಿಕೊಂಡು ಇದೀಗ ಪ್ರಮೋದರು ಸಚಿವ ಸ್ಥಾನಕ್ಕಾಗಿ ಭಾರೀ ಲಾಬಿ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಪು ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ವಿನಯ ಕುಮಾರ್ ಸೊರಕೆ ಲಾಬಿಯಲ್ಲಿ ಒಂದು ಹೆಜ್ಜೆ ಮುಂದಿದ್ದಾರೆ ಎನ್ನಲಾಗಿದೆ. ಮಾಜಿ ಸಂಸದರೂ, ಹಾಲಿ ಏಐಸಿಸಿ ಕಾರ್ಯದರ್ಶಿಯೂ ಆಗಿರುವ ಹಿನ್ನೆಲೆಯಲ್ಲಿ ಸೊರಕೆಯವರಿಗೆ ಹೈಕಮಾಂಡ್ ಮಟ್ಟದಲ್ಲಿ ಹಲವರು ನಿರಂತರ ಸಂಪರ್ಕದಲ್ಲಿದ್ದಾರೆ. ಇವರ ಮೂಲಕ ಮತ್ತು ಜಿಲ್ಲೆಯ ಬಹುದೊಡ್ಡ ಸಮುದಾಯವಾದ ಬಿಲ್ಲವ ಸಮುದಾಯದ ಪ್ರತಿನಿಧಿ ತಾನೆನ್ನುವ ಮೂಲಕ ಸೊರಕೆಯವರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದು, ಪ್ರಸ್ತುತ ಲಾಬಿಯಲ್ಲಿ ಇವರೇ ಒಂದು ಕೈ ಮೇಲಿದ್ದಾರೆಂದು ಹೇಳಿಕೊಳ್ಳಲಾಗುತ್ತಿದೆ. ಬಿಲ್ಲವ ಲಾಬಿಯೂ ಸೊರಕೆ ಪರವಾಗಿ ಲಾಬಿ ನಡೆಸುತ್ತಿದೆ ಎನ್ನಲಾಗಿದೆ.
ಜಿಲ್ಲೆಯ ಅತೀ ದೊಡ್ಡ ಸಮುದಾಯದ ಪ್ರತಿನಿಧಿ ಎಂಬ ಕಾರಣಕ್ಕೆ ಸೊರಕೆಯವರನ್ನೂ, ಎರಡನೇ ಅತೀ ದೊಡ್ಡ ಸಮುದಾಯದ ಪ್ರತಿನಿಧಿ ಎಂಬ ಕಾರಣಕ್ಕೆ ಪ್ರಮೋದ್ ಮಧ್ವರಾಜರನ್ನೂ ಸಚಿವರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಉಡುಪಿಯಿಂದ ಸೊರಕೆ ಹಾಗೂ ಪ್ರಮೋದ್ ಇವರಿಬ್ಬರನ್ನೂ, ದ.ಕ.ಜಿಲ್ಲೆಯಿಂದ ಬಿ.ರಮಾನಾಥ ರೈ ಅವರನ್ನು ಸಚಿವರನ್ನಾಗಿ ಮಾಡಿದ್ದೇ ಆದಲ್ಲಿ ವರ್ಷದೊಳಗೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ
ಉಡುಪಿ-ಚಿಕ್ಕಮಗಳೂರು ಮತ್ತು ದ,.ಕ.ಲೋಕಸಭಾ ಕ್ಷೇತ್ರಗಳೆರಡರಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಸುಲಭವಾಗಿ ಜಯ ಸಾಧಿಸಲಿದ್ದಾರೆ ಎಂದು ಹೈಕಮಾಂಡಿಗೆ ಮನವರಿಕೆ ಮಾಡಿಕೊಡುವ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ಮೂಲಗಳು ತಿಳಿಸಿವೆ.
ಕಾರ್ಕಳ ಮತ್ತೆ ವಿರೋಧ ಪಕ್ಷ !
Posted: May 9, 2013 in UncategorizedTags: b.kishor kumar, b.m.sukumar shetty, b.sudhakara shetty, bjp, BSP, congress, Election, gopal bhandari ex mla, gopal poojari mla, haladi srinivas shetty mla, jds, jdu, karnataka election, lalaji r. mendan ex mla, malyadi shivaram shetty, pramod madhwaraj mla, sdpi, udupi election, v.sunil kumar mla, vasanth v.salian ex mla, viny kumar sorake mla
ಉಡುಪಿ: ಇಡೀ ಉಡುಪಿ ಜಿಲ್ಲೆಯ ವಿರೋಧ ಪಕ್ಷಗಳ ಪ್ರತಿನಿಧಿಯಾಗಿ ಸದನದಲ್ಲಿ ಕೆಲಸ ಮಾಡುವ ಜವಾಬ್ದಾರಿಯನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಮತದಾರರು ಈ ಬಾರಿ ಬಿಜೆಪಿಯ ವಿ.ಸುನಿಲ್ ಕುಮಾರ್ ಅವರಿಗೆ ವಹಿಸಿಕೊಟ್ಟಿದ್ದಾರೆ. ಇದೇ ಕೆಲಸವನ್ನು ಕಳೆದ ಬಾರಿ ಕಾರ್ಕಳ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಎಚ್.ಗೋಪಾಲ ಭಂಡಾರಿಯವರ ಹೆಗಲಿಗೆ ಹಾಕಿದ್ದರು.
ಉಡುಪಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು, ಈ ಐದರ ಪೈಕಿ ನಾಲ್ಕರಲ್ಲಿ ಕಳೆದ ಆಡಳಿತಾವಧಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ವಿಜಯಿಯಾಗಿದ್ದರೆ, ಕಾರ್ಕಳದಲ್ಲಿ ಮಾತ್ರ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ್ದರು. ಕಾರ್ಕಳದಲ್ಲಿ ಕಾಂಗ್ರೆಸ್ ನ ಗೋಪಾಲ ಭಂಡಾರಿ ಜಯ ಸಾಧಿಸಿದ ಅವಧಿಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತ್ತು. ಈ ಸಲ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ವಿಜಯಿಯಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಿದ್ದು, ಕಾರ್ಕಳದಲ್ಲಿ ವಿರೋಧಿ ಬಿಜೆಪಿ ಅಭ್ಯರ್ಥಿ ವಿಜಯಿಯಾಗಿದ್ದಾರೆ.
ಕುಂದಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಕಿಶೋರ್ ಕುಮಾರ್ ಹಾಗೂ ಕಾಪು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಮಾಜಿ ಸಚಿವ ವಸಂತ ವಿ.ಸಾಲಿಯಾನ್ ಸಹಿತ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್, ಬಿಎಸ್ಪಿ, ಎಸ್ ಡಿಪಿಐ, ಬಿಎಸ್ಪಿ, ಜೆಡಿಯು, ಸಿಪಿಐಎಂ ಪಕ್ಷಗಳ ಮತ್ತು ಪಕ್ಷೇತರರು ತಮ್ಮ ಠೇವಣಿಗಳನ್ನು ಕಳೆದುಕೊಂಡಿದ್ದಾರೆ. ಜಿಲ್ಲೆಯ ಯಾವುದೇ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷಕ್ಕಾಗಲೀ, ಬಿಜೆಪಿಗಾಗಲೀ ಇತರರ ಸ್ಪರ್ಧೆಯಿಂದಾಗಿ ಸೋಲುಂಟಾಗಿಲ್ಲ. ಉಡುಪಿಯಲ್ಲಿ ಕಾಂಗ್ರೆಸ್ ನ ಪ್ರಮೋದ್ ಮಧ್ವರಾಜ್, ಬೈಂದೂರಿನಲ್ಲಿ ಕಾಂಗ್ರೆಸ್ ನ ಗೋಪಾಲ ಪೂಜಾರಿ, ಕುಂದಾಪುರದಲ್ಲಿ ಪಕ್ಷೇತರ ಹಾಲಾಡಿ ಶ್ರೀನಿವಾಸ ಶೆಟ್ಟಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಾಪುವಿನಲ್ಲಿ ಕಾಂಗ್ರೆಸ್ ನ ವಿನಯ ಕುಮಾರ್ ಸೊರಕೆ ಹಾಗೂ ಕಾರ್ಕಳದಲ್ಲಿ ಬಿಜೆಪಿಯ ಸುನಿಲ್ ಕುಮಾರ್ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಗೆದ್ದ ಅಭ್ಯರ್ಥಿಗಳ ಎದುರು ನೇರವಾಗಿ ಪ್ರತಿಸ್ಪರ್ಧೆ ನೀಡಿ ಸೋಲುಂಡ ಅಭ್ಯರ್ಥಿಗಳಿಗೆ ಸೋಲಿಗೆ ಮೂರನೇ ಪಕ್ಷದ ಅಥವಾ ಪಕ್ಷೇತರ ಅಭ್ಯರ್ಥಿಯ ಸ್ಪರ್ಧೆಯೇ ಕಾರಣ ಅಲ್ಲದಿರುವುದು ಈ ಸಲದ ವಿಶೇಷಗಳಲ್ಲಿ ಒಂದು. ಕಾಪುವಿನಲ್ಲಿ ಮಾಜಿ ಸಚಿವ, ಜೆಡಿಎಸ್ ಅಭ್ಯರ್ಥಿ ವಸಂತ ಸಾಲಿಯಾನ್ ಹಾಗೂ ಎಸ್ ಡಿಪಿಐನ ಅಬ್ದುಲ್ ಹಕೀಂ ಇವರ ಸ್ಪರ್ಧೆಯಿಂದಾಗಿ ಕಾಂಗ್ರೆಸ್ ನ ವಿನಯ ಕುಮಾರ್ ಸೊರಕೆ ಸೋಲಬಹುದು ಎಂದು ಹೇಳಲಾಗುತ್ತಿತ್ತು. ಆದರೆ, ಈ ಅಂದಾಜು ಸುಳ್ಳಾಗಿದೆ. ಸಾಲ್ಯಾನ್ 4,327 ಮತ್ತು ಅಬ್ದುಲ್ ಹಕೀಂ 2,171 ಮತಗಳನ್ನು ಪಡೆದಿದ್ದಾರೆ. ಆದರೂ, ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೊರಕೆ ಸೋಲಲಿಲ್ಲ. ಬದಲಾಗಿ 1,855 ಮತಗಳ ಅಂತರದಿಂದ ಗೆದ್ದಿದ್ದಾರೆ.
ಉಡುಪಿಯಲ್ಲಿ ಎಸ್ ಡಿಪಿಐ ಬೆಂಬಲದೊಂದಿಗೆ ಸ್ಪರ್ಧಿಸಿದ ಬಿಎಸ್ಪಿಯ ವಿ.ಮಂಜುನಾಥ್ ಪಡೆದ ಮತ ಕೇವಲ 986. ದಸಂಸದ ಮೂರು ಬಣಗಳು, ಸಮತಾ ಸೈನಿಕ ದಳ ಮಂಜುನಾಥರಿಗೆ ಬೆಂಬಲ ವ್ಯಕ್ತಪಡಿಸಿತ್ತು. ಈ ಸಂಘಟನೆಗಳಿಗೆ ಸೇರಿದ ಸದಸ್ಯರ, ಕುಟುಂಬದವರ ಮತಗಳು ಮತ್ತು ಎಸ್ ಡಿಪಿಐ ಸದಸ್ಯರ ಹಾಗೂ ಇವರ ಕುಟುಂಬದವರ ಮತಗಳೇ ಬಿಎಸ್ಪಿ ಅಭ್ಯರ್ಥಿಗೆ ಲಭಿಸಿಲ್ಲ ಎನ್ನುವುದು ಈ ಫಲಿತಾಂಶದಿಂದ ಸ್ಪಷ್ಟವಾಗುವ ಅಂಶ.
- sunil1
- haladi 11
- gopal pujari 3
ಉಡುಪಿ ಜಿಲ್ಲೆ: 3 ಕಾಂಗ್ರೆಸ್, 1 ಬಿಜೆಪಿ, 1 ಪಕ್ಷೇತ ರ
Posted: May 8, 2013 in UncategorizedTags: bjp, BSP, congress, cpim, Election, jds, jdu, karnataka election, sdpi, udupi election, udupibits, udupibits.com, www.udupibits.com
ಉಡುಪಿ: ಪ್ರಮೋದ್ ಮಧ್ವರಾಜ್ (ಕಾಂಗ್ರೆಸ್)- 86,868, ಬಿ.ಸುಧಾಕರ ಶೆಟ್ಟಿ (ಬಿಜೆಪಿ)- 47,344, ಅಲೆವೂರು ಯೋಗೀಶ್ ಆಚಾರ್ಯ (ಪಕ್ಷೇತರ)- 1,472, ಬಾರಕೂರು ಸತೀಶ್ ಪೂಜಾರಿ (ಜೆಡಿಎಸ್)- 1,017, ವಿ.ಮಂಜುನಾಥ್ (ಬಿಎಸ್ಪಿ)- 986, ತುಕರಾಮ ಕೋಟ್ಯಾನ್ (ಪಕ್ಷೇತರ)- 498 ಮತ್ತು ನಾಸಿರ್ ಹುಸೇನ್ (ಪಕ್ಷೇತರ)- 245.
ಕಾಪು: ವಿನಯ ಕುಮಾರ್ ಸೊರಕೆ (ಕಾಂಗ್ರೆಸ್)- 52,782, ಲಾಲಾಜಿ ಆರ್.ಮೆಂಡನ್ (ಬಿಜೆಪಿ)- 50,927, ವಸಂತ ವಿ. ಸಾಲಿಯಾನ್ (ಜೆಡಿಎಸ್)- 4,327, ಅಬ್ದುಲ್ ಹಕೀಂ (ಎಸ್ಡಿಪಿಐ)- 2,171, ಶ್ರೀಕಾಂತ್ ಬಿ.ಆಚಾರ್ಯ (ಪಕ್ಷೇತರ)- 1,174, ಹಮೀದ್ (ಪಕ್ಷೇತರ)- 1,174, ವಿಜಯ ಕುಮಾರ್ ಹೆಗ್ಡೆ (ಪಕ್ಷೇತರ)- 467, ರೊನಾಲ್ಡ್ ಕ್ಯಾಸ್ಟಲಿನೊ (ಪಕ್ಷೇತರ)- 269, ಸ್ಟೀಫನ್ ರಿಚರ್ಡ್ ಲೋಬೊ (ಪಕ್ಷೇತರ)- 249, ಖಾಸೀಮ್ (ಪಕ್ಷೇತರ)- 208 ಮತ್ತು ಪ್ರವೀಣ್ ಕುಮಾರ್ (ಪಕ್ಷೇತರ)- 162.
ಕುಂದಾಪುರ: ಹಾಲಾಡಿ ಶ್ರೀನಿವಾಸ ಶೆಟ್ಟಿ (ಪಕ್ಷೇತರ)- 80,563, ಮಲ್ಯಾಡಿ ಶಿವರಾಮ ಶೆಟ್ಟಿ (ಕಾಂಗ್ರೆಸ್)- 39,952, ಕಿಶೋರ್ ಕುಮಾರ್ (ಬಿಜೆಪಿ)- 14,524, ಶ್ರೀನಿವಾಸ ಎಚ್. (ಪಕ್ಷೇತರ)- 2,442, ಮಂಜುನಾಥ್ (ಪಕ್ಷೇತರ)- 764 ಮತ್ತು ಕೃಷ್ಣ ಭರತ್ ಕಲ್ (ಜೆಡಿಯು)- 738.
