ಉಡುಪಿ: ನೂತನವಾಗಿ ಅಸ್ತಿತ್ವಕ್ಕೆ ಬಂದ ರಂಗೋಲಿ ಕಲಾ ಪರಿಷತ್ತಿನ ಉದ್ಘಾಟನಾ ಸಮಾರಂಭ ಮತ್ತು ಕರಾವಳಿ ಕರ್ನಾಟಕದ ರಂಗೋಲಿ ಕಲೆ ಬಗ್ಗೆ ರಚಿಸಿದ ಸಂಶೋಧನಾ ಗ್ರಂಥದ ಬಿಡುಗಡೆ (ರಚನೆ: ಭಾರತಿ ಮರವಂತೆ) ಸಮಾರಂಭವು ಎ.17 ರಂದು ಸಂಜೆ 4 ಗಂಟೆಗೆ ಉಡುಪಿ ಶ್ರೀಕೃಷ್ಣ ದೇವಾಲಯದ ಕನಕ ಮಂಟಪದಲ್ಲಿ ನಡೆಯಲಿದೆ ಎಂದು ಪರಿಷತ್ತಿನ ಕಾರ್ಯದರ್ಶಿ ಡಾ.ಭಾರತಿ ಮರವಂತೆ ಅವರು ತಿಳಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಬೆಳಗ್ಗೆ ನಡೆಸಿದ ಮಾಧ್ಯಮಗೋಷ್ಟಿಯಲ್ಲಿ ಅವರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಮಧ್ಯಾಹ್ನ ಗಂಟೆ 2.45 ರಿಂದ ನಾದ ವೈಭವಂ ವಾಸುದೇವ ಭಟ್ ಅವರಿಂದ ವಾದಿರಾಜ ಕೀರ್ತನೆಗಳ ಗಾಯನ ನಡೆಯಲಿದೆ. ಗ್ರಂಥವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ಕಾ.ತ.ಚಿಕ್ಕಣ್ಣ ಅವರು ಬಿಡುಗಡೆ ಮಾಡಲಿದ್ದಾರೆ. ಜಾನಪದ ಕಲೆಯಾದ ರಂಗೋಲಿ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗ. ರಂಗೋಲಿ ಜೊತೆಗೆ ಬೆಳಗ್ಗೆ ನಮ್ಮ ಬಾಳು ಆರಂಭವಾಗುತ್ತೆ. ರಂಗೋಲಿಗೆ ವೈಜ್ಙಾನಿಕ ಹಿನ್ನೆಲೆಯೂ ಇದೆ. ಇದಕ್ಕಾಗಿ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬರುತ್ತಿರುವುದು ಇದೇ ಮೊದಲು ಎಂದು ಡಾ.ಭಾರತಿ ತಿಳಿಸಿದರು.
ಮಾಧ್ಯಮಗೋಷ್ಟಿಯಲ್ಲಿ ರಂಗೋಲಿ ಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ.ಕನರಾಡಿ ವಾದಿರಾಜ ಭಟ್ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಲಕ್ಷ್ಮೀ ಬಾಯಿ ಇವರು ಉಪಸ್ಥಿತರಿದ್ದರು.

ಎ.17: ರಂಗೋಲಿ ಕಲಾ ಪರಿಷತ್ತು ಉದ್ಘಾಟನೆ
Posted: April 13, 2012 in UncategorizedTags: ರಂಗೋಲಿ ಕಲಾ ಪರಿಷತ್ತು, dr.bharathi maravanthe, dr.kanaradi vadiraja bhat, ka.tha.chikkanna, lakshmi bayi, news, rangoli, udupi, udupibits, udupinews
0