ಉಡುಪಿ: ಇಲ್ಲಿನ ಬಳಕೆದಾರರ ವೇದಿಕೆ ಪ್ರಮುಖರು ಡಿ.30 ರಂದು ವೇದಿಕೆಯ ಕಚೇರಿಯಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಹಸಿ ಹಸಿ ಸುಳ್ಳು ಮಾಹಿತಿ ನೀಡಿರುವುದು ದಾಖಲಾತಿಗಳ ಸಹಿತ ಬಹಿರಂಗಗೊಂಡಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಬಳಕೆದಾರರ ವೇದಿಕೆಯ ಟ್ರಸ್ಟ್ ಗಳಲ್ಲಿ ಒಬ್ಬರಾದ ಎ.ಪಿ.ಕೊಡಂಚ ಎಂಬವರು, ವೇದಿಕೆಗೆ ಇದುವರೆಗೆ ಸರಕಾರದಿಂದ ಯಾವುದೇ ರೀತಿಯ ಅನುದಾನವೂ ಬಂದಿಲ್ಲ ಎಂದು ತಿಳಿಸಿದ್ದರು.
ಆದರೆ, udupibits.com ಗೆ ಲಭಿಸಿದ ದಾಖಲಾತಿಗಳ ಪ್ರಕಾರ ಬಳಕೆದಾರರ ವೇದಿಕೆಗೆ 5 ಲಕ್ಷ ರು. ಗಳಂತೆ ಕನಿಷ್ಠ ಎರಡು ಬಾರಿ ಒಟ್ಟು 10 ಲಕ್ಷ ರು. ಅನುದಾನ ಸರಕಾರದಿಂದ ಬಿಡುಗಡೆಯಾಗಿದೆ.
ಕೇಂದ್ರ ಸರಕಾರದ ನಾಗರಿಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ಸರಬರಾಜು ಇಲಾಖೆಯು ಸೆಂಟ್ರಲ್ ಬ್ಯಾಂಕ್ ಮೂಲಕ 2003 ಮತ್ತು 2006 ರಲ್ಲಿ ಉಡುಪಿ ಬಳಕೆದಾರರ ವೇದಿಕೆಗೆ ಹಣ ಬಿಡುಗಡೆ ಮಾಡಿದೆ. ಈ ಹಣವನ್ನು ವೇದಿಕೆಯ ಅಧ್ಯಕ್ಷರಾದ ಕೆ.ದಾಮೋದರ ಐತಾಳ್ ಅವರು ಪಡೆದುಕೊಂಡಿದ್ದಾರೆ.
ಒಂದು ಬಾರಿ 2.50 ಲಕ್ಷ ರು., ಎರಡನೇ ಬಾರಿ 1.75 ಲಕ್ಷ ರು. ಮತ್ತು ಮೂರನೇ ಬಾರಿ 75 ಸಾವಿರ ರು. ಹೀಗೆ ಮೊದಲ ಸಲ ಮೂರು ಪ್ರತ್ಯೇಕ ಕಂತುಗಳಲ್ಲಿ ಕೇಂದ್ರ ಸರಕಾರವು ಉಡುಪಿ ಬಳಕೆದಾರರ ವೇದಿಕೆಗೆ ಅನುದಾನವನ್ನು ಬಿಡುಗಡೆ ಮಾಡಿತ್ತು.
ಎರಡನೇ ಸಲವೂ ಕೇಂದ್ರ ಸರಕಾರವು ಬಳಕೆದಾರರ ವೇದಿಕೆಗೆ ಇದೆ ರೀತಿಯಾಗಿ ಅನುದಾನವನ್ನು ಬಿಡುಗಡೆಮಾಡಿತ್ತು. ಬಳಕೆದಾರರ ವೇದಿಕೆಗೆ 10 ಲಕ್ಷಕ್ಕೂ ಅಧಿಕ ಹಣ ಬಿದುಗದೆಯಾಗಿದೆಯಾದರೂ, ವೇದಿಕೆಯ ಪ್ರಮುಖರು ಯಾಕೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ.
ಉಡುಪಿ ಬಳಕೆದಾರರ ವೇದಿಕೆಯಿಂದ ಸುಳ್ಳು ಮಾಹಿತಿ
Posted: January 3, 2012 in UncategorizedTags: anna hajary, aravinda kejrival, balakedaarara vedike, hosa digantha, jaya kirana, jilla grahakara mahithi kendra, kannada prabha, karavali ale, karnataka daily news, kiran bedy, news, prajavani, rti, samyuktha karnataka, sanje vani, santhosh hegde, udayavani, udupi, udupi news, udupi police, udupibits, vartha bharathi, vijaya karnataka
0