ಬೈಂದೂರು: ಕೆ.ಗೋಪಾಲ ಪೂಜಾರಿ (ಕಾಂಗ್ರೆಸ್)- 82,277, ಬಿ.ಎಂ.ಸುಕುಮಾರ ಶೆಟ್ಟಿ (ಬಿಜೆಪಿ)- 51,128, ನವೀನಚಂದ್ರ ಖಾರ್ವಿ ಉಪ್ಪುಂದ (ಕೆಜೆಪಿ)- 4,177, ಕೆ.ಶಂಕರ್ (ಸಿಪಿಐಎಂ)- 2,960, ಎಚ್.ಸುರೇಶ್ ಪೂಜಾರಿ (ಪಕ್ಷೇತರ)- 1,611, ಉದಯ ಕುಮಾರ್ ತಲ್ಲೂರು (ಬಿಎಸ್ಪಿ)- 1,515, ಸುರಯ್ಯಾ ಭಾನು (ಜೆಡಿಎಸ್)- 1,023, ಶ್ರೀಧರ ಪೇದೆಮನೆ (ಪಕ್ಷೇತರ)- 957, ಲೋಕೇಶ್ ವಿಠಲ್ ಬೋರ್ಕರ್ (ಪಕ್ಷೇತರ)- 630, ದಿವಾಕರ ಕೋಟ್ಯಾನ್ (ಪಕ್ಷೇತರ)- 620, ಅಬ್ದುಲ್ ಅಝೀಝ್ (ಪಕ್ಷೇತರ)- 463, ಅಬ್ದುಲ್ ಹಜೀದ್ (ಪಕ್ಷೇತರ)- 395 ಮತ್ತು ಮಂಜುನಾಥ್ ಕೆ. (ಜೆಡಿಯು)- 334.
ಕಾರ್ಕಳ: ವಿ.ಸುನಿಲ್ ಕುಮಾರ್ (ಬಿಜೆಪಿ)- 65,039, ಎಚ್.ಗೋಪಾಲ ಭಂಡಾರಿ
(ಕಾಂಗ್ರೆಸ್)- 60,785, ವಾಲ್ಟರ್ ಡಿಸೋಜ (ಜೆಡಿಎಸ್)- 1,302, ಸುನಿಲ್ ಸೋನ್ಸ್ (ಬಿಎಸ್ಪಿ)- 878, ಯು.ಕೆ.ಸಯ್ಯದ್ (ಪಕ್ಷೇತರ)- 873, ಪ್ರವೀಣ್ ಪೂಜಾರಿ (ಕೆಜೆಪಿ)- 553, ಕೆ.ಪಿ.ಪದ್ಮಾವತಿ (ಪಕ್ಷೇತರ)- 478, ರಿಯಾಝ್ (ಪಕ್ಷೇತರ)- 334 ಮತ್ತು ಗೋಪಾಲ (ಪಕ್ಷೇತರ)- 232.
ಅತ್ಯಧಿಕ ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿ: ಹಾಲಾಡಿ ಶ್ರೀನಿವಾಸ ಶೆಟ್ಟಿ, ಅಂತರ: 40,611. ಅತೀ ಕಡಿಮೆ ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿ: ವಿನಯ ಕುಮಾರ್ ಸೊರಕೆ. ಅಂತರ: 1,855. ಅತೀ ಕಡಿಮೆ ಮತ ಪಡೆದ ಅಭ್ಯರ್ಥಿ: ಕಾಪು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರವೀಣ್ ಕುಮಾರ್. ಪಡೆದ ಮತ: 162.
- haladi 1
- pramod madhwaraj 1
- gopal pujari 1
- sorake 1
- sunil
ಆಳಿದ ಪಕ್ಷಗಳನ್ನು ಅಳಿಸಿಹಾಕಿ..
Posted: May 3, 2013 in UncategorizedTags: : shreerama diwana, bjp, BSP, bsr, congress, Election, janaparavedike, jds, karnataka election, karnataka janapara vedike, kjp, shreeram diwan, sriram diwan, srirama diwana, udupi election, udupibits, udupibits.com, www.janaparavedike.wordpress.com, www.udupibits.com
ರಾಜ್ಯ ವಿಧಾನಸಭಾ ಚುನಾವಣೆಗಿನ್ನು ಉಳಿದಿರುವುದು ಕೇವಲ ಇನ್ನೊಂದು ದಿನ. ಬಹು ವರ್ಷ ನಮ್ಮನ್ನಾಳಿದ ಕಾಂಗ್ರೆಸ್ ಮತ್ತು ಅಲ್ಪ ಸಮಯ ಆಡಳಿತ ನಡೆಸಿದ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಮತದಾರರನ್ನು ಒಲಿಸುವ ಅಂತಿಮ ಹಂತದ ಭ್ರಷ್ಟ ರಾಜಕೀಯದಲ್ಲಿ
ನಿರತರಾವಾಗಿವೆ.
ನಿಜಕ್ಕೂ ಈ ಎರಡೂ ರಾಷ್ಟ್ರೀಯ ಪಕ್ಷಗಳಿಗೆ, ಈ ಪಕ್ಷಗಳನ್ನು ಪ್ರತಿನಿಧಿಸುವ ಅಭ್ಯರ್ಥಿಗಳಿಗೆ ಜನಪ್ರತಿಧಿಗಳಾಗುವ, ಆಡಳಿತ ನಡೆಸುವ ಅರ್ಹತೆ, ಯೋಗ್ಯತೆ ಏನಾದರೂ ಇದೆಯೇ ? ಕನಿಷ್ಟ ಅರ್ಹತೆಯಾಗಲೀ, ಯೋಗ್ಯತೆಯಾಗಲೀ ಇವರಿಗೆ ಖಂಡಿತಾ ಇಲ್ಲ. ಜೈಲಿನಲ್ಲಿರಬೇಕಾದವರು ಸದನದಲ್ಲಿದ್ದಾರೆ ಅಥವಾ ಸದನ ಪ್ರವೇಶಿಸುವ
ಸಿದ್ಧತೆಯಲ್ಲಿದ್ದಾರೆ. ಅದಕ್ಕಾಗಿ ಮತ್ತೆ ಮತದಾರರ ಕಾಲಬುಡಕ್ಕೆ, ಮನೆಗಳಿಗೆ ಎಡತಾಕುತ್ತಿದ್ದಾರೆ. ಇವರನ್ನು ಪ್ರಶ್ನಿಸದಿರುವ, ಮತ್ತೆ ಇವೇ ಎರಡು ಪಕ್ಷಗಳತ್ತಲೇ ನೋಡುತ್ತಿರುವ ಮತದಾರರಿಗಾದರೂ ಏನಾಗಿದೆ ? ಯಾಕೆ ಮತದಾರರು ಪ್ರಬುದ್ಧರಾಗುತ್ತಿಲ್ಲ ? ಪ್ರಜ್ಞಾವಂತರಾಗುತ್ತಿಲ್ಲ ?
