ಉಡುಪಿ: ಜೆಡಿಎಸ್ ಪಕ್ಷದ ುಡುಪಿ ಜಿಲ್ಲಾ ಕಾರ್ಯಾಧ್ಯಕ್ಷ ಗುಲಾಂ ಮಹಮ್ಮದ್ ಅವರನ್ನು ಬೆಂಗಳೂರಿನ ಸಿಸಿಬಿ ಪೋಲೀಸರು ಇಂದು ಬೆಳಗ್ಗೆ ಬಿಡುಗಡೆಗೊಳಿಸಿದ್ದಾರೆ.
ಕುಖ್ಯಾತ ಭೂಗತ ಲೋಕದ ದೊರೆ ರವಿ ಪೂಜಾರಿಯ ಸಂಪರ್ಕ ಇದೆ ಎಂದು ಆರೋಪ ಹೊರಿಸಿ ಸೋಮವಾರ ಬೆಳಗ್ಗೆ 10 ಗಂಟೆಗೆ ಗುಲಾಂ ಅವರನ್ನು ಅವರ ಹೆಜಮಾಡಿಯಲ್ಲಿರುವ ನಿವಾಸದಿಂದ ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದರು ಸಿಸಿಬಿ ಪೋಲೀಸರು.
ಒಂದಿಡೀ ದಿನ ವಿಚಾರಣೆ ನಡೆಸಿದ ಪೋಲಿಸರು ಬುಧವಾರ ಬೆಳಗ್ಗೆ ಬಿಡುಗಡೆಗೊಳಿಸಿದರು.
ಹೀಗೆ ಬಿಡುಗಡೆಗೊಳಿಸುವುದಾದರೆ, ಬಂಧಿಸುವ ಅಗತ್ಯವಿತ್ತೇ ?, ಕೇವಲ ವಿಚಾರಣೆ ನಡೆಸುವುದು ಮಾತ್ರ ಉದ್ದೇಶವಾಗಿತ್ತು ಎಂದಾದರೆ, ಹೆಜಮಾಡಿಯಲ್ಲಿರುವ ಅವರ ನಿವಾಸದಲ್ಲಿಯೇ ವಿಚಾರಣೆ ನಡೆಸಬಹುದಿತ್ತಲ್ಲ ? ಎಂಬೆಲ್ಲ ಪ್ರಶ್ನೆಗಳು ಇದೀಗ ಉದ್ಬವಿಸಿದ್ದು, ಪೋಲೀಸರೇ ಉತ್ತರಿಸಬೇಕಾಗಿದೆ.
Posts Tagged ‘bangalore police’
ಗುಲಾಂ ಮಹಮ್ಮದ್ ಬಿಡುಗಡೆ
Posted: February 8, 2012 in UncategorizedTags: bangalore, bangalore police, ccb, ccb police, deviprasad shetty, gulam mahammad, H.D. Deve gowda, h.d.kumaraswamy, jds, news, police, ravi pujary, udupi, udupi news, udupibits
0
ಭೂಗತ ಲೋಕದ ಪ್ರಕರಣ: ಜೆಡಿಎಸ್ ನಾಯಕನ ಬಂಧನ
Posted: February 6, 2012 in UncategorizedTags: : mangalore, bangalore police, H.D. Deve gowda, h.d.kumaraswamy, jds, news, police, udupi, udupi police, udupibits, udupinews
ಉಡುಪಿ: ಜೆಡಿಎಸ್ ಪಕ್ಷದ ಉಡುಪಿ ಜಿಲ್ಲಾಧ್ಯಕ್ಷ ಗುಲಾಂ ಮುಹಮ್ಮದ್ ಅವರನ್ನು ಬೆಂಗಳೂರಿನ ಸಿಸಿಬಿ ಪೋಲೀಸರು ಭೂಗತ ಲೋಕದ ಪ್ರಕರಣಕ್ಕೆ ಸಂಬಂಧಿಸಿದಂತೆ ಜ.6 ರಂದು ಬೆಳಗ್ಗೆ ಹೆಜಮಾಡಿಯಲ್ಲಿರುವ ಅವರ ನಿವಾಸದಿಂದ ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.
ಉದ್ಯಮಿಯಾಗಿದ್ದ ಗುಲಾಂ ಅವರನ್ನು ಕೆಲವು ತಿಂಗಳುಗಳ ಹಿಂದೆಯಷ್ಟೇ ಪಕ್ಷದ ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿ ಹಾಗೂ ರಾಷ್ಟ್ರಾಧ್ಯಕ್ಷರಾದ ದೇವೇಗೌಡರು ಜೆಡಿಎಸ್ ಪಕ್ಷ ಉಡುಪಿ ಜಿಲ್ಲಾ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.
ಗುಲಾಂ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸಲು ಎರಡು ಬಾರಿ ಬೃಹತ್ ಸಮಾವೇಶವನ್ನು ಯಶಸ್ವಿಯಾಗಿ ಸಂಘಟಿಸಿದ್ದರು. ವರದಿ: ಶ್ರೀರಾಮ ದಿವಾಣ.

