ನಮಗೆ ಬದುಕುವ ಹಕ್ಕು ಕೊಟ್ಟವರು ಸೋನಿಯಾ ಗಾಂಧಿ: ಆಸ್ಕರ್ ಫೆರ್ನಾಂಡಿಸ್ ಹಾಸ್ಯಸ್ಪದ ಭಾಷಣ..

Posted: March 4, 2012 in Uncategorized
Tags: , , , , , , , , , , , , ,

ಉಡುಪಿ: ಸೋನಿಯಾ ಗಾಂಧಿಯವರು ನಮಗೆ ಬದುಕುವ ಹಕ್ಕನ್ನು ಕೊಟ್ಟಿದ್ದಾರೆ, ರಾಹುಲ್ ಗಾಂಧಿಯವರು ಉತ್ತರ ಪ್ರದೇಶದ ಜನರಿಗೆ ಜೀವದ ಭದ್ರತೆಯನ್ನು ಒದಗಿಸಿದ್ದಾರೆ..
ಹೀಗೊಂದು ಹಾಸ್ಯಸ್ಪದ ಭಾಷಣ ಮಾಡಿದ್ದಾರೆ, ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಏಐಸಿಸಿ) ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಸಭಾ ಸದಸ್ಯ ಮತ್ತು ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ಮತ್ತು ಮಾನವ ಹಕ್ಕು ವಿಭಾಗದ ವತಿಯಿಂದ ಮಾ.4 ರಂದು ಸಂಜೆ ಉಡುಪಿ ಬ್ರಹ್ಮಗಿರಿಯ ನಾಯರ್ ಕೆರೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ನಡೆದ ಸಮಾವೇಶವನ್ನು ಶಂಖ ಊದುವ ಮೂಲಕ ಉದ್ಘಾಟಿಸಿ ಆಸ್ಕರ್ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಆಸ್ಕರ್ ಅವರು ಮಾನವಹಕ್ಕು ವಿಭಾಗದ ರಾಜ್ಯ ಸಮಿತಿಯು ಪ್ರಕಟಿಸಿದ ಬಿಜೆಪಿ ವಿರೋಧಿ ಕರಪತ್ರವನ್ನು ಬಿಡುಗಡೆಗೊಳಿಸಿದರು.
ಸಂಘಟಕರು ಶಂಖ ಊದಿ ಸಮಾವೇಶವನ್ನು ಉದ್ಘಾಟಿಸುವ ವ್ಯವಸ್ಥೆ ಮಾಡಿದ್ದರು. ವೇದಿಕೆಯಲ್ಲಿದ್ದ ಪ್ರಮುಖರಿಗೆ ಶಂಖಗಳನ್ನು ನೀಡಿದ್ದರು. ಆದರೆ, ಯಾವ ನಾಯಕರಿಗೂ ಸರಿಯಾಗಿ ಶಂಖವನ್ನು ಊದಲು ಸಾಧ್ಯವಾಗಲೇ ಇಲ್ಲ.
ಹಾಸ್ಯಸ್ಪದ ಹೇಳಿಕೆ ನೀಡಿದ ಕಾರಣಕ್ಕೋ ಎಂಬಂತೆ, ಸಮಾವೇಶ ಮುಗಿದ ಬಳಿಕ ಕಾಂಗ್ರೆಸ್ ಭವನದ ಹೊರಗಡೆ ಪ್ರಚಾರ ಅಭಿಯಾನವನ್ನು ಸಾಂಕೇತಿಕವಾಗಿ ಉದ್ಘಾಟಿಸುವ ಸಮಯದಲ್ಲಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಆಸ್ಕರ್ ಫೆರ್ನಾಂಡಿಸ್ ಅವರಿಗೆ ಧಿಕ್ಕಾರವನ್ನೂ ಕೂಗಿದರು. ಮೊದಲಿಗೆ ಕಾರ್ಯಕರ್ತರು ಬಿಜೆಪಿಗೆ ಧಿಕ್ಕಾರ ಕೂಗುತ್ತಿದ್ದರು. ಬಳಿಕ ಆಸ್ಕರ್ ಗೆ ಜಯಕಾರ ಕೂಗುವ ಬದಲು ಧಿಕ್ಕಾರವನ್ನು ಕೂಗಿದರು.
ಸಂಘಟಕರು ಮೊದಲಿಗೆ ರೋಡ್ ಶೋ ನಡೆಸುವುದಾಗಿ ಪ್ರಕಟಿಸಿದ್ದರು. ಆದರೆ, ಆಸ್ಕರ್ ಅವರು ರೋಡ್ ಶೋಗೆ ಸಕರಾತ್ಮಕವಾಗಿ ಸ್ಪಂದಿಸದ ಕಾರಣ ಕೊನೆಗೆ ಭವನದ ಹೊರಗಡೆ ಕಾರ್ಯಕರ್ತರೊಬ್ಬರಿಗೆ ಪ್ರಚಾರ ಕರಪತ್ರವನ್ನು ನೀಡಿ ಸಾಂಕೇತಿಕವಾಗಿ ಅಭಿಯಾನಕ್ಕೆ ಚಾಲನೆ ನೀಡಿದರು.
ಸಮಾವೇಶದಲ್ಲಿ ಏಐಸಿಸಿ ಪ್ರಧಾನ ಕಾರ್ಯದರ್ಶಿ ಮೇಜರ್ ವೇದಪ್ರಕಾಶ್, ಅಮೇರಿಕಾದಲ್ಲಿನ ಕಾಂಗ್ರೆಸ್ ನಾಯಕ ಮೊಹಿಂದರ್ ಸಿಂಘ್, ಪಕ್ಷದ ನಾಯಕರುಗಳಾದ ಶ್ಯಾಮಲಾ ಭಂಡಾರಿ, ಎಂ.ಎ.ಗಫೂರ್, ರಂಜಿತ್ ಥೋಮಸ್, ಶ್ರೀಮತಿ ಬ್ಲೋಸಂ ಫೆರ್ನಾಂಡಿಸ್, ಕೆ.ಪಿ.ನಂಜುಂಡಿ, ಉಡುಪಿ ಬಾರ್ ಅಸೋಸಿಯೇಶನಿನ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಸಿ.ಎಂ.ಧನಂಜಯ, ಎ.ಜಿ.ಶಿವಣ್ಣ, ಸಂದೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s