ಇದುವರೆಗೆ ದೇಶದ, ರಾಜ್ಯದ ಚುಕ್ಕಾಣಿ ಹಿಡಿದು ಅಭಿವೃದ್ಧಿ ಮಂತ್ರ ಜಪಿಸಿದ ಈ ಎರಡೂ ಪಕ್ಷಗಳು, ಇವುಗಳನ್ನು ಪ್ರತಿನಿಧಿಸಿದ ಜನಪ್ರತಿನಿಧಿಗಳು ಮತ್ತು ಈಗ ಮತ್ತೆ ಜನಪ್ರತಿನಿಧಿಗಳಾಗುವ ಹಂಬಲದಲ್ಲಿರುವ ಅಭ್ಯರ್ಥಿಗಳಿಗೆ ಮತದಾರರು ಮತ್ತೆ ಮತ್ತೆ ಮತ ಹಾಕುತ್ತಾರೆಂದಾದರೆ, ಇದು ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದಂತೆಯೇ ಅಲ್ಲವೇ ? ಮುಖ್ಯವಾಗಿ ಈ ಎರಡೂ ಪಕ್ಷಗಳು, ಆಡಳಿತ ನಡೆಸುವ ತನ್ನೆಲ್ಲಾ ಯೋಗ್ಯತೆ, ಅರ್ಹತೆಗಳನ್ನೂ ಅದಾವಾಗಲೇ ಕಳೆದುಕೊಂಡಿವೆ. ವಾಸ್ತವಕ್ಕಾದರೆ, ಚುನಾವಣಾ ಆಯೋಗವೇ ಈ ಪಕ್ಷಗಳನ್ನು ಅನರ್ಹಗೊಳಿಸಬೇಕು. ಆದರೆ, ಆಯೋಗ ಹಾಗೆ ಮಾಡಲಾರದು. ಅಷ್ಟು ದಿಟ್ಟತನವಾಗಲೀ, ದಕ್ಷತೆಯಾಗಲಿ, ಪ್ರಾಮಾಣಿಕತೆಯಾಗಲಿ ಅದಕ್ಕಿಲ್ಲ.
ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಕ್ಕಾಗಿ ರೂಪುಗೊಂಡ ಸಂಘಟನೆ. ಅದನ್ನಿನ್ನೂ ವಿಸರ್ಜನೆ ಮಾಡದಿರುವುದೇ ದೊಡ್ಡ ತಪ್ಪು. ಬಿಜೆಪಿ ನಮ್ಮ ಸಂವಿಧಾನದ ಆಶಯಗಳಿಗೇ ವಿರೋಧವಾಗಿರುವ ಪಕ್ಷ. ಇಂಥ ಪಕ್ಷವನ್ನು ರಚಿಸುವುದಕ್ಕೆ ಇಲ್ಲಿ ಅವಕಾಶ ಕೊಡಬಾರದಿತ್ತು.
ಸ್ವಾತಂತ್ರ್ಯ ಸಿಕ್ಕಿ 66 ವರ್ಷಗಳೇ ಆದರೂ ಇನ್ನೂ ಸಹ ಬಡವರ ಸಂಖ್ಯೆ ಕಡಿಮೆಯಾಗಿಲ್ಲ. ನಿರುದ್ಯೋಗ ಸಮಸ್ಯೆಗೆ ಹರಿಹಾರವಾಗಿಲ್ಲ. ಕನಿಷ್ಟ ಶುದ್ಧ ಕುಡಿಯುವ ನೀರು, 24 ಗಂಟೆ ವಿದ್ಯುತ್, ಸುವ್ಯವಸ್ಥಿತ ರಸ್ತೆ, ಸೇತುವೆ, ಒಳ ಚರಂಡಿ, ಭೂಮಿ, ಮನೆ ಇತ್ಯಾದಿಗಳನ್ನು ಒದಗಿಸಲು ಸರಕಾರಗಳಿಗೆ ಇದುವರೆಗೂ ಸಾಧ್ಯವಾಗಿಲ್ಲ, ಇದು ಮಹಾ ದುರಂತವಲ್ಲದೆ ಮತ್ತೇನು ?
ಪ್ರಜೆಗಳಿಗೆ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲಾಗದ, ಪ್ರಜೆಗಳಿಗಾಗಿ ಪ್ರಜೆಗಳಿಂದಲೇ ಆಯ್ಕೆಯಾದ ಪ್ರಜೆಗಳೇ ಪ್ರಭುಗಳಾಗಿರುವ ಪಕ್ಷಗಳ ಸರಕಾರಗಳು ತಮ್ಮ ಆಡಳಿತಾವಧಿಯಲ್ಲಿ ಮಾಡಿದ್ದಾದರೂ ಏನು ? ಸಾಧಿಸಿದ್ದೇನು ಕರ್ಮವಾ ? ಮತ್ತೆ ಈಗಲೂ ನಮ್ಮ ಈ ಎರಡೂ ರಾಷ್ಟ್ರೀಯ ಪಕ್ಷಗಳ ಪ್ರಣಾಳಿಕೆಗಳು ಕಸದ ಬುಟ್ಟಿಗೆ ಎಸೆಯಬಹುದಾದಂಥ ಕರಪತ್ರವನ್ನಷ್ಟೇ ಪ್ರಕಟಿಸುವ ಮೂಲಕ ಮತದಾರರನ್ನು ಪುನರಪಿ ಮೂರ್ಖರನ್ನಾಗಿಸುತ್ತಿದೆ ಎಂದರೆ, ಈ ಪಕ್ಷಗಳನ್ನು ಕ್ಷಮಿಸಬೇಕೇ ?
ಸರಕಾರದ ಹಣವೆಂದರೆ, ಅದು ಜನರ ಹಣ. ವಿವಿಧ ತೆರಿಗೆಗಳ ರೂಪದಲ್ಲಿ ಜನರಿಂದ
ಸಂಗ್ರಹಿಸಲ್ಪಟ್ಟ ಹಣದಿಂದಲೇ ಸರಕಾರಗಳು ಹೊಸ ಹೊಸ ಹೆಸರಿನಲ್ಲಿ ಯೋಜನೆಗಳನ್ನು ಜ್ಯಾರಿಗೊಳಿಸುವುದು. ಜನಪ್ರತಿನಿಧಿಗಳು ತಮ್ಮ ಕ್ಷೇತ್ರಗಳಿಗೆ ಇದೇ ಹಣವನ್ನು ತಂದು ಅಭಿವೃದ್ಧಿಯ ಹೆಸರಿನಲ್ಲಿ ಅಗಲವಾದ ರಸ್ತೆಗಳನ್ನು ನಿರ್ಮಿಸುವುದು. ಹೀಗೆ ಮಂಜೂರಾಗುವ ಹಣದಲ್ಲಿಯೇ ತಾನೇ ಕಮಿಷನ್ ಹೊಡೆದು ಉದ್ಯಮಗಳನ್ನು ಸ್ಥಾಪಿಸಿ ಕೊಟ್ಯಧಿಪತಿಯಾಗುವುದು ?
ಕಾಮಗಾರಿ ಮಾಡುವುದೂ ಜನರ ಹಣದಿಂದಲೇ. 66 ವರ್ಷಗಳಿಂದಲೂ ಅದೇ ಕಾಮಗಾರಿಗಳು. ರಸ್ತೆ, ನೀರು, ವಿದ್ಯುತ್, ಒಳಚರಂಡಿ, ಸೇತುವೆ. ಇಂಥ ಅಭಿವೃದ್ಧಿ ಕಾಮಗಾರಿಗಳನ್ನೇ ಇನ್ನೂ ಮಾಡಲಾಗುತ್ತಿದೆ ಎಂದರೆ, ಇನ್ನುಳಿದ ದೂರದೃಷ್ಟಿಯ ಕಾಮಗಾರಿಗಳನ್ನು ಅನುಷ್ಟಾನ ಮಾಡುವುದು ಯಾವಾಗ ? ಇದೇ ಹಣದಿಂದ ಇವರ ಸ್ವ ಅಭಿವೃದ್ಧಿ. ಅದಕ್ಕಾಗಿ ಇವರು ಮತ್ತೆ ಮತ್ತೆ ಜನಪ್ರತಿಧಿಗಳಾಗಬೇಕು, ಮತದಾರರು ತಮ್ಮ ಹಕ್ಕಿನ ಮತದಾನ ಮಾಡಬೇಕು ! ಜನಪ್ರತಿನಿಧಿ ಎನ್ನುವುದೇ ಇಂದು ಭಾರೀ ದೊಡ್ಡ ಉದ್ಯಮವಾಗಿದೆ. ಇಂಥ ಉದ್ಯಮಿಗಳದ್ದೇ ಆಗಿರುವ ಪಕ್ಷಗಳು ಸಹಜವಾಗಿಯೇ ಮತ್ತೆ ಉದ್ಯಮಿಗಳಿನ್ನೇ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಿ ನಾಯಿ ಬಾಲ ಎಂದಿಂದರೂ ಡೊಂಕು ಎನ್ನುವುದನ್ನು ತೋರಿಸಿಕೊಟ್ಟಿದೆ. ಆದರೆ, ಈ ಸತ್ಯ ಗೊತ್ತಿದ್ದರೂ ಮತದಾರ ಪ್ರಭು ಮಾತ್ರ ಯಾಕಿನ್ನೂ ಈ ಉದ್ಯಮಿಗಳನ್ನೇ
ನೆಚ್ಚಿಕೊಂಡಿದ್ದಾನೆ, ಎನ್ನುವುದೇ ಅರ್ಥವಾಗದ ಯಕ್ಷ ಪ್ರಶ್ನೆ.
ಭೂಮಿ ಇಲ್ಲದವರಿಗೆ ಒಂದು ತುಂಡು ಭೂಮಿ, ಸೂರಿಲ್ಲದವರಿಗೆ ಸೂರು, ನಿರುದ್ಯೋಗ ಸಮಸ್ಯೆಗೊಂದು ಶಾಶ್ವತ ಯೋಜನೆ ಕೊಡುವ ಕನಿಷ್ಟ ಕಾರ್ಯಕ್ರಮವನ್ನೂ ಜ್ಯಾರಿಗೆ ತರಲು ಸಾಧ್ಯವಾಗದ ಸರಕಾರಗಳು ಇದ್ದರೆಷ್ಟು, ಇಲ್ಲದಿದ್ದರೆಷ್ಟು ?
ಪ್ರಜೆಗಳಿಂದಲೇ ಸಂಗ್ರಹಿಸಲಾದ ಹಣವನ್ನು ವಿನಿಯೋಗಿಸಿ ಸಾಮಾನ್ಯವಾದ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಟಾನ ಮಾಡಲು ಈ ರಾಷ್ಟ್ರೀಯ ಪಕ್ಷಗಳನ್ನು ಪ್ರತಿನಿಧಿಸುವ ಕೊಟ್ಯಧಿಪತಿಗಳು, ಕ್ರಿಮಿನಲ್ ಹಿನ್ನೆಲೆಯವರೇ ಬೇಕಾ ? ಮತದಾರರಿಗೆ ಹಣ, ಹೆಂಡ, ಸಿಮೆಂಟ್ ಚೀಲ, ಟೈಲರಿಂಗ್ ಮಿಷನ್ ಇತ್ಯಾದಿಗಳನ್ನು ವಿತರಿಸುವ ಸಾಮಥ್ರ್ಯ ಇರುವವರೇ ಆಗಬೇಕಾ ? ಇಂಥ ಸಾಮಾನ್ಯ ಅಭಿವೃದ್ಧಿ ಕಾಮಗಾರಿಗಳನ್ನು ಜ್ಯಾರಿಗೆ ತರಲು ಸರಕಾರಿ ಅಧಿಕಾರಿಗಳು ಸಾಲದೆ ? ಇಷ್ಟನ್ನೇ ಮಾಡಲು ಪಕ್ಷಗಳಲ್ಲಿ ಪ್ರಾಮಾಣಿಕನಾಗಿ ದುಡಿದ, ಸಾಮಾನ್ಯ ಕಾರ್ಯಕರ್ತನಾದ ಒಬ್ಬ ಬಡವನಿಗೆ ಸಾಧ್ಯವಿಲ್ಲವೇ ? ಬಡವನನ್ನು ಯಾಕೆ ಈ ಪಕ್ಷಗಳು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುತ್ತಿಲ್ಲ ?
ಬಡವರಿಗೆ ನೇರ್ಪಿಗೆ ಒಂದು ಪಡಿತರ ಚೀಟಿ ವಿತರಿಸಲು ಸಾಧ್ಯವಾಗುವುದಿಲ್ಲ ಇವರಿಗೆ. ಒಬ್ಬ ಬಡ ಫಲಾನುಭವಿ ತನ್ನ ಹಕ್ಕಿನ ಯೋಜನೆಯನ್ನು ತನ್ನದನ್ನಾಗಿಸಬೇಕಾದರೆ ಆತ ಪಡಬಾರದ ಪಾಡು ಪಡಬೇಕು. ಎಲ್ಲಿ ಹೋದರೂ ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರ.
ಕಳಂಕಿತರಿಗೂ ಈ ಸಲ ಪಕ್ಷದ ಟಿಕೇಟ್ ಸಿಕ್ಕಿದೆ, ಆದರೆ ಸಚಿವ ಸಂಪುಟ ರಚನೆ ಸಮಯದಲ್ಲಿ ಇವರನ್ನು ಹೊರಗಿಡಲಾಗುವುದು ಎಂದು ಕಿಂಚಿತ್ತೂ ನಾಚಿಕೆ, ಮಾನ-ಮಯರ್ಾದೆ ಇಲ್ಲದೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿಕೊಳ್ಳುತ್ತಾರೆ. ಟಿಕೇಟ್ ಪಡೆದುಕೊಳ್ಳಲು ಶಕ್ತರಾದ ಕಳಂಕಿತರು ಸಚಿವ ಸಂಪುಟದಲ್ಲೂ ಸ್ಥಾನ ದಕ್ಕಿಸಿಕೊಳ್ಳಲು ಯಶಸ್ವಿಯಾಗದೇ ಇರಲು ಸಾಧ್ಯವಿಲ್ಲ. ಅದನ್ನು ತಡೆಯಲು ಪರಮೇಶ್ವರ್ಗೆ ಸಾಧ್ಯವಾದೀತು ಎಂದು ನಂಬಿದರೆ ಹಾಗೆ ನಂಬಿದವರು ಮೂರ್ಖರಾಗಬೇಕು, ಅಷ್ಟೆ.
ಇತ್ತೀಚೆಗೆ ಬಹಿರಂಗಗೊಂಡ ಮಾಹಿತಿ ಪ್ರಕಾರ ಕಾಂಗ್ರೆಸ್ ಮತ್ತು ಬಿಜೆಪಿಯ ಬಹುತೇಕ ಅಭ್ಯರ್ಥಿಗಳೂ ಕ್ರಿಮಿನಲ್ ಹಿನ್ನೆಲೆಯವರೇ. ಇವರೆಲ್ಲರೂ ಬಹು ಕೋಟ್ಯಧಿಪತಿಗಳು. ಇವರು ಬಡವರ ಪ್ರತಿನಿಧಿಯಾಗಲು ಸಾಧ್ಯವೇ ಇಲ್ಲ. ಬಿಜೆಪಿ ಸರಕಾರ ಮಹಿಳೆಯರಿಗೆ ಸೀರೆ ವಿತರಿಸಿತು. ಕಾಂಗ್ರೆಸ್ ಸರಕಾರ ಸಿಮೆಂಟ್ ಚೀಲ ವಿತರಿಸಬಹುದು. ಬಡವರು
ಸ್ವಾಭಿಮಾನದಿಂದ, ತಮ್ಮ ಕಾಲ ಮೇಲೆ ತಾವೇ ನಿಲ್ಲಲು ಶಕ್ತವಾಗುವ ರೀತಿಯ ಯಾವ ಕಾರ್ಯಕ್ರಮಗಳೂ ಇವರಲ್ಲಿಲ್ಲ. ಅಂಥ ಉದ್ಧೇಶವಾಗಲಿ, ದೂರದೃಷ್ಟಿಯಾಗಲಿ ಈ
ಪಕ್ಷಗಳಲ್ಲಿಲ್ಲ.
ವಿವಿಧ ಬೇಡಿಕೆ ಮುಂದಿಟ್ಟು ರೈತರು, ಕೃಷಿಕರು, ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಸರಕಾರಿ ನೌಕರರು ಪ್ರತಿಭಟನೆ, ಧರಣಿ, ಮುಷ್ಕರ ನಡೆಸಿಕೊಂಡು ಬರುತ್ತಿದ್ದಾರೆ. ಇವರ ಯಾವ ಬೇಡಿಕೆಗಳನ್ನೂ ಸರಕಾರ ಈಡೇರಿಸುವ ಕಡೆಗೆ ಗಮನ ಕೊಟ್ಟಂತೆ ಕಾಣುವುದೇ ಇಲ್ಲ. ಆದರೆ, ಸರಕಾರ ಶ್ರೀಮಂತ ಉದ್ಯಮಿಗಳಿಗೆ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಪ್ರಯೋಜನವಾಗುವಂಥ ಎಸ್ಇಝೆಡ್ ನಂಥ ಜನ ವಿರೋಧಿ ಯೋಜನೆಗಳನ್ನು ಯಾರ ಯಾವ ಬೇಡಿಕೆಗಳೂ ಇಲ್ಲದಿದ್ದರೂ ಬಹಳ ಆಸಕ್ತಿಯಿಂದ ಜ್ಯಾರಿಗೊಳಿಸುತ್ತಿರುವುದನ್ನು ಗಮನಿಸಿದರೆ ಸಾಕು, ಈ ಪಕ್ಷಗಳ ನಿಜ ಬಣ್ಣ ಅರಿಯಲು.
ಈ ದೇಶ, ಈ ರಾಜ್ಯ ನಿಜವಾದ ಅರ್ಥದಲ್ಲಿ ಉದ್ಧಾರವಾಗಬೇಕಾದರೆ ಮೊತ್ತ ಮೊದಲು ಮತದಾರರು ಇನ್ನಾದರೂ ಪ್ರಬುದ್ಧತೆ, ಪ್ರಜ್ಞಾವಂತಿಕೆಯನ್ನು ಪ್ರದರ್ಶಿಸಲೇಬೇಕು. ಅದು, ಎರಡೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಯಾವುದೇ ಮುಲಾಜೂ ಇಲ್ಲದೆ ತಿರಸ್ಕರಿಸುವ ಮೂಲಕ ಮಾತ್ರ ಸಾಧ್ಯ. ಯಾವುದೇ ಇತರ ಪಕ್ಷಗಳ ಅಥವಾ ಪಕ್ಷೇತರ ಅಭ್ಯರ್ಥಿಗಳನ್ನು ಜನಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡುವ ತುರ್ತು ಇಂದು
ನಿರ್ಮಾಣವಾಗಿದೆ. – ಶ್ರೀರಾಮ ದಿವಾಣ.
ಚುನಾವಣಾ ಆಯೋಗದಿಂದ ತಾರತಮ್ಯ: ವಿಜಯಕುಮಾರ್ ಹೆಗ ್ಡೆ ಆಕ್ರೋಶ
Posted: May 3, 2013 in UncategorizedTags: bjp, congress, Election, jds, karnataka election, udupi district election, vijaykumar hegde
ಉಡುಪಿ: ಅತ್ಯಂತ ಪಾರದರ್ಶಕವಾಗಿ ಚುನಾವಣೆ ನಡೆಸಲಾಗುವುದು ಎಂಬ ಚುನಾವಣಾ ಆಯೋಗದ ಭರವಸೆ ಸುಳ್ಳಾಗಿದೆ. ಪಾರದರ್ಶಕ ಚುನಾವಣೆ ಎನ್ನುವುದು ಕೇವಲ ಆಯೋಗದ ಪುಸ್ತಕಗಳಲ್ಲಿ ಮತ್ತು ಘೋಷಣೆಗಳಿಗೆ ಮಾತ್ರವೇ ಸೀಮಿತವಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಗೆ ಒಂದು ಕಾನೂನಾದರೆ, ಉಳಿದ ಪಕ್ಷಗಳು ಹಾಗೂ ಪಕ್ಷೇತರರಿಗೆ ಇನ್ನೊಂದು ಕಾನೂನು. ಪಕ್ಷೇತರರಿಗೆ ಯಾವುದೇ ರೀತಿಯ ಸೂಕ್ತ ಮಾಹಿತಿಗಳನ್ನು ಒದಗಿಸದೆ, ಸಂಪೂರ್ಣವಾಗಿ ಕಡೆಗಣಿಸುವ ಮೂಲಕ ತಾರತಮ್ಯ ಮಾಡಲಾಗಿದೆ. ಇದು ಬಹುದೊಡ್ಡ ಅನ್ಯಾಯ. ಈ ಎಲ್ಲಾ ಕಾರಣಗಳಿಗಾಗಿ ಕಾಪು ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಂದೂಡುವಂತೆ ಹಕ್ಕೊತ್ತಾಯ ಮಂಡಿಸಿ ವಕೀಲರ ಮೂಲಕ ಕಾಪು ಕ್ಷೇತ್ರದ ಚುನಾವಣಾಧಿಕಾರಿಗೆ ನೋಟೀಸ್ ನೀಡಿದ್ದೇನೆ ಎಂದು ಕಾಪು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ವಿಜಯ ಕುಮಾರ್ ಹೆಗ್ಡೆ ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಮೇ 2 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಈ ಬಾರಿಯ ಚುನಾವಣೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಇಡೀ ಚುನಾವಣಾ ವ್ಯವಸ್ಥೆಯೇ ಕೇವಲ ಮೂರು ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ಗೆ ಅನುಕೂಲ ಮಾಡಿಕೊಡುವಂತೆ ಇದೆ. ಪಕ್ಷೇತರ ಅಭ್ಯರ್ಥಿಗಳು ಮತದಾರರನ್ನು ತಲುಪಲೇಬಾರದು, ಚುನಾವಣಾ ಪ್ರಚಾರ ಕಾರ್ಯವನ್ನೇ ಮಾಡಬಾರದು ಎಂಬಂತೆ ವ್ಯವಸ್ಥೆಯನ್ನು ರೂಪಿಸಲಾಗಿದೆ. ಆಯೋಗವೇ ಸಿದ್ಧಪಡಿಸಿದ ಚುನಾವಣಾ ನೀತಿ ಸಂಹಿತೆಯ ಕಲಂ 8.12 ರಲ್ಲಿ ಕೆಲವು ನಿರ್ಧಿಷ್ಟ ಪಕ್ಷಗಳಿಗೆ ಮಾತ್ರ ಮತದಾರರ ಪಟ್ಟಿಯನ್ನು ಉಚಿತವಾಗಿ ನೀಡಲಾಗುವುದು ಎಂದು
ತಿಳಿಸಲಾಗಿದೆ. ನಾಮಪತ್ರದೊಂದಿಗೆ ಪಕ್ಷೇತರರಿಂದಲೂ ಹತ್ತು ಸಾವಿರ ರು.
ಪಡೆಯಲಾಗುತ್ತದೆ. ಆದರೆ ಪಕ್ಷೇತರರಿಗೆ ಹಣ ನೀಡುವುದಾಗಿ ಹೇಳಿದರೂ ಮತದಾರರ ಪಟ್ಟಿಯನ್ನು ನೀಡದೆ ಬಹುದೊಡ್ಡ ಅನ್ಯಾಯವೆಸಲಾಗಿದೆ ಎಂದು ವಿಜಯಕುಮಾರ್ ಹೆಗ್ಡೆ ಆಯೋಗದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷೇತರ ಅಭ್ಯರ್ಥಿಗಳ ಸ್ವಾತಂತ್ರ್ಯ ಮತ್ತು ಸಂವಿಧಾನಬದ್ಧ ಹಕ್ಕನ್ನೇ ಚುನಾವಣಾ ಆಯೋಗ ಕಸಿದುಕೊಂಡಿದೆ. ನ್ಯಾಯಯುತವಾದ ಚುನಾವಣೆ ಎಂದು ಹೇಳಿಕೊಳ್ಳುತ್ತಲೇ ತಪ್ಪು ಮಾಡುತ್ತಿದೆ. ಹಣ, ಹೆಂಡ ವಸ್ತುಗಳನ್ನು ಯಥಾ ಪ್ರಕಾರ ಹಂಚಲಾಗುತ್ತಿದೆ. ಆದರೆ, ಯಾವನೇ ಒಬ್ಬ ಅಭ್ಯರ್ಥಿಯ ಹೆಸರು ರದ್ಧಾಗಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಶಬ್ದಮಾಲಿನ್ಯ ಆಗಬಾರದೆಂದು ಇದೆ. ಆದರೆ ಗುರುತಿಸಲ್ಪಟ್ಟ ಪಕ್ಷಗಳಿಂದ ಕರ್ಕಶ ಧ್ವನಿವರ್ಧಕ ಕೇಳಿಬರುತ್ತಿದೆ. ಇಂಥದ್ದನ್ನೆಲ್ಲಾ ಕೇಳುವವರೇ ಇಲ್ಲ. ಚುನಾವಣಾ ಆಯೋಗದ ಇಂಥ ಎಲ್ಲಾ ರೀತಿಯ ತಾರತಮ್ಯ ನೀತಿಗಳ ವಿರುದ್ಧ ಉಡುಪಿ ಜಿಲ್ಲಾಧಿಕಾರಿ, ರಾಜ್ಯ ಮತ್ತು ದೇಶದ ಚುನಾವಣಾ ಆಯೋಗದ ಆಯುಕ್ತರಿಗೆ ದೂರು ನೀಡಿದ್ದೇನೆ ಹೆಗ್ಡೆ ತಿಳಿಸಿದರು. ವಿಜಯಕುಮಾರ್ ಹೆಗ್ಡೆಯವರ ಬೆಂಬಲಿಗರಾದ ವಿಲಿಯಂ ಸೋನ್ಸ್, ಪ್ರಶಾಂತ್ ಶೆಟ್ಟಿ, ಓಡಿ ಮುಗೇರ, ಭಾಸ್ಕರ್, ಸತೀಶ್ ಶೆಟ್ಟಿ ಮೊದಲಾದವರು ಮಾಧ್ಯಮಗೋಗೋಷ್ಟಿಯಲ್ಲಿ
ಉಪಸ್ಥಿತರಿದ್ದರು.
ಕಾಂಗ್ರೆಸ್, ಬಿಜೆಪಿ ನಾಯಕರ ಸ್ವಂತ ಅಭಿವೃದ್ಧಿಯ ಾಗಿದೆಯೇ ಹೊರತು ಬಡವರ ಅಭಿವೃದ್ದಿಯಾಗಿಲ್ಲ: ಎಸ್ ಡಿಡ ಿಪಿಐ
Posted: May 1, 2013 in UncategorizedTags: bjp, BSP, cfi, congress, ex mla vasanth v.salian, ex mp vinay kumar sorake, jds, pfi, sdpi
ಉಡುಪಿ: ಇದುವರೆಗೆ ನಮ್ಮನ್ನಾಳಿದ ಕಾಂಗ್ರೆಸ್ ಮತ್ತು ಬಿಜೆಪಿ ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ, ಕಾರ್ಮಿಕರ, ಮಹಿಳೆಯರ, ರೈತರ ಪರವಾಗಿ ನಿಜವಾದ ಕಾಳಜಿಯಿಂದ ನಡೆದಕೊಂಡಿಲ್ಲ. ಬಡವರ, ದೇಶದ, ರಾಜ್ಯದ ಅಭಿವೃದ್ಧಿಯಾಗಿಲ್ಲ. ಜನಪರ ಆಡಳಿತ ನಡೆಸದೆ, ಕೇವಲ ಪಕ್ಷ ರಾಜಕಾರಣವನ್ನಷ್ಟೇ ನಡೆಸಿದೆ. ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಲೇ ಈ ಎರಡೂ ಪಕ್ಷಗಳ ನಾಯಕರು ಸ್ವಂತ ಅಭಿವೃದ್ಧಿ ಸಾಧಿಸಿದ್ದಾರೆ. ತಮ್ಮ ಬಿಸಿನೆಸ್ ಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಎಲ್ಲವೂ ಪತ್ರಿಕಾಹೇಳಿಗೆ, ಪತ್ರಿಕಾಗೋಷ್ಟಿಗೆ
ಸೀಮಿತವಾಗಿದೆ ಎಂದು ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಪ್ ಇಂಡಿಯಾ (ಎಸ್ ಡಿಪಿಐ) ಮಾಜಿ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ರೆಹಮಾನ್ ಮಲ್ಪೆ ಆರೋಪಿಸಿದ್ದಾರೆ. ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಎ.30 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಮಠ, ಮಂದಿರ, ಮಸೀದಿ, ಚರ್ಚು, ಪ್ರಾರ್ಥನಾ ಮಂದಿರಗಳಿಗೆ ಸರಕಾರದ ಹಣ ಬಿಡುಗಡೆ ಮಾಡುವ ಅಗತ್ಯವಿಲ್ಲ. ದೇವರ ಪ್ರಾರ್ಥನೆಗೆ ಬರುವ 90 ಶೇಕಡಾ ಜನರು ಬಡವರು. ಅವರಿಗೆ ಸರಕಾರದ ಹಣದಲ್ಲಿ ನಿರ್ಮಾಣಗೊಳ್ಳುವ ಆಡಂಭರದ, ಭವ್ಯ ಮಹಲುಗಳಿಂದೇನೂ ಪ್ರಯೋಜನವಿಲ್ಲ ಎಂದು ಹೇಳಿದ ಅಬ್ದುಲ್ ರೆಹಮಾನ್, ಎಸ್ ಡಿಪಿಐ ಜನರ ಧಾರ್ಮಿಕ ಭಾವನೆಗಳ ಜೊತೆ
ಚೆಲ್ಲಾಟವಾಡುವುದಿಲ್ಲ ಎಂದು ತಿಳಿಸಿದರು.
ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯಕುಮಾರ್ ಸೊರಕೆ ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರಿದ ವ್ಯಕ್ತಿ, ಅಭ್ಯರ್ಥಿಯಾಗುವ ಮೊದಲು ಸೀಟಿಗಾಗಿ ಪ್ರಯತ್ನ ನಡೆಸಿದ್ದು ಬಿಟ್ಟರೆ ಉಳಿದ ಸಮಯದಲ್ಲಿ ಕಾಂಗ್ರೆಸ್ ಸಿದ್ಧಾಂತಗಳ ಬಗ್ಗೆ ಮಾತಾಡಿದ್ದಾಗಲೀ, ಕೆಲಸ ಮಾಡಿದ್ದಾಗಲಿ ಇಲ್ಲ ಎಂದು ಟೀಕಿಸಿದ ಅಬ್ದುಲ್ ರೆಹಮಾನ್, ಜೆಡಿಎಸ್ ನಿಂದ ಸ್ಪರ್ಧಿಸಿರುವ ವಸಂತ ಸಾಲ್ಯಾನ್ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಅವಕಾಶ ನಿರಾಕರಿಸಲ್ಪಟ್ಟಾಗ ರಾತೋ ರಾತ್ರಿ ಪಕ್ಷಾಂತರ ಮಾಡಿದವರು. ಇವರಿಗೆಲ್ಲ ಸಿದ್ಧಾಂತಗಳೇ ಇಲ್ಲ ಎಂದು ಅಪಾದಿಸಿದರು.
ಎಸ್ ಡಿಪಿಐ ನಾಯಕರ ಜೊತೆ ಮಾತುಕತೆ ನಡೆಸಿದ ಕಾಂಗ್ರೆಸ್ ನ ಆಸ್ಕರ್ ಫೆರ್ನಾಂಡಿಸ್ ಅವರು, ಅಭಿವೃದ್ಧಿ ಬಗ್ಗೆ ಮಾತಾನಾಡುತ್ತಾ, ಅಲ್ಲಿ ಅವರಿಗೆ 3 ಸಾವಿರ ಕೊಟ್ಟಿದ್ದೇನೆ, ಇಲ್ಲಿ ಇವರಿಗೆ 5 ಸಾವಿರ ನೀಡಿದ್ದೇನೆ ಎನ್ನುತ್ತಾರೆ. ಇಂಥವುಗಳೆಲ್ಲ ಅಭಿವೃದ್ಧಿಯೂ ಅಲ್ಲ, ಇದೆಲ್ಲ ನಾಯಕರ ಲಕ್ಷಣವೂ ಅಲ್ಲ. ಅಭಿವೃದ್ಧಿಯ ಕಲ್ಪನೆಯೇ ಇವರಿಲ್ಲಿಲ್ಲ. ಇಂಥ ನಾಯಕರಿಂದ ರಾಜ್ಯ, ದೇಶ ಅಭಿವೃದ್ಧಿ ಕಾಣಲಿದೆಯೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು. ಕಾಪು ಕ್ಷೇತ್ರದಾದ್ಯಂತ ಎಸ್ ಡಿಪಿಐಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಜನ ಈ ಬಾರಿ ಬದಲಾವಣೆ ಬಯಸಿರುವುದು ಸ್ಪಷ್ಟವಾಗಿದೆ. ಈ ಬದಲಾವಣೆ ಎಸ್ ಡಿಪಿಐ. ಉಡುಪಿ ಸಹಿತ ಇತರ ಕ್ಷೇತ್ರಗಳಲ್ಲಿ ಎಸ್ ಡಿಪಿಐ ಬಿಎಸ್ಪಿ ಅಭ್ಯರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದೆ ಎಂದು ಕಾಪು ಅಭ್ಯರ್ಥಿ ಅಬ್ದುಲ್ ಹಕೀಂ ಹೇಳಿದರು.
ಎಸ್ ಡಿಪಿಐ ಮುಖಂಡರಾದ ನಿಯಾಮತ್ ಅಲಿ, ಹಸೈನಾರ್ ಕಟಪಾಡಿ, ರಫೀಕ್ ಮುಲ್ಲಾ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ: ಕಾಂಗ್ರೆಸ್, ಬಿಜೆಪಿ ಸೋಲಿಸಲು ಮತದಾರರಿಗ ೆ ಸಿಪಿಐಎಂ ಕರೆ
Posted: April 30, 2013 in UncategorizedTags: aituc, bjp, citu, congress, cpim, cpm, dyfi, Election, jds, karnataka election, sfi, udupi election, udupibits, udupibits.com, www.udupibits.com
ಉಡುಪಿ: ಭ್ರಷ್ಟ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸುವಂತೆ ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ನಿತ್ಯಾಣದ ಸ್ವಾಮಿ ಮತದಾರರಿಗೆ ಕರೆ ನೀಡಿದ್ದಾರೆ. ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಎ.30 ರಂದು ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು.
ಸಿಪಿಐಎಂ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸದ ಕ್ಷೇತ್ರಗಳಲ್ಲಿ ಸಿಪಿಐ, ಫಾರ್ವರ್ಡ್ ಬ್ಲಾಕ್, ಲೋಕಸತ್ತಾ ಮತ್ತು ಸರ್ವೋದಯ ಕರ್ನಾಟಕ ಪಕ್ಷಗಳ ಅಭ್ಯರ್ಥಿಗಳನ್ನು ಬೆಂಬಲಿಸಲು ಪಕ್ಷ ರಾಜ್ಯ ಮಟ್ಟದಲ್ಲಿ ನಿರ್ಧರಿಸಿದೆ ಎಂದು ಸ್ವಾಮಿ ತಿಳಿಸಿದರು.
ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐಎಂ ಪಕ್ಷದಿಂದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮತ್ತು ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ.ಶಂಕರ್ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಬಗ್ಗೆ ಭ್ರಮನಿರಸನಗೊಂಡಿರುವ ಬೈಂದೂರು ಕ್ಷೇತ್ರದ ಮತದಾರರು, ಇಲ್ಲಿ ಕೆ.ಶಂಕರ್ ಅವರ ಕಡೆ ಹೆಚ್ಚಿನ ಒಲವು ವ್ಯಕ್ತಪಡಿಸುತ್ತಿದ್ದಾರೆ. ಬಡ ಕಾರ್ಮಿಕರು, ನಿವೇಶನರಹಿತರು, ಪಡಿತರ ಚೀತಿ ವಂಚಿತರು ಮೊದಲಾದವರ ಬಗ್ಗೆ ಪಕ್ಷ ನಡೆಸುತ್ತಿರುವ ಹೋರಾಟವನ್ನು ಇಲ್ಲಿನ ಮತದಾರರು
ಗಮನಿಸಿದ್ದಾರೆ ಎಂದು ನಿತ್ಯಾನಂದ ಸ್ವಾಮಿ ಹೇಳಿದರು.
ಉಡುಪಿ, ಕಾಪು, ಕಾರ್ಕಳ ಮತ್ತು ಕುಂದಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿದ್ದು, ಇಲ್ಲೆಲ್ಲಾ ಭ್ರಷ್ಟ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸಲು ಜೆಡಿಎಸ್ ಅಭ್ಯರ್ಥಿಗಳನ್ನು
ಬೆಂಬಲಿಸುವಂತೆ ಸಿಪಿಐಎಂ ಮತದಾರರನ್ನು ವಿನಂತಿಸಿದೆ.
ಸಿಪಿಐಎಂ ಪಕ್ಷ ಉಡುಪಿ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಲು ಕರೆ ನೀಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ದೊಡ್ಡ ಸಂಕಟವಾಗಿದೆ. ಈ ಹಿಂದಿನ ಬಹುತೇಕ ಚುನಾವಣೆಯಲ್ಲಿ ಸಿಪಿಐಎಂ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಬಿಜೆಪಿ ಸೋಲಿಸುವ ಉದ್ಧೇಶದೊಂದಿಗೆ ಕಾಂಗ್ರೆಸ್ ಗೆ ಮತ ಹಾಕುತ್ತಿದ್ದರು. ಆದರೆ, ಈ ಬಾರಿ ಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡನ್ನೂ ಸೋಲಿಸಲು ಕರೆ ನೀಡಿದ ಕಾರಣ ಈ ಬಾರಿ ಇದು ಮುಖ್ಯವಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಕಗ್ಗಂಟಾಗಿ ಪರಿಣಮಿಸಲಿದೆ.
ಬೈಂದೂರು ಕ್ಷೇತ್ರದ ಅಭ್ಯರ್ಥಿ ಕೆ.ಶಂಕರ್ ಹಾಗೂ ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಬಾಲಕೃಷ್ಣ ಶೆಟ್ಟಿ ಮಾಧ್ಯಮಗೋಷ್ಟಿಯಲ್ಲಿ ಉಪಸ್ಥಿತರಿದ್ದರು